India vs New Zealand T20 Final: ಕಿವೀಸ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಅಂತಿಮ ಸಮರಕ್ಕೆ ಸಜ್ಜಾಗಿದೆ. ಈ ಎರಡು ತಂಡಗಳು ಇಂದು ನೇಪಿಯರ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರೆ, ಎರಡನೇ ಟಿ20ಯಲ್ಲಿ ಭಾರತ ಗೆಲುವು ಸಾಧಿಸಿದೆ. ಇದು ಕೊನೆಯ ಪಂದ್ಯವಾದರೂ ಮೂರನೇ ಟಿ20ಯನ್ನು ಹೇಗಾದರೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಭರವಸೆಯಲ್ಲಿ ಹಾರ್ದಿಕ್ ಸೇನೆ ಇದೆ. ನ್ಯೂಜಿಲೆಂಡ್ ಕೊನೆಯ ಪಂದ್ಯಕ್ಕೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದೆ. ಈ ಪಂದ್ಯ ಮಧ್ಯಾಹ್ನ 12ರಿಂದ ಆರಂಭವಾಗಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: FIFA World Cup 2022: ಕಾಲೇ ಇಲ್ಲದ ವ್ಯಕ್ತಿ ಕಾಲ್ಚೆಂಡಿನ ಲೋಕದ ರಾಯಭಾರಿ!


ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಭಾರತ ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಶುಭಂ ಗಿಲ್, ಸಂಜು ಸ್ಯಾಮ್ಸನ್, ಉಮ್ರಾನ್ ಮಲಿಕ್ ಅವರಂತಹ ಆಟಗಾರರು ಅಂತಿಮ ತಂಡದಲ್ಲಿ ಸ್ಥಾನಕ್ಕಾಗಿ ಕಾಯುತ್ತಿದ್ದಾರೆ. ಓಪನರ್ ಇಶಾನ್ ಕಿಸಾನ್ ಚೆನ್ನಾಗಿದ್ದಂತೆ ಕಂಡರೂ ಮತ್ತೊಬ್ಬ ಓಪನರ್ ರಿಷಬ್ ಪಂತ್ ವೈಫಲ್ಯ ಭಾರತಕ್ಕೆ ಆತಂಕ ತಂದಿದೆ. ಸೂರ್ಯಕುಮಾರ್ ಯಾದವ್ ಅವರ ಬಿರುಸಿನ ಫಾರ್ಮ್ ಭಾರತಕ್ಕೆ ಪ್ಲಸ್ ಆಗಿದೆ. ನಾಯಕ ಹಾರ್ದಿಕ್ ಪಾಂಡ್ಯ ಕೂಡ ದೊಡ್ಡ ಇನ್ನಿಂಗ್ಸ್ ಆಡಬೇಕೆಂದು ತಂಡದ ಮ್ಯಾನೇಜ್‌ಮೆಂಟ್ ಬಯಸಿದೆ. ಕಳೆದ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಮಿಂಚಿರುವುದು ಸಕಾರಾತ್ಮಕ ಸಂಗತಿ.


ಇದನ್ನೂ ಓದಿ: Viral Video: ಲ್ಯಾಂಬೋರ್ಘಿನಿ ಕಾರಿನಲ್ಲಿ ಮುಂಬೈ ಸುತ್ತಿದ ರೋಹಿತ್ ಶರ್ಮಾ!


ಇನ್ನು ಕಿವೀಸ್ ಬಗ್ಗೆ ಮಾತನಾಡುವುದಾದರೆ ಕ್ಯಾಪ್ಟನ್ ವಿಲಿಯಮ್ಸನ್ ಫೈನಲ್ ಪಂದ್ಯಕ್ಕೆ ಲಭ್ಯರಿಲ್ಲ. ತಂಡದ ನಾಯಕತ್ವವನ್ನು ಹಿರಿಯ ವೇಗಿ ಸೌಥಿ ವಹಿಸಲಿದ್ದಾರೆ. ವಿಲಿಯಮ್ಸನ್ ಬದಲಿಗೆ ಮಾರ್ಕ್ ಚಾಪ್‌ಮನ್ ಆಯ್ಕೆಯಾಗುವ ಸಾಧ್ಯತೆ ಇದೆ. ಕಿವೀಸ್ ಬೌಲರ್‌ಗಳು ಮುಖ್ಯವಾಗಿ ಸೂರ್ಯನನ್ನು ತಡೆಯುವತ್ತ ಗಮನ ಹರಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.