IPL 2022ರ ಮೊದಲು ಲಕ್ನೋ ಸೂಪರ್ ಜೈಂಟ್ಸ್‌ಗೆ ಆಘಾತ: ಈ ಆಟಗಾರ ಪಂದ್ಯಾವಳಿಯಿಂದ ಹಿಂದೆ ಸರಿಯುವ ಸಾಧ್ಯತೆ!

IPL 2022: ಇಂಡಿಯನ್ ಪ್ರೀಮಿಯರ್ ಲೀಗ್‌ನ 15 ನೇ ಸೀಸನ್‌ನ ಮೆಗಾ ಹರಾಜಿನಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡವು ವೇಗಿ ಮಾರ್ಕ್ ವುಡ್ ಅವರನ್ನು 7.5 ಕೋಟಿ ಮೊತ್ತಕ್ಕೆ ಖರೀದಿಸಿತ್ತು.

Written by - Yashaswini V | Last Updated : Mar 14, 2022, 02:52 PM IST
  • ಬಲ ಮೊಣಕೈಯಲ್ಲಿ ತೀವ್ರವಾದ ನೋವಿನಿಂದಾಗಿ ಇಂಗ್ಲೆಂಡ್ ವೇಗದ ಬೌಲರ್ ಮಾರ್ಕ್ ವುಡ್ ಈಗಾಗಲೇ ವೆಸ್ಟ್ ಇಂಡೀಸ್‌ನ ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿದಿದ್ದಾರೆ.
  • 15 ನೇ ಸೀಸನ್‌ನ ಮೆಗಾ ಹರಾಜಿನಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡವು ವೇಗಿ ಮಾರ್ಕ್ ವುಡ್ ಅವರನ್ನು 7.5 ಕೋಟಿ ಮೊತ್ತಕ್ಕೆ ಖರೀದಿಸಿತ್ತು.
IPL 2022ರ ಮೊದಲು ಲಕ್ನೋ ಸೂಪರ್ ಜೈಂಟ್ಸ್‌ಗೆ ಆಘಾತ: ಈ ಆಟಗಾರ ಪಂದ್ಯಾವಳಿಯಿಂದ ಹಿಂದೆ ಸರಿಯುವ ಸಾಧ್ಯತೆ! title=
Mark Wood (Image Credit-Twitter)

IPL 2022: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2022) 15 ನೇ ಸೀಸನ್‌ನೊಂದಿಗೆ ವಿಶ್ವದ ಅತ್ಯಂತ ಪ್ರಸಿದ್ಧ ಟಿ20 ಲೀಗ್‌ಗೆ ಸೇರಲು ಹೊರಟಿರುವ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಫ್ರಾಂಚೈಸಿ ಭಾರಿ ಹಿನ್ನಡೆ ಅನುಭವಿಸಿದೆ. ವರದಿಯೊಂದರ ಪ್ರಕಾರ, ತಂಡದ ವಿದೇಶಿ ವೇಗದ ಬೌಲರ್ ಮಾರ್ಕ್ ವುಡ್ (Mark Wood) ಮೊಣಕೈಗಾಯದ ಕಾರಣದಿಂದಾಗಿ ಐಪಿಎಲ್ 2022 (IPL 2022) ರಿಂದ ಹಿಂದೆ  ಸರಿಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ (Indian Premier League) 15 ನೇ ಸೀಸನ್‌ನ ಮೆಗಾ ಹರಾಜಿನಲ್ಲಿ, ಲಕ್ನೋ ಸೂಪರ್ ಜೈಂಟ್ಸ್ (Lucknow Super Giants)  ತಂಡವು ವೇಗಿ ಮಾರ್ಕ್ ವುಡ್ ಅವರನ್ನು 7.5 ಕೋಟಿ ಮೊತ್ತಕ್ಕೆ ಖರೀದಿಸಿತ್ತು ಎಂಬುದು ಗಮನಾರ್ಹ.

ಇದನ್ನೂ ಓದಿ- ಅತಿರೇಕದ ಅಭಿಮಾನ: ಕೊಹ್ಲಿ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡ ಅಭಿಮಾನಿಗಳು ಜೈಲು ಪಾಲು

ಬಲ ಮೊಣಕೈಯಲ್ಲಿ ತೀವ್ರವಾದ ನೋವಿನಿಂದಾಗಿ ಮಾರ್ಕ್ ವುಡ್ (Mark Wood) ಈಗಾಗಲೇ ಇಂಗ್ಲೆಂಡ್‌ನ ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರಗುಳಿದಿದ್ದಾರೆ. ಅದಾಗ್ಯೂ, ವುಡ್ ಬದಲಿಗೆ  ವಾರ್ವಿಕ್‌ಷೈರ್‌ನ ಲಿಯಾಮ್ ನಾರ್ವೆಲ್ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗುವುದೇ ಎಂಬ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಇಂಗ್ಲೆಂಡ್ ತಂಡದ ವಕ್ತಾರರು ಹೇಳಿದ್ದಾರೆ. 

ವುಡ್ ಅವರು ನಾಲ್ಕು ಟೆಸ್ಟ್‌ಗಳಲ್ಲಿ 26.64 ಸರಾಸರಿಯಲ್ಲಿ 17 ವಿಕೆಟ್‌ಗಳನ್ನು ಕಬಳಿಸುವ ಮೂಲಕ ನಿರಾಶಾದಾಯಕ ಆಶಸ್ ಸರಣಿಯಲ್ಲಿ ಇಂಗ್ಲೆಂಡ್‌ನ ಅತ್ಯುತ್ತಮ ಬೌಲರ್ ಆಗಿದ್ದರು. ವುಡ್ ಹೊರತುಪಡಿಸಿ, ಇತರ ಇಬ್ಬರು ಇಂಗ್ಲಿಷ್ ಕ್ರಿಕೆಟಿಗರು ಈಗಾಗಲೇ ಐಪಿಎಲ್ 2022 (IPL 2022) ರಿಂದ ಹಿಂದೆ ಸರಿದಿದ್ದಾರೆ. ಗುಜರಾತ್ ಟೈಟಾನ್ಸ್‌ನ ಜೇಸನ್ ರಾಯ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ನ ಅಲೆಕ್ಸ್ ಹೇಲ್ಸ್ ಇಬ್ಬರೂ ಲೀಗ್‌ನಿಂದ ಹಿಂದೆ ಸರಿಯಲು ಬಯೋ-ಬಬಲ್ ಅನ್ನು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ- Team India: ತಮ್ಮ ಟೆಸ್ಟ್ ವೃತ್ತಿಜೀವನ ಬಹುತೇಕ ಮುಗಿದಿದ್ದರೂ ನಿವೃತ್ತಿ ಘೋಷಿಸದ 4 ಬ್ಯಾಟ್ಸ್‌ಮನ್‌ಗಳು!

ಲಕ್ನೋ ಸೂಪರ್ ಜೈಂಟ್ಸ್  ಪೂರ್ಣ IPL 2022 ತಂಡ: ಕೆಎಲ್ ರಾಹುಲ್, ಮಾರ್ಕಸ್ ಸ್ಟೋನಿಸ್, ರವಿ ಬಿಷ್ಣೋಯ್, ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಮನೀಶ್ ಪಾಂಡೆ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಮಾರ್ಕ್ ವುಡ್, ಅವೇಶ್ ಖಾನ್, ಅಂಕಿತ್ ರಜಪೂತ್, ಕೆ ಗೌತಮ್, ದುಷ್ಮಂತ್ ಚಮೀರಾ, ಮಂಝ್ ನದೀಮ್, ಮಂಝ್ ನದೀಮ್ ವೋಹ್ರಾ, ಮೊಹ್ಸಿನ್ ಖಾನ್, ಆಯುಷ್ ಬಡೋನಿ, ಕರಣ್ ಶರ್ಮಾ, ಎವಿನ್ ಲೆವಿಸ್, ಮಯಾಂಕ್ ಯಾದವ್, ಕೈಲ್ ಮೇಯರ್ಸ್.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News