Ind VS ENG : ವಿರಾಟ್ ಕೊಹ್ಲಿ ಡಕ್ ಔಟ್ : ಸೊಶಿಯಲ್ ಮಿಡಿಯಾದಲ್ಲಿ ಶುರುವಾಯ್ತು Memes
ಪ್ರಸ್ತುತ ಸರಣಿಯಲ್ಲಿ, ಕೊಹ್ಲಿಯದ್ದು ಇದು ಎರಡನೇ ಶೂನ್ಯ ಸಂಪಾದನೆ. ಇದಕ್ಕೂ ಮೊದಲು ಚೆನ್ನೈನಲ್ಲಿ ಆಡಿದ ಎರಡನೇ ಟೆಸ್ಟ್ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ 11, 72, 0, 62, 27, 0 ರನ್ ಗಳಿಸಿದ್ದಾರೆ.
ಅಹಮದಾಬಾದ್: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಮೈದಾನದಲ್ಲಿ ತಮ್ಮ ವಿರಾಟ ರೂಪ ಪ್ರದರ್ಶಿಸುವಲ್ಲಿ ಮತ್ತೊಮ್ಮೆ ವಿಫಲರಾಗಿದ್ದಾರೆ. ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಬೆನ್ ಸ್ಟ್ರೋಕ್ಸ್ ಗೆ (Ben Stokes)ವಿಕೆಟ್ ಒಪ್ಪಿಸಿ ಕೊಹ್ಲಿ ಪೆವಿಲಿಯನ್ ಗೆ ಮರಳಿದ್ದಾರೆ.
ಸೊಶಿಯಲ್ ಮಿಡಿಯಾದಲ್ಲಿ ಕೊಹ್ಲಿ ಜೋಕ್ :
ಪ್ರಸ್ತುತ ಸರಣಿಯಲ್ಲಿ, ಕೊಹ್ಲಿಯದ್ದು ಇದು ಎರಡನೇ ಶೂನ್ಯ ಸಂಪಾದನೆ. ಇದಕ್ಕೂ ಮೊದಲು ಚೆನ್ನೈನಲ್ಲಿ (Chennai) ಆಡಿದ ಎರಡನೇ ಟೆಸ್ಟ್ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ (Virat Kohli) 11, 72, 0, 62, 27, 0 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಈ ಬಾರಿ ಸೊನ್ನೆಗೆ ಔಟಾಗುತ್ತಿದ್ದಂತೆ, ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ (social media) ಕೊಹ್ಲಿ ಮೇಲೆ ಜೋಕ್ ಗಳನ್ನು ಮಾಡಿ ಹರಿಬಿಟ್ಟಿದ್ದಾರೆ.
'ಭಾರತದ ನೆಲದಲ್ಲಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಅಷ್ಟು ಚೆನ್ನಾಗಿಲ್ಲ'
ವಿರಾಟ್ ಕೊಹ್ಲಿಯ 71ನೇ ಶತಕಕ್ಕಾಗಿ ಕಾಯುತ್ತಿರುವ ಅಭಿಮಾನಿಗಳು :
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (Cricket) ವಿರಾಟ್ ಕೊಹ್ಲಿಯ 71 ನೇ ಶತಕಕ್ಕಾಗಿ ನಿರೀಕ್ಷೆ ಹೆಚ್ಚಾಗಿದೆ. 2019 ರ ನವೆಂಬರ್‌ನಲ್ಲಿ ಆಡಿದ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಬಾಂಗ್ಲಾದೇಶ (Bangladesh) ವಿರುದ್ಧ ಕೊನೆಯ ಬಾರಿಗೆ ಶತಕ ಬಾರಿಸಿದ್ದರು. ಇದಾದ ಮೇಲೆ ಕೊಹ್ಲಿ ಯಾವ ಪಂದ್ಯದಲ್ಲೂ ಶತಕ (Century) ಬಾರಿಸಿದ್ದೇ ಇಲ್ಲ. ಅಭಿಮಾನಿಗಳು ಪ್ರತೀ ಪಂದ್ಯದ ವೇಳೆಯೂ ವಿರಾಟ್ ಕೊಹ್ಲಿ ಶತಕ ಬಾರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿರುತ್ತಾರೆ. ವಿರಾಟ್ ಕೊಹ್ಲಿ, ವೈಫಲ್ಯದಿಂದಾಗಿ, ಅಭಿಮಾನಿಗಳು ತೀವ್ರ ಅಸಮಾಧಾನಗೊಂಡಿದ್ದಾರೆ.
ಇದನ್ನೂ ಓದಿ : Kevin Pietersen: ಟೀಮ್ ಇಂಡಿಯಾ ಸ್ಪಿನ್ನರ್‌ಗಳ ತಾಕತ್ತಿಗೆ ಬೆಚ್ಚಿ ಬಿದ್ದ ಕೆವಿನ್ ಪೀಟರ್ಸನ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.