ದುಬೈ: ಐಸಿಸಿ ಟಿ-20 ವಿಶ್ವಕಪ್‌(T20 World Cup 2021)ನಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ಮತ್ತು ಭಾರತ(Ind vs Pak) ನಡುವಣ ರೋಚಕ ಪಂದ್ಯಕ್ಕೆ ಮತ್ತೊಮ್ಮೆ ವೇದಿಕೆ ಸಿದ್ಧಗೊಂಡಿದೆ. ಇಂದು(ಅ.24) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆಂಬುದರ ಬಗ್ಗೆ ಭಾರೀ ಕುತೂಹಲ ಮೂಡಿದೆ.    


COMMERCIAL BREAK
SCROLL TO CONTINUE READING

ಈ ಬಾರಿ ಟೀಂ ಇಂಡಿಯಾ ವಿರುದ್ಧ ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸದಲ್ಲಿರುವ ಬಾಬರ್ ಅಜಂ(Babar Azam) ಪಡೆಯ ಸವಾಲನ್ನು ಎದುರಿಸಲು ವಿರಾಟ್ ಕೊಹ್ಲಿ ಪಡೆ ಸಜ್ಜಾಗಿದೆ. ಗಮನಿಸಬೇಕಾದ ಪ್ರಮುಖ ಅಂಶವೆಂದರೆ ವಿಶ್ವಕಪ್‌ನಲ್ಲಿ ಉಭಯ ತಂಡಗಳ ಮುಖಾಮುಖಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಎಂದಿಗೂ ಸೋತಿಲ್ಲ. ಏಕದಿನ ವಿಶ್ವಕಪ್‌ನಲ್ಲಿ 7 ಹಾಗೂ ಟಿ-20 ವಿಶ್ವಕಪ್‌ನಲ್ಲಿ 5 ಸೇರಿದಂತೆ ಒಟ್ಟು 12 ಬಾರಿ ಭಾರತವೇ ಗೆಲುವು ದಾಖಲಿಸಿದೆ. ಹೀಗಾಗಿ ಈ ಬಾರಿ ಟೀಂ ಇಂಡಿಯಾ ಮೇಲೆ ಸವಾರಿ ಮಾಡಲು ಪಾಕ್ ತಂಡ ಉತ್ಸಾಹದಲ್ಲಿದೆ.


ಇದನ್ನೂ ಓದಿ: ಹೊಸ ಐಪಿಎಲ್ ತಂಡಕ್ಕೆ ಬಿಡ್ ಮಾಡಲು ಮುಂದಾದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್..!


2007ರಲ್ಲಿ ಕೂಲ್ ಕ್ಯಾಪ್ಟನ್ ಖ್ಯಾತಿಯ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ(MS Dhoni) ನೇತೃತ್ವದಲ್ಲಿ ಪಾಕ್ ವಿರುದ್ಧ ಭಾರತ ರೋಚಕ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಟಿ-20 ವಿಶ್ವಕಪ್‌ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಈ ಪಂದ್ಯವು ಸೇರಿದಂತೆ ಇದುವರೆಗೆ ನಡೆದಿರುವ ಟಿ-20 ವಿಶ್ವಕಪ್‌ನ ಐದೂ ಪಂದ್ಯಗಳಲ್ಲಿ ಭಾರತವೇ ಜಯಭೇರಿ ಭಾರಿಸಿದೆ. ಹೀಗಾಗಿ ಧೋನಿ ಮಾರ್ಗದರ್ಶನದಲ್ಲಿ ಪಾಕ್ ವಿರುದ್ಧ ಮತ್ತೊಮ್ಮೆ ಸವಾರಿ ಮಾಡಿ ಜೈತ್ರಯಾತ್ರೆ ಮುಂದುವರಿಸಲು ಕೊಹ್ಲಿ ಪಡೆ ಸಿದ್ಧವಾಗಿದೆ.  


T20 World Cup 2021:ENG VS WI - 6 ವಿಕೆಟ್ ಗಳಿಂದ ಗೆಲುವು ಸಾಧಿಸಿದ ಇಂಗ್ಲೆಂಡ್, 55 ರನ್ ಗಳ ಅತ್ಯಂತ ಕಳಪೆ ಸ್ಕೋರ್ ಗೆ ವೆಸ್ಟ್ ಇಂಡೀಸ್ ಉಡಿಸ್


ಈ ಬಾರಿ ಭಾರತ(Team India)ದ ವಿರುದ್ಧ ಗೆಲವು ಸಾಧಿಸಲು ಪಾಕಿಸ್ತಾನ ತಂಡವು ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಬಾಬರ್ ಅಜಮ್ ನೇತೃತ್ವದಲ್ಲಿ ಭಾರತದ ಮೇಲೆ ಸವಾರಿ ಮಾಡಲು ಸಜ್ಜಾಗಿರುವ ಪಾಕಿಸ್ತಾನಕ್ಕೆ ಗೆಲುವು ಸಿಗುತ್ತಾ..? ಅಥವಾ ಈ ಬಾರಿಯೂ ಟೀಂ ಇಂಡಿಯಾಗೆ ವಿಜಯಲಕ್ಷ್ಮೀ ಒಲಿಯುತ್ತಾಳಾ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಅಭಿಮಾನಿಗಳ ಪ್ರಕಾರ ಭಾರತ ತಂಡವೇ ಗೆಲ್ಲುವ ಫೆವರಿಟ್ ತಂಡವೆನಿಸಿಕೊಂಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ರೋಚಕ ಸೆಣಸಾಟದ ನಿರೀಕ್ಷೆ ಇದೆ.


ಟಿ-20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯ ಫಲಿತಾಂಶ:


ದಿನಾಂಕ ಸ್ಥಳ ಫಲಿತಾಂಶ
ಸೆ.14, 2007 ಡರ್ಬನ್ (ದಕ್ಷಿಣ ಆಫ್ರಿಕಾ) ‘ಟೈ’ ಆಗಿದ್ದ ಪಂದ್ಯದಲ್ಲಿ ಬಾಲ್ ಔಟ್‌ನಲ್ಲಿ ಭಾರತಕ್ಕೆ ಗೆಲುವು
ಸೆ.24, 2007    ಜೋಹಾನ್ಸ್‌ ಬರ್ಗ್ (ದಕ್ಷಿಣ ಆಫ್ರಿಕಾ) ಭಾರತಕ್ಕೆ 5 ರನ್ ಗೆಲುವು
ಸೆ.30, 2012   

ಕೊಲಂಬೊ (ಶ್ರೀಲಂಕಾ)

ಭಾರತಕ್ಕೆ 8 ವಿಕೆಟ್ ಗೆಲುವು
ಮಾ.21, 2014 ಢಾಕಾ (ಬಾಂಗ್ಲಾದೇಶ) ಭಾರತಕ್ಕೆ 7 ವಿಕೆಟ್ ಗೆಲುವು
ಮಾ.19, 2016

ಕೋಲ್ಕತ್ತಾ (ಭಾರತ)

ಭಾರತಕ್ಕೆ 6 ವಿಕೆಟ್ ಗೆಲುವು

ಎರಡೂ ತಂಡಗಳ ಸ್ಕ್ವಾಡ್ ಈ ರೀತಿ ಇವೆ:


ಭಾರತ: ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ರಾಹುಲ್ ಚಹಾರ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್, ವರುಣ್ ಚಕ್ರವರ್ತಿ


ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಇಮಾದ್ ವಾಸಿಮ್, ಶಾದಾಬ್ ಖಾನ್, ಹಸನ್ ಅಲಿ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ, ಹೈದರ್ ಅಲಿ


ಐಸಿಸಿ ಟಿ-20 ವಿಶ್ವಕಪ್ ಪಂದ್ಯ: 16 (ಸೂಪರ್ 12)


ಭಾರತ vs ಪಾಕಿಸ್ತಾನ


ದಿನಾಂಕ: ಅಕ್ಟೋಬರ್ 24


ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ


ಸಮಯ: ಸಂಜೆ 7.30ಕ್ಕೆ


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy