Team India : ಬಾಂಗ್ಲಾ ಸರಣಿಯಿಂದ ರೋಹಿತ್ ಔಟ್? ಬಿಗ್ ಅಪ್‌ಡೇಟ್ ನೀಡಿದ ಜಯ್ ಶಾ

Jay Shah On Rohit Sharma : ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧದ ಕೊನೆಯ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಎರಡನೇ ಏಕದಿನ ಪಂದ್ಯದ ವೇಳೆ ಹೆಬ್ಬೆರಳಿಗೆ ಗಂಭೀರ ಗಾಯವಾಗಿತ್ತು.

Written by - Channabasava A Kashinakunti | Last Updated : Dec 9, 2022, 03:12 PM IST
  • ರೋಹಿತ್ ಗಾಯದ ಬಗ್ಗೆ ಜಯ್ ಶಾ ಈ ಮಾಹಿತಿ
  • ಈ ಇಬ್ಬರು ಆಟಗಾರರು ಶೀಘ್ರದಲ್ಲೇ ಎನ್‌ಸಿಎಗೆ
  • ಈ ಆಟಗಾರನಿಗೆ ಟೆಸ್ಟ್‌ ನಾಯಕತ್ವ ಪಟ್ಟ
Team India : ಬಾಂಗ್ಲಾ ಸರಣಿಯಿಂದ ರೋಹಿತ್ ಔಟ್? ಬಿಗ್ ಅಪ್‌ಡೇಟ್ ನೀಡಿದ ಜಯ್ ಶಾ title=

Jay Shah On Rohit Sharma : ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧದ ಕೊನೆಯ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಎರಡನೇ ಏಕದಿನ ಪಂದ್ಯದ ವೇಳೆ ಹೆಬ್ಬೆರಳಿಗೆ ಗಂಭೀರ ಗಾಯವಾಗಿತ್ತು. ಹೀಗಾಗಿ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಉಭಯ ತಂಡಗಳ ನಡುವೆ ನಡೆಯಲಿರುವ ಟೆಸ್ಟ್ ಸರಣಿಯ ಭಾಗವಾಗುತ್ತಾರೋ ಇಲ್ಲವೋ ಎಂಬ ಅನುಮಾನದ ಭಾರತೀಯ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಜಯ್ ಶಾ ಬಿಗ್ ಅಪ್‌ಡೇಟ್ ಒಂದನ್ನ ನೀಡಿದ್ದಾರೆ.

ರೋಹಿತ್ ಗಾಯದ ಬಗ್ಗೆ ಜಯ್ ಶಾ ಈ ಮಾಹಿತಿ

ಈ ಬಗ್ಗೆ ಮಾಹಿತಿ ನೀಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಗಾಯಗೊಂಡಿರುವ ನಾಯಕ ರೋಹಿತ್ ಶರ್ಮಾ ಅವರನ್ನು ಆಡುವ ಬಗ್ಗೆ ಆಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಸಧ್ಯ ಬಿಸಿಸಿಐ ವೈದ್ಯಕೀಯ ತಂಡ ಅವರನ್ನು ಪರೀಕ್ಷಿಸಿದೆ. ಅವರನ್ನು ಢಾಕಾದ ಸ್ಥಳೀಯ ಆಸ್ಪತ್ರೆಯಲ್ಲಿ ಅವರ ಕೈ ಬೆರಳನ್ನು ಸ್ಕ್ಯಾನ್ ಮಾಡಲಾಗಿದೆ. ಸ್ಕ್ಯಾನ್ ರಿಪೋರ್ಟ್ ಅನ್ನು ತಜ್ಞರಿಗೆ ತೋರಿಸಲು ಮುಂಬೈಗೆ ತೆಗೆದುಕೊಂಡು ಹೋಗಲಾಗಿದೆ. ಕೊನೆಯ ಏಕದಿನ ಪಂದ್ಯವನ್ನು ಆಡುವುದಿಲ್ಲ. ಆದ್ರೆ, ಟೆಸ್ಟ್ ಸರಣಿಯಲ್ಲಿ ಆಡುವ ಬಗ್ಗೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬಾಲ್ ಕ್ಯಾಚ್ ಹಿಡಿಯಲು ಹೋಗಿ ಹಲ್ಲು ಮುರಿದುಕೊಂಡ ಆಟಗಾರ! Video ನೋಡಿ

ಈ ಇಬ್ಬರು ಆಟಗಾರರು ಶೀಘ್ರದಲ್ಲೇ ಎನ್‌ಸಿಎಗೆ

ಈ ಇಬ್ಬರ ಆಟಗಾರ ಬಗ್ಗೆ ಮಾಹಿತಿ ನೀಡಿದ ಜಯ್ ಶಾ, ಗಾಯಗೊಂಡಿರುವ ವೇಗದ ಬೌಲರ್‌ಗಳಾದ ದೀಪಕ್ ಚಹಾರ್ ಮತ್ತು ಕುಲದೀಪ್ ಸೇನ್ ಅವರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹೋಗಲು ಬಿಸಿಸಿಐ ಹೇಳಿದೆ. ಈ ಇಬ್ಬರೂ ಆಟಗಾರರು ಗಾಯಗೊಂಡಿದ್ದಾರೆ. ಮೊದಲ ಏಕದಿನ ಪಂದ್ಯದ ನಂತರ ವೇಗದ ಬೌಲರ್ ಕುಲದೀಪ್ ಸೇನ್ ಸೊಂಟದ ನೋವಿನ ಬಗ್ಗೆ ಅಳಲು ಹೇಳಿಕೊಂಡಿದ್ದರು. ಹೀಗಾಗಿ ಅವರನ್ನು ಬಿಸಿಸಿಐ ವೈದ್ಯಕೀಯ ತಂಡ ವಿಶ್ರಾಂತಿಗೆ ಸೂಚಿಸಿದೆ. ಸರಣಿಯಲ್ಲಿ  ಅವರಿಗೆ ಆಡಲು ಆಡಲು ಸಾಧ್ಯವಿಲ್ಲ. ಎರಡನೇ ಏಕದಿನ ಪಂದ್ಯದ ವೇಳೆ ವೇಗದ ಬೌಲರ್ ದೀಪಕ್ ಚಹಾರ್ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದು, ಸರಣಿಯಿಂದ ಹೊರಗುಳಿದಿದ್ದಾರೆ. ಇಬ್ಬರೂ ಈಗ ಎನ್‌ಸಿಎಗೆ ಹೋಗಿ ಚಿಕಿತ್ಸೆ ಪಡೆಯಲಿದ್ದಾರೆ.

ಈ ಆಟಗಾರನಿಗೆ ಟೆಸ್ಟ್‌ ನಾಯಕತ್ವ ಪಟ್ಟ

ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಹೊರಗುಳಿದರೆ, ಬ್ಯಾಟ್ಸಮನ್ ಕೆಎಲ್ ರಾಹುಲ್ ಅವರ ಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು. ಕೊನೆಯ ಏಕದಿನ ಪಂದ್ಯಕ್ಕೂ ಕೆಎಲ್ ರಾಹುಲ್ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಕೆಎಲ್ ರಾಹುಲ್ ಇಲ್ಲಿಯವರೆಗೆ ಒಂದು ಪಂದ್ಯದಲ್ಲಿ ತಂಡದ ನಾಯಕರಾಗಿದ್ದರು. ಆದರೆ ಆ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿತ್ತು.

ಇದನ್ನೂ ಓದಿ : Virender Sehwag : ಟೀಂ ಇಂಡಿಯಾ ಹೀನಾಯ ಸೋಲನ್ನು ಲೇವಡಿ ಮಾಡಿದ ವೀರೇಂದ್ರ ಸೆಹ್ವಾಗ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News