ನವದೆಹಲಿ : ಎರಡು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಸೆಣಸುತ್ತಿದೆ. ಇಂದು ಈ ಪಂದ್ಯದ ಮೂರನೇ ದಿನವಾಗಿದ್ದು, ಟೀಂ ಇಂಡಿಯಾ ಗೆಲುವಿನ ಸನಿಹದಲ್ಲಿದೆ. ಎರಡನೇ ಇನಿಂಗ್ಸ್‌ನಲ್ಲಿ ಲಂಕಾ ತಂಡ 447 ರನ್‌ಗಳ ಬೆನ್ನತ್ತಿದೆ. ಆದರೆ 150 ರನ್‌ಗಳ ಮೊದಲು ಈಗಾಗಲೇ ತಮ್ಮ 4 ವಿಕೆಟ್ ಕಳೆದುಕೊಂಡಿದ್ದಾರೆ. ಇದೀಗ ಟೀಂ ಇಂಡಿಯಾ ಗೆಲುವಿಗೆ ಕೇವಲ 6 ವಿಕೆಟ್‌ಗಳ ಅಗತ್ಯವಿದೆ. ಇಂಗ್ಲೆಂಡ್ ವಿರುದ್ಧ ಭಾರತ ತನ್ನ ಕೊನೆಯ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದೆ. ಈ ಹಿಂದೆ ಟೀಂ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಆದಾಗಿನಿಂದ ಭಾರತ ಯಾವುದೇ ಟೆಸ್ಟ್ ಸರಣಿ ಸೊತ್ತಿಲ್ಲ. ರೋಹಿತ್ ಶರ್ಮಾ ಈ ಸರಣಿ ಗೆಲ್ಲುವ ಮೂಲಕ ಈ ದಾಖಲೆಯನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ.


COMMERCIAL BREAK
SCROLL TO CONTINUE READING

ಟೀಂ ಇಂಡಿಯಾಗೆ ಭಾರಿ ಮುನ್ನಡೆ


ಶ್ರೀಲಂಕಾ(Ind Vs SL) ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತ ತಂಡ 446 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಶ್ರೇಯಸ್ ಅಯ್ಯರ್ (67) ಮತ್ತೊಮ್ಮೆ ಭಾರತದ ಪರ ಗರಿಷ್ಠ ರನ್ ಗಳಿಸಿದರು. ಅದೇ ಸಮಯದಲ್ಲಿ ರಿಷಬ್ ಪಂತ್ ಕೂಡ 50 ರನ್‌ಗಳ ವೇಗದ ಇನ್ನಿಂಗ್ಸ್ ಆಡಿದರು. ಇದಲ್ಲದೇ ನಾಯಕ ರೋಹಿತ್ 46 ಹಾಗೂ ಹನುಮ ವಿಹಾರಿ 35 ರನ್ ಗಳಿಸಿದರು. ಮತ್ತೊಂದೆಡೆ ರವೀಂದ್ರ ಜಡೇಜಾ ಮತ್ತು ಮಯಾಂಕ್ ಅಗರ್ವಾಲ್ 22-22 ರನ್ ಕೊಡುಗೆ ನೀಡಿದರು.


ಇದನ್ನೂ ಓದಿ : IPL 2022ರ ಮೊದಲು ಲಕ್ನೋ ಸೂಪರ್ ಜೈಂಟ್ಸ್‌ಗೆ ಆಘಾತ: ಈ ಆಟಗಾರ ಪಂದ್ಯಾವಳಿಯಿಂದ ಹಿಂದೆ ಸರಿಯುವ ಸಾಧ್ಯತೆ!


5 ವಿಕೆಟ್ ಪಡೆದ ಬುಮ್ರಾ 


ಶ್ರೀಲಂಕಾ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ(Jasprit Bumrah) 5 ವಿಕೆಟ್ ಪಡೆದರು. ಇವರನ್ನು ಹೊರತುಪಡಿಸಿ ಭಾರತದ ಎಲ್ಲ ಬೌಲರ್‌ಗಳು ಅದ್ಭುತ ಆಟ ಪ್ರದರ್ಶಿಸಿದರು. ಮೊಹಮ್ಮದ್ ಶಮಿ ಮತ್ತು ರವಿಚಂದ್ರನ್ ಅಶ್ವಿನ್ 2 ವಿಕೆಟ್ ಮತ್ತು ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು. ಶ್ರೀಲಂಕಾದ ಯಾವುದೇ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನ್ನಿಂಗ್ಸ್‌ ಆಡಲಾಗಲಿಲ್ಲ. ಏಂಜೆಲೊ ಮ್ಯಾಥ್ಯೂಸ್ 43 ರನ್ ಗಳಿಸಿದರು. ಮ್ಯಾಥ್ಯೂಸ್ ಹೊರತಾಗಿ ನಿರೋಶನ್ ಡಿಕ್ವೆಲ್ಲಾ ಮತ್ತು ಅರವಿಂದ ದೇಸೆಲ್ವಾ ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು. ಇಡೀ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಹಿಡಿತ ಸಾಧಿಸಿದರು ಮತ್ತು ಇಡೀ ಶ್ರೀಲಂಕಾ ತಂಡವು 109 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಭಾರತ 143 ರನ್‌ಗಳ ಮುನ್ನಡೆ ಸಾಧಿಸಿದೆ.


ಸತತ 15ನೇ ಸರಣಿ ಗೆಲ್ಲುವ ಸನಿಹದಲ್ಲಿ ಭಾರತ ತಂಡ 


ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ(Ind Vs Sl 2nd Test) ಮಾರ್ಚ್ 12 ರಂದು ಬೆಂಗಳೂರು ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಇತಿಹಾಸ ನಿರ್ಮಿಸಲಿದೆ. ತವರಿನಲ್ಲಿ ಭಾರತ ತಂಡ ಸತತ 15ನೇ ಟೆಸ್ಟ್ ಸರಣಿ ಗೆಲ್ಲಲಿದೆ. ತವರಿನಲ್ಲಿ ಅತಿ ಹೆಚ್ಚು ಟೆಸ್ಟ್ ಸರಣಿ ಗೆದ್ದಿರುವ ವಿಚಾರದಲ್ಲಿ ಭಾರತ ತಂಡದ ಹತ್ತಿರ ಯಾರೂ ಇಲ್ಲ. 


ಇದನ್ನೂ ಓದಿ : ಅತಿರೇಕದ ಅಭಿಮಾನ: ಕೊಹ್ಲಿ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡ ಅಭಿಮಾನಿಗಳು ಜೈಲು ಪಾಲು


ಭಾರತ : ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ.


ಶ್ರೀಲಂಕಾ : ದಿಮುತ್ ಕರುಣಾರತ್ನೆ (ನಾಯಕ), ಲಹಿರು ತಿರಿಮನ್ನೆ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸ್ಲಂಕಾ, ನಿರೋಶನ್ ಡಿಕ್ವೆಲ್ಲಾ (WK), ಸುರಂಗ ಲಕ್ಮಲ್, ಲಸಿತ್ ಎಂಬುಲ್ಡೆನಿಯಾ, ವಿಶ್ವ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.