T20 World Cup 2021:ENG VS WI - 6 ವಿಕೆಟ್ ಗಳಿಂದ ಗೆಲುವು ಸಾಧಿಸಿದ ಇಂಗ್ಲೆಂಡ್, 55 ರನ್ ಗಳ ಅತ್ಯಂತ ಕಳಪೆ ಸ್ಕೋರ್ ಗೆ ವೆಸ್ಟ್ ಇಂಡೀಸ್ ಉಡಿಸ್

T20 World Cup 2021 - ICC T20 ವಿಶ್ವಕಪ್ 2021 ರಲ್ಲಿ ಹಾಲಿ  ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್‌ಗೆ ಅತ್ಯಂತ ಕಳಪೆ ಆರಂಭವನ್ನು ಕಂಡಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ವೆಸ್ಟಇಂಡೀಸ್ ತಂಡವನ್ನು 6 ವಿಕೆಟ್ ಗಳಿಂದ ಮಣಿಸಿದೆ.

Written by - Nitin Tabib | Last Updated : Oct 23, 2021, 10:03 PM IST
  • ವಿಶ್ವ ಕಪ್ 2021ರ ಮೊದಲ ಪಂದ್ಯದಲ್ಲಿ 55 ರನ್ ಗಳಿಗೆ ವೆಸ್ಟ್ ಇಂಡೀಸ್ ತಂಡ ಉಡಿಸ್
  • ಇಂಗ್ಲೆಂಡ್ ತಂಡದ ಮಾರಕ ಬೌಲಿಂಗ್ ದಾಳಿ
  • ಕ್ರಿಸ್ ಗೈಲ್ ಅತಿ ಹೆಚ್ಚು ಅಂದರೆ 13 ರನ್ ಗಳಿಸಿದ್ದಾರೆ.
T20 World Cup 2021:ENG VS WI - 6 ವಿಕೆಟ್ ಗಳಿಂದ ಗೆಲುವು ಸಾಧಿಸಿದ ಇಂಗ್ಲೆಂಡ್, 55 ರನ್ ಗಳ ಅತ್ಯಂತ ಕಳಪೆ ಸ್ಕೋರ್ ಗೆ ವೆಸ್ಟ್ ಇಂಡೀಸ್ ಉಡಿಸ್  title=
England vs West Indies (Photo Courtesy-ANI)

England vs West Indies:T20 ವಿಶ್ವಕಪ್ 2021 ರಲ್ಲಿ ಹಾಲಿ  ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್‌ಗೆ ಅತ್ಯಂತ ಕಳಪೆ ಆರಂಭವನ್ನು ಕಂಡಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ವೆಸ್ಟಇಂಡೀಸ್ ತಂಡವನ್ನು 6 ವಿಕೆಟ್ ಗಳಿಂದ ಮಣಿಸಿದೆ. ಇದಕ್ಕೂ ಮೊದಲು ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಸ್ಟಾರ್ ಆಟಗಾರರ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡು ಮೈದಾನಕ್ಕಿಳಿದಿದ್ದರೂ ಭಾರಿ ನಿರಾಸೆ ಅನುಭವಿಸಿದೆ. ಇಂಗ್ಲೆಂಡ್ ಬೌಲರ್‌ಗಳು ವೆಸ್ಟ್ ಇಂಡೀಸ್ ಅನ್ನು ಕೇವಲ 55 ರನ್ ಗಳಿಗೆ ಆಲೌಟ್ ಮಾಡಿದ್ದಾರೆ.  ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದು  ವೆಸ್ಟ್ ಇಂಡೀಸ್‌ನ ಅತ್ಯಂತ ಕಡಿಮೆ ಸ್ಕೋರ್ ಆಗಿದೆ.  ಟಿ 20 ವಿಶ್ವಕಪ್ ಇತಿಹಾಸದಲ್ಲಿ ಎಲ್ಲಾ ತಂಡಗಳು ಸೇರಿದಂತೆ  ಮೂರನೇ ಅತ್ಯಂತ ಕಡಿಮೆ ಸ್ಕೋರ್ ಎಂದು ಇದು ಸಾಬೀತುಪಡಿಸಿದೆ.

ದುಬೈನಲ್ಲಿ ಇಂದು ನಡೆದ ವಿಶ್ವ ಕಪ್ ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದು ಮತ್ತು ತಂಡದ ನಿರ್ಧಾರ ನಿಖರ ಸಾಬೀತಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವನ್ನು ಇಂಗ್ಲೆಂಡ್ ತಂಡ ಕೇವಲ 14.2 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ಕಟ್ಟಿ ಹಾಕಿದೆ.  ಪರಿಸ್ಥಿತಿ ಹೇಗಿತ್ತೆಂದರೆ ಇಡೀ ತಂಡದಲ್ಲಿ ಕೇವಲ ಒಬ್ಬ ಬ್ಯಾಟ್ಸ್‌ಮನ್‌ ಮಾತ್ರ ಎರಡಂಕಿಯನ್ನು ದಾಟಲು ಯಶಸ್ವಿಯಾಗಿದ್ದಾನೆ. ವೆಸ್ಟ್ ಇಂಡೀಸ್ ಪರ ಕ್ರಿಸ್ ಗೇಲ್ ಗರಿಷ್ಠ 13 ರನ್ ಗಳಿಸಿದ್ದಾರೆ. 

ವೆಸ್ಟ್ ಇಂಡೀಸ್ ಸ್ಕೋರ್ ಕಾರ್ಡ್ ಈ ರೀತಿಯಾಗಿತ್ತು
>> ಮೊದಲ ವಿಕೆಟ್ - ಎವಿನ್ ಲೂಯಿಸ್ (6 ರನ್) - 8/1 (ಓವರ್ - 1.3)

>> 2ನೇ ವಿಕೆಟ್ - ಲೆಂಡ್ಲ್ ಸಿಮನ್ಸ್ (3 ರನ್) - 9/2 (ಓವರ್ - 2.2)

>>> 3ನೇ ವಿಕೆಟ್ - ಶಿಮ್ರಾನ್ ಹೆಟ್ಮೆಯರ್ (9 ರನ್) - 27/4 (ಓವರ್ -  4.4)

>> 4 ನೇ ವಿಕೆಟ್ - ಕ್ರಿಸ್ ಗೇಲ್ (13 ರನ್) - 31/4 (ಓವರ್ - 5.6)

>> ಐದನೇ ವಿಕೆಟ್ - ಡ್ವೇನ್ ಬ್ರಾವೋ (5 ರನ್) - 37/5 (ಓವರ್ - 7.2)

>> 6 ನೇ ವಿಕೆಟ್ - ನಿಕೋಲಸ್ ಪೂರನ್ (1 ರನ್) - 42/6 (ಓವರ್ - 8.5)

>> ಏಳನೇ ವಿಕೆಟ್ - ಆಂಡ್ರೆ ರಸೆಲ್ (0 ರನ್) - 44/7 (ಓವರ್ - 10.1)

>> ಎಂಟನೇ ವಿಕೆಟ್ - ಕೀರನ್ ಪೊಲಾರ್ಡ್ (6 ರನ್) - 49/8 (ಓವರ್ - 12.1)

>> ಒಂಬತ್ತನೇ ವಿಕೆಟ್ - ಓಬೇಡ್ ಮೆಕಾಯ್ (0 ರನ್) - 49/6 (ಓವ 12.2)

>> 10ನೇ ವಿಕೆಟ್ - ರವಿ ರಾಂಪಾಲ್ (3 ರನ್) - 55/10 (ಓವರ್ - 14.2)

>> ಅಕಿಲ್ ಹೊಸೈನ್ - 6 ಔಟಾಗದೆ

ಇದನ್ನೂ ಓದಿ-ಹೊಸ ಐಪಿಎಲ್ ತಂಡಕ್ಕೆ ಬಿಡ್ ಮಾಡಲು ಮುಂದಾದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್..!

ಈ ಸಂದರ್ಭದಲ್ಲಿ ಐತಿಹಾಸಿಕ ಪ್ರದರ್ಶನ ನೀಡಿರುವ ಇಂಗ್ಲೆಂಡ್ ತಂಡದ ಬೌಲರ್ ಆದಿಲ್ ರಶೀದ್ ಕೇವಲ 2 ರನ್ ನೀಡಿ 4 ವಿಕೆಟ್ ಕಬಳಿಸಿದ್ದಾರೆ. ಇನ್ನೊಂದೆಡೆ ಟೈಮಲ್ ಮಿಲ್ಸ್ ಹಾಗೂ ಮೋಯಿನ್ ಅಲಿ ತಲಾ 2 ವಿಕೆಟ್ ಕಬಳಿಸಿದ್ದಾರೆ. ಕ್ರಿಸ್ ಜಾರ್ಡನ್ ಹಾಗೂ ಕ್ಕ್ರಿಸ್ ವೋಕ್ಸ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ. 

ಇದನ್ನೂ ಓದಿ-T20 World Cup 2021: ಭಾರತದ ವಿರುದ್ಧದ ಪಂದ್ಯಕ್ಕಾಗಿ ತನ್ನ ತಂಡ ಘೋಷಿಸಿದ ಪಾಕಿಸ್ತಾನ

ತಾಜಾ ಮಾಹಿತಿಯ ಪ್ರಕಾರ, ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯವನ್ನು ಇಂಗ್ಲೆಂಡ್ 6 ವಿಕೆಟ್ ಗಳಿಂದ ತನ್ನದಾಗಿಸಿಕೊಂಡಿದೆ. ಇಂಗ್ಲೆಂಡ್ ತಂಡ ಕೇವಲ 8.2 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ವೆಸ್ಟ್ ಇಂಡೀಸ್ ನೀಡಿದ್ದ 56 ರನ್ ಗುರಿ ತಲುಪಿದೆ.  

ಇದನ್ನೂ ಓದಿ-Sourav Ganguly : ಕ್ಯಾಪ್ಟನ್ಸಿ ತೊರೆಯುವಂತೆ ಬಿಸಿಸಿಐ ಕೊಹ್ಲಿ ಮೇಲೆ ಒತ್ತಡ? ಇದಕ್ಕೆ ಸೌರವ್ ಗಂಗೂಲಿ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News