Virak Kohli : ಹರಿದು ಬಂತು ಜಾಹೀರಾತಿನ ಪ್ರಸ್ತಾವನೆ : ಎಷ್ಟು ಗೊತ್ತಾ ವಿರಾಟ್ ಕೊಹ್ಲಿ ಬ್ರಾಂಡ್ ವ್ಯಾಲ್ಯೂ

ವಿರಾಟ್ ಅನುಷ್ಕಾಗೆ ಮಗುವಾದ ಸುದ್ದಿ ಹೊರಬರುತ್ತಿದ್ದಂತೆ, ಬಹಳಷ್ಟು ಕಂಪನಿಗಳು  ಜಾಹೀರಾತಿನ ಪ್ರಸ್ತಾವನೆಯನ್ನು ಇವರ ಮುಂದಿಟ್ಟಿದೆ.

Written by - Ranjitha R K | Last Updated : Jan 13, 2021, 08:33 PM IST
  • ತಂದೆಯಾಗುತ್ತಿದ್ದಂತೆ ಹೆಚ್ಚಿತು ವಿರಾಟ್ ಕೊಹ್ಲಿ ಬ್ರಾಂಡ್ ವ್ಯಾಲ್ಯೂ
  • ಜಾಹೀರಾತು ಕಂಪನಿಗಳಿಂದ ಕೊಹ್ಲಿಗೆ ಭರ್ಜರಿ ಆಫರ್
  • ವಿರುಷ್ಕಾ ಜೀವನದಲ್ಲಿ ಸಾಕ್ಷಾತ್ ಲಕ್ಷ್ಮೀಯ ಆಗಮನ
Virak Kohli : ಹರಿದು ಬಂತು ಜಾಹೀರಾತಿನ ಪ್ರಸ್ತಾವನೆ : ಎಷ್ಟು ಗೊತ್ತಾ ವಿರಾಟ್ ಕೊಹ್ಲಿ ಬ್ರಾಂಡ್ ವ್ಯಾಲ್ಯೂ title=
ಜಾಹೀರಾತು ಕಂಪನಿಗಳಿಂದ ಕೊಹ್ಲಿಗೆ ಭರ್ಜರಿ ಆಫರ್ (photo insta gram)

ಮುಂಬಯಿ : ತಂದೆಯಾಗುತ್ತಿದ್ದಂತೆ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬ್ರಾಂಡ್ ವ್ಯಾಲ್ಯೂ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ವಿರಾಟ್ ಅನೇಕ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ವಿರಾಟ್ ಅನುಷ್ಕಾ (Anushka Sharma) ಜೀವನದಲ್ಲಿ ಅತ್ಯಂತ ಸಂತೋಷದ ಸಮಯ ಬಂದಾಗಿದೆ. ಜನವರಿ  11ರಂದು ಅನುಷ್ಕಾ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ. ಅನುಷ್ಕಾ ವಿರಾಟ್ ಜೀವನದಲ್ಲಿ ಸಾಕ್ಷಾತ್ ಲಕ್ಷ್ಮೀಯ ಆಗಮನವಾದಂತಿದೆ. ವಿರಾಟ್ ಅನುಷ್ಕಾಗೆ ಮಗುವಾದ ಸುದ್ದಿ ಹೊರಬರುತ್ತಿದ್ದಂತೆ, ಬಹಳಷ್ಟು ಕಂಪನಿಗಳು (Companies) ಜಾಹೀರಾತಿನ ಪ್ರಸ್ತಾವನೆಯನ್ನು ಇವರ ಮುಂದಿಟ್ಟಿದೆ.

ಇದನ್ನೂ ಓದಿ: Virat-Anushka Daughter: ಮಗಳ ಛಾಯಾಚಿತ್ರ ಕ್ಲಿಕ್ಕಿಸದಿರಲು ಮಾಧ್ಯಮ ವೃಂದಕ್ಕೆ Virushka ದಂಪತಿ ಮನವಿ

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ(Virat Kohli) 2020ರ ಆಗಸ್ಟ್ ನಲ್ಲಿ ಅನುಷ್ಕಾ ಗರ್ಭಿಣಿಯಾಗಿರುವ ವಿಚಾರವನ್ನು ಫೋಷಿಸಿದ್ದರು.ಇದಾದ ನಂತರ ಮಕ್ಕಳ ಪ್ರಾಡೆಕ್ಟ್ ಗಳನ್ನು ತಯಾರಿಸುವ ಬಹಳಷ್ಟು ಕಂಪನಿಗಳು  ಜಾಹೀರಾತಿಗಾಗಿ ಇವರನ್ನು ಸಂಪರ್ಕಿಸಲು ಆರಂಭಿಸಿದ್ದವು. ಇದೀಗ ವಿರಾಟ್ ಮತ್ತು ಅನುಷ್ಕಾಗೆ ಮಗು ಜನಿಸಿದ್ದು, ಇವರ ಸಿರಿತನ ಇನ್ನೂ ಅಧಿಕವಾಗಲಿದೆ.

ಆನ್ ಲೈನ್ ಸೆಂಟಿಮೆಂಟ್ ಅನಾಲಿಸಸ್ ಕಂಪನಿ ಚೆಕ್ ಬ್ರಾಂಡ್ (Checkbrand)ಪ್ರಕಾರ, ವಿರಾಟ್ ಕೊಹ್ಲಿಯ ಬ್ರಾಂಡ್ ವ್ಯಾಲ್ಯೂ ಭಾರತ ತಂಡದ (Team India) ಇತರ ಎಲ್ಲಾ ಆಟಗಾರರಿಗಿಂತ ಅಧಿಕವಾಗಿದೆ. ವಿರಾಟ್ ಕೊಹ್ಲಿಯ ಬ್ರಾಂಡ್ ವಾಲ್ಯೂ 328 ಕೋಟಿ ರೂ. ಎನ್ನಲಾಗಿದೆ. ಇವರಾದ ನಂತರ ಮಾಸ್ಟರ್  ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬ್ರಾಂಡ್ ವ್ಯಾಲ್ಯೂ 167 ಕೋಟಿ ಆಗಿದೆ. ಇದಾದ ನಂತರ ಭಾರತೀಯ ಕ್ರಿಕೆಟ್ ತಂಡದ  ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಬ್ರಾಂಡ್ ವ್ಯಾಲ್ಯೂ  124ಕೋಟಿ ರೂ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News