IND vs SL: ರೋಚಕ ಪಂದ್ಯದಲ್ಲಿ ಭಾರತವನ್ನು 4 ವಿಕೆಟ್‌ಗಳಿಂದ ಮಣಿಸಿದ ಶ್ರೀಲಂಕಾ
IND vs SL: ಸರಣಿಯ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಭಾರತವನ್ನು 4 ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ ಸರಣಿಯನ್ನು ಈಗ 1-1ರಲ್ಲಿ ಸಮಬಲವನ್ನು ಹೊಂದಿದೆ.
ನವದೆಹಲಿ: ಭಾರತ ಮತ್ತು ಶ್ರೀಲಂಕಾ (IND vs SL) ನಡುವಿನ ಮೂರು ಪಂದ್ಯಗಳ ಸರಣಿಯ ಎರಡನೇ ಟಿ 20 ಯಲ್ಲಿ ಶ್ರೀಲಂಕಾ ಭಾರತವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಶ್ರೀಲಂಕಾ ಸರಣಿಯನ್ನು 1-1ರಿಂದ ಸಮಗೊಳಿಸಿದೆ. ಸರಣಿಯ ಎರಡನೇ ಪಂದ್ಯ ಕಡೆಯವರೆಗೂ ಬಹಳ ರೋಮಾಂಚಕಾರಿಯಾಗಿತ್ತು. ಕೊನೆಯಲ್ಲಿ ಜಯ ಶ್ರೀಲಂಕಾ ಪಾಲಾಯಿತು. ಸರಣಿಯ ಮೂರನೇ ಮತ್ತು ನಿರ್ಣಾಯಕ ಪಂದ್ಯ ಗುರುವಾರ ನಡೆಯಲಿದೆ.
ರೋಮಾಂಚಕ ಪಂದ್ಯದಲ್ಲಿ ಶ್ರೀಲಂಕಾ ಜಯಗಳಿಸಿತು:
ಭಾರತ ನೀಡಿದ 133 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ 19.4 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು ಈ ಗುರಿಯನ್ನು ಸಾಧಿಸಿದೆ. ಒಂದು ಸಮಯದಲ್ಲಿ ಭಾರತ ಈ ಪಂದ್ಯವನ್ನು ಗೆಲ್ಲುವ ನಿರೀಕ್ಷೆ ದಟ್ಟವಾಗಿತ್ತು. ಆದರೆ ಶ್ರೀಲಂಕಾ ಕೊನೆಯ ಓವರ್ ಗೆದ್ದಿತು. ಧನಂಜಯ್ ಡಿ ಸಿಲ್ವಾ ಶ್ರೀಲಂಕಾ ಪರ ಔಟಾಗದೆ 40 ರನ್ ಗಳಿಸಿದರು. ಕುಲದೀಪ್ ಯಾದವ್ ಭಾರತ ಪರ ಗರಿಷ್ಠ ಎರಡು ವಿಕೆಟ್ ಪಡೆದರು.
ಟಾಸ್ ಗೆದ್ದ ಶ್ರೀಲಂಕಾ:
ಶ್ರೀಲಂಕಾ (Srilanka) ನಾಯಕ ದಾಸುನ್ ಶಾನಕಾ ಎರಡನೇ ಟಿ 20 ಯಲ್ಲಿ ಟಾಸ್ ಗೆದ್ದಿದ್ದಾರೆ. ಟಾಸ್ ಗೆದ್ದ ಅವರು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.
ಇದನ್ನೂ ಓದಿ- Tokyo Olympics 2020: ಮ್ಯಾಚ್ ಗೂ ಮುನ್ನ ಜುಡೋ ಅಥ್ಲೀಟ್ ಗೆ ಕೋಚ್ ನಿಂದ ಕಪಾಳಮೋಕ್ಷ, ಆಶ್ಚರ್ಯಕ್ಕೊಳಗಾದ ಪ್ರೇಕ್ಷಕರು
132 ರನ್ ಗಳಿಸಿದ ಭಾರತ :
ಎರಡನೇ ಟಿ 20 ಯಲ್ಲಿ ಟಾಸ್ ಸೋತ ನಂತರ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 5 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು. ಕ್ಯಾಪ್ಟನ್ ಶಿಖರ್ ಧವನ್ (Shikhar Dhawan) ಭಾರತ ಪರ ಹೆಚ್ಚು ರನ್ ಗಳಿಸಿದರು. ಧವನ್ 40 ರನ್‌ಗಳ ಇನ್ನಿಂಗ್ಸ್ ಆಡಿದರು. ಇದಲ್ಲದೆ ದೇವದುತ್ ಪಡಿಕ್ಕಲ್ 29 ಮತ್ತು ರುತುರಾಜ್ ಗಾಯಕ್ವಾಡ್ 21 ರನ್ ಕೊಡುಗೆ ನೀಡಿದ್ದಾರೆ. ಅಕಿಲಾ ಧನಂಜಯ್ ಶ್ರೀಲಂಕಾ ಪರ 2 ವಿಕೆಟ್ ಪಡೆದರು.
ಕರೋನಾವೈರಸ್‌ನಿಂದಾಗಿ ಭಾರತದ ಅನೇಕ ಆಟಗಾರರು ತಂಡದಿಂದ ಹೊರಗುಳಿಯಬೇಕಾಯಿತು. ಇದರಿಂದಾಗಿ ಭಾರತದಿಂದ ಈ ಪಂದ್ಯದಲ್ಲಿ 4 ಹೊಸ ಆಟಗಾರರು ಪದಾರ್ಪಣೆ ಮಾಡಿದ್ದಾರೆ.
ಇದನ್ನೂ ಓದಿ- Ind Vs SL 2nd T20 Match: ನಿಗದಿತ ವೇಳಾಪಟ್ಟಿಯಂತೆಯೇ ನಡೆಯಲಿದೆ ಎರಡನೇ T20 ಪಂದ್ಯ, ಸೀಜನ್ ನಿಂದ ಹೊರಬಿದ್ದ 8 ಆಟಗಾರರು
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಶಿಖರ್ ಧವನ್ (ಕ್ಯಾಪ್ಟನ್), ರುತುರಾಜ್ ಗಾಯಕ್ವಾಡ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ಡಬ್ಲ್ಯೂಕೆ), ನಿತೀಶ್ ರಾಣಾ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ರಾಹುಲ್ ಚಹರ್, ನವದೀಪ್ ಸೈನಿ, ಚೇತನ್ ಸಕಾರಬಿಯಾ ಮತ್ತು ವರುಣ್ ಚಕಾರಿಯಾ.
ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿಕೆಟ್ ಕೀಪರ್), ಧನಂಜಯ್ ಡಿ ಸಿಲ್ವಾ, ಸದಿರಾ ಸಮರವಿಕ್ರಮ, ದಾಸುನ್ ಶಾನಕಾ (ಕ್ಯಾಪ್ಟನ್), ರಮೇಶ್ ಮೆಂಡಿಸ್, ವನಿಂದು ಹಸರಂಗ, ಚಮಿಕಾ ಕರುಣರತ್ನೆ, ಇಸುರು ಉದನಾ, ಅಕಿಲಾ ಧನಮಂಜಯ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.