ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದ ಭಾರತ ಇದೀಗ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Dinesh Karthik: ಯುವತಿ ಜಸ್ಟ್ ಟಚ್ ಮಾಡಿದಕ್ಕೆ ಉರಿದು ಕೆಂಡವಾದ್ರು ದಿನೇಶ್ ಕಾರ್ತಿಕ್: ಮುಂದೇನಾಯ್ತು!


ಮೊದಲು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ ತಂಡ 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 106 ರನ್ ಬಾರಿಸಲಷ್ಟೇ ಸಶಕ್ತವಾಯಿತು. ದ. ಆಫ್ರಿಕಾ ತಂಡದ ಪರ ವೇನ್ ಪಾರ್ನಲ್ 37 ಎಸೆತಕ್ಕೆ 24 ರನ್, ಏಡನ್ ಮರ್ಕ್ರಮ್ 24 ಎಸೆತಕ್ಕೆ 25 ರನ್ ಮತ್ತು ಕೇಶವ್ ಮಹಾರಾಜ್ 35 ಬಾಲ್ ಗೆ 41 ರನ್ ಹೊಡೆದಿದ್ದು ಬಿಟ್ಟರೆ ಉಳಿದವರು ಒಂದಂಕಿ ದಾಟಿಲ್ಲ. ಇನ್ನು ಭಾರತದ ವೇಗಿಗಳಾದ ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದರೆ, ದೀಪಕ್ ಚಹಾರ್ ಮತ್ತು ಹರ್ಷಲ್ ಪಟೇಲ್ ತಲಾ ಎರಡು ವಿಕೆಟ್ ಉರುಳಿಸಿದ್ದಾರೆ. ಅಕ್ಷರ್ ಪಟೇಲ್ ಒಂದು ವಿಕೆಟ್ ಕಬಳಿಸಿದ್ದಾರೆ.


ಇನ್ನು ಸೌತ್ ಆಫ್ರಿಕಾ ನೀಡಿದ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಮೊದಲು ಪಿಚ್ ನಲ್ಲಿ ಸೆಟ್ ಆಗದೆ ರನ್ ಕಲೆ ಹಾಕಲು ಹೆಣಗಾಡಿತು. ಈ ಬಳಿಕ ಲಯಕ್ಕೆ ಬಂದ ತಂಡ ಬ್ಯಾಟಿಂಗ್ ನಲ್ಲಿ ಅಬ್ಬರಿಸಲು ಮುಂದಾಯಿತು. ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ ಮತ್ತು ಕೆ ಎಲ್ ರಾಹುಲ್ ಮೊದಲು ಬ್ಯಾಟಿಂಗ್ ಮಾಡಲು ಕೊಂಚ ಕಷ್ಟ ಅನುಭವಿಸಿದರು.


ಇನ್ನು ರೋಹಿತ್ ಶರ್ಮಾ ಒಂದು ರನ್ ಬಾರಿಸದೆ ಪೆವಿಲಿಯನ್ ಗೆ ಮರಳಿದರು. ಆ ಬಳಿಕ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ಸಹ ಕೇವಲ 3 ರನ್ ಬಾರಿಸಿ ಔಟಾರರು. ಈ ಬಳಿಕ ಟೀಂ ಇಂಡಿಯಾಗೆ ಬಲ ತುಂಬಿದ್ದು, ಸೂರ್ಯಕುಮಾರ್ ಯಾದವ್. ರಾಹುಲ್ ಹಾಗೂ ಸೂರ್ಯ ಕುಮಾರ್ ಜೊತೆಯಾಟ ಟೀಂ ಇಂಡಯಾದ ಗೆಲುವಿಗೆ ಕಾರಣವಾಯಿತು. ಯಾದವ್ 33 ಬಾಲ್ ಗೆ 50 ರನ್ ಬಾರಿಸಿದರೆ ರಾಹುಲ್ 56 ಬಾಲ್ ಗೆ 51 ರನ್ ಬಾರಿಸಿ ತಂಡವನ್ನು ಗೆಲ್ಲಿಸಿದರು,


ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಹಣಾಹಣಿಯು ಕೇರಳದ ತಿರುವಂತಪುರಂನ ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದೆ. ಇದುವರೆಗೆ ನಡೆದ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತವರು ನೆಲದಲ್ಲಿ ಗೆದ್ದಿಲ್ಲ. ಆದರೆ ಈ ಪಂದ್ಯ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.  


ಇದನ್ನೂ ಓದಿ: ಪಾಕಿಸ್ತಾನ ತಂಡಕ್ಕೆ ಹಾರ್ದಿಕ್ ಪಾಂಡ್ಯರಂತಹ ಫಿನಿಶರ್ ಕೊರತೆಯಿದೆ: ಶಾಹಿದ್ ಆಫ್ರಿದಿ


ಕೇರಳದ ತಿರುವನಂತಪುರಂನಲ್ಲಿರುವ ಗ್ರೀನ್‌ಫೀಲ್ಡ್ ಸ್ಟೇಡಿಯಂ ಇಲ್ಲಿಯವರೆಗೆ ಬೆರಳೆಣಿಕೆಯಷ್ಟು T20I ಗಳನ್ನು ಆಯೋಜಿಸಲಾಗಿತ್ತು. ಮೂರು ವರ್ಷಗಳ ನಂತರ ಈ ಮೈದಾನದಲ್ಲಿ ನಡೆಯುತ್ತಿರುವ ಮೊದಲ T20I ಆಗಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಇತಿಹಾಸ ನಿರ್ಮಿಸಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.