IND Vs SA Final : ಫೈನಲ್‌ಗೂ ಮುನ್ನ ಟೀಂ ಇಂಡಿಯಾ ಆಘಾತಕಾರಿ ನಿರ್ಧಾರ..! ಏನದು?
IND Vs SA Final : ನಾಳೆ ನಡೆಯಲಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತ T20 ವಿಶ್ವಕಪ್ 2024 ಫೈನಲ್ ಗೂ ಮುನ್ನ ಭಾರತ ಒಂದು ಆಘಾತಕಾರಿ ನಿರ್ಧಾರವನ್ನು ಕೈ ಗೊಂಡಿದೆ.
Team India's shocking decision before the final : ದಕ್ಷಿಣ ಆಫ್ರಿಕಾ ಮತ್ತು ಭಾರತ T20 ವಿಶ್ವಕಪ್ 2024 ಫೈನಲ್ ನಲ್ಲಿ ಚಾಂಪಿಯನ್ ಯಾರು ಎಂಬ ಸಸ್ಪೆನ್ಸ್ ಎಲ್ಲರೂ ಕುತೂಹಲದಿಂದ ಕಾಯುತ್ತಾ ಇದ್ದಾರೆ ಆದರೆ, ಫೈನಲ್ ಪಂದ್ಯಕ್ಕೂ ಮುನ್ನ ಭಾರತ ಆಘಾತಕಾರಿ ನಿರ್ಧಾರ ಕೈಗೊಂಡಿದೆ.
T20 ವಿಶ್ವಕಪ್ 2024 ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಜೂನ್ 29 ರಂದು ಭಾರತವನ್ನು ಎದುರಿಸಲಿದೆ. ಈ ಮೆಗಾ ಟೂರ್ನಮೆಂಟ್‌ನಲ್ಲಿ ಉಭಯ ತಂಡಗಳು ಒಂದೇ ಒಂದು ಪಂದ್ಯವನ್ನು ಸೋಲದೆ ಫೈನಲ್ ತಲುಪಿದ್ದು, ಸಖತ್ ಮಜಾ ನೀಡುವ ಮ್ಯಾಚ್ ಇದಾಗಲಿದೆ. ಚೊಚ್ಚಲ ಬಾರಿಗೆ ಫೈನಲ್ ತಲುಪಿರುವ ದಕ್ಷಿಣ ಆಫ್ರಿಕಾ ಫೈನಲ್ ಅನ್ನು ತಲುಪಿದೆ ಮತ್ತು ಈ ಮೂಲಕ ತಮ್ಮ ಮೊದಲ ಐಸಿಸಿ ಟ್ರೋಫಿಯ ಪಡೆದುಕೊಳ್ಳುವ ಕಾತುರದಲ್ಲಿ ದಕ್ಷಿಣ ಅಫ್ರಿಕಾ ಆಡಲಿದೆ.
ಇದನ್ನು ಓದಿ : ಅತಿವೇಗದ ದ್ವಿಶತಕ ಬಾರಿಸಿದ ಶಫಾಲಿ ವರ್ಮಾ! ಆ ಭಾರತದ ಡ್ಯಾಶಿಂಗ್ ಓಪನರ್ ನ ದಾಖಲೆಗೆ ಸಮ?
ಆದರೆ ಇದಕ್ಕೂ ಮುನ್ನ ಟೀಂ ಇಂಡಿಯಾ ಪಂದ್ಯಕ್ಕೂ ಮುನ್ನ ಭಾರತ ತಂಡ ಆಘಾತಕಾರಿ ನಿರ್ಧಾರ ಕೈಗೊಂಡಿದೆ. ಐಸಿಸಿ ಟಿ20 ವಿಶ್ವಕಪ್ 2024ರ ಫೈನಲ್‌ಗೂ ಮುನ್ನ ಐಸಿಸಿ ಟೀಂ ಇಂಡಿಯಾ ಕುರಿತು ಅಧಿಕೃತವಾಗಿ ಕೆಲವು ಅಧಿಕೃತ ಪ್ರಕಟಣೆಗಳನ್ನು ಬಿಡುಗಡೆ ಮಾಡಿದೆ. ಅಂತಿಮ ಪಂದ್ಯಕ್ಕೂ ಮುನ್ನ ಭಾರತ ತಂಡದ ಯಾವುದೇ ಪತ್ರಿಕಾಗೋಷ್ಠಿ ಇರುವುದಿಲ್ಲ ಎಂದು ಹೇಳಿದೆ. ಇದರೊಂದಿಗೆ ಭಾರತ ತಂಡ ತನ್ನ ಅಭ್ಯಾಸ ಅವಧಿಯನ್ನೂ ರದ್ದುಗೊಳಿಸಿದೆ.
T20 ವಿಶ್ವಕಪ್ 2024 ಫೈನಲ್‌ಗಾಗಿ ಬಾರ್ಬಡೋಸ್‌ಗೆ ಹೊರಡುವ ಮೊದಲು ಟೀಮ್ ಇಂಡಿಯಾದ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು. ಇದಲ್ಲದೇ ಉಳಿದ ಆಟಗಾರರನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸ ರದ್ದು ನಿರ್ಧಾರ ಕೈಗೊಳ್ಳಲಾಗಿದೆ. ಭಾರತ ತಂಡ ಫೈನಲ್‌ಗೂ ಮುನ್ನ ಅಭ್ಯಾಸದ ಬದಲು ವಿಶ್ರಾಂತಿ ಪಡೆಯಲು ನಿರ್ಧರಿಸಿದೆ.
ಇದನ್ನು ಓದಿ : ವಾಟ್ಸಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್: ಹೊಸ ವೈಶಿಷ್ಟ್ಯ ಪರಿಚಯಿಸಿದ ಇಂಡಿಗೋ
ದಕ್ಷಿಣ ಆಫ್ರಿಕಾ ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಫೈನಲ್ ತಲುಪುವ ಮೂಲಕ ಇತಿಹಾಸ ನಿರ್ಮಿಸಿದೆ. ಎರಡೂ ತಂಡಗಳು ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಫೈನಲ್ ತಲುಪಿವೆ. ಯಾವ ತಂಡ ಮೆಗಾ ಟ್ರೋಫಿ ಗೆಲ್ಲಲಿದೆ ಎನ್ನುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ