IND VS SL: ಶ್ರೀಲಂಕಾ ವಿರುದ್ಧ ಟಿ 20 ಸರಣಿ (T20 Series) ಆಡುತ್ತಿರುವ ಟೀಮ್ ಇಂಡಿಯಾ (Team India)ದೊಡ್ಡ ಹಿನ್ನಡೆ ಅನುಭವಿಸಿದೆ. ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಕ್ರುನಾಲ್ ಪಾಂಡ್ಯ (Krunal Pandya) ಕೊರೊನಾ ಸೋಂಕಿಗೆ (Covid-19 Positive) ಗುರಿಯಾಗಿದ್ದಾರೆ. ಅವರ ವರದಿ ಸಕಾರಾತ್ಮಕ ಹೊರಬಂದಿದೆ. ಈ ಕಾರಣದಿಂದ ಇಂದು ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯಬೇಕಿದ್ದ ಎರಡನೇ ಟಿ 20 ಪಂದ್ಯವನ್ನು ಮುಂದೂಡಲಾಗಿದೆ. ಉಳಿದ ಆಟಗಾರರು ನಕಾರಾತ್ಮಕವಾಗಿ ಕಂಡುಬಂದರೆ, ಈ ಪಂದ್ಯ ಬುಧವಾರ ಅಂದರೆ ನಾಳೆ ನಡೆಯುವ ನಿರೀಕ್ಷೆ ಇದೆ.
ಕೊರೊನಾ ಸೋಂಕಿಗೆ ಒಳಗಾದ ಕ್ರುನಾಲ್ ಪಾಂಡ್ಯ
ಕ್ರುನಾಲ್ ಕರೋನಾ ಪಾಸಿಟಿವ್ ಎಂದು ಶ್ರೀಲಂಕಾದ ಕ್ರಿಕೆಟ್ ಅಧಿಕಾರಿ ಐಎಎನ್‌ಎಸ್‌ಗೆ ಖಚಿತಪಡಿಸಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕೂಡ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಇದನ್ನು ದೃಢಪಡಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ BCCI, 'ಇಂದು ನಡೆಯಲಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟಿ 20 ಪಂದ್ಯವನ್ನು ಒಂದು ದಿನಕ್ಕೆ ಮುಂದೂಡಲಾಗಿದ್ದು, ಈ ಪಂದ್ಯ ಬುಧವಾರ ನಡೆಯಲಿದೆ' ಎಂದು ಹೇಳಿದೆ.
Ind vs SL: Krunal Pandya tests positive for COVID-19, second T20I postponed
Read @ANI Story | https://t.co/5gYImrPKrT#INDvsSL pic.twitter.com/0dBmYAuPxp
— ANI Digital (@ani_digital) July 27, 2021
ಇದನ್ನೂ ಓದಿ- IPL 2021: ಇನ್ನುಳಿದ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ, ಫೈನಲ್ ಯಾವಾಗ ಗೊತ್ತಾ..?
'ಪಂದ್ಯಕ್ಕೂ ಮೊದಲು ಮಂಗಳವಾರ ಬೆಳಗ್ಗೆ ರಾಪಿಡ್ ಆಂಟಿಜೆನ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ತಂಡದ ಆಲ್‌ರೌಂಡರ್ ಕ್ರುನಾಲ್ ಪಾಂಡ್ಯ ವರದಿ ಕರೋನಾ ಪಾಸಿಟಿವ್ಹೊರಬಂದಿದೆ. ಅವರೊಂದಿಗೆ ನಿಕಟ ಸಂಪರ್ಕಕ್ಕೆ ಬಂದ ಎಂಟು ಸದಸ್ಯರನ್ನು ವೈದ್ಯಕೀಯ ತಂಡ ಗುರುತಿಸಿದೆ. ತಂಡದಲ್ಲಿ ಕರೋನದ ಯಾವುದೇ ಪ್ರಕರಣಗಳು ವರದಿಯಾಗದಂತೆ ಇಡೀ ತಂಡದ ಆರ್‌ಟಿ ಪಿಸಿಆರ್ ಪರೀಕ್ಷೆಯನ್ನು ಮಾಡಲಾಗಿದೆ' ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ- India vs England 2021: ಬೆರಳಿನ ಗಾಯದಿಂದಾಗಿ ಟೆಸ್ಟ್ ಸರಣಿಯಿಂದ ವಾಷಿಂಗ್ಟನ್ ಸುಂದರ್ ಹೊರಕ್ಕೆ
ಮೊದಲ ಪಂದ್ಯವನ್ನು 38 ರನ್ ಗಳಿಂದ ಭಾರತ ಗೆದ್ದಿದೆ
ಈ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತ್ತು. ಮೊದಲು ಬ್ಯಾಟಿಂಗ್ ಮಾಡಲು ಬಂದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಒಟ್ಟು 164 ರನ್ ಗಳಿಸಿತ್ತು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಭಾರತ ಪರ ಅತ್ಯಧಿಕ 50 ರನ್ ಗಳಿಸಿದ್ದಾರೆ. ಇದೇ ವೇಳೆ ನಾಯಕ ಶಿಖರ್ ಧವನ್ 46 ರನ್ ಗಳಿಸಿದ್ದರು. 165 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಪೂರ್ಣ 20 ಓವರ್‌ಗಳನ್ನು ಪೂರ್ಣಗೊಳಿಸಲು ಶಕ್ತವಾಗಿಲ್ಲ ಮತ್ತು ಅದು 18.3 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಭಾರತದ ಪರ ಭುವನೇಶ್ವರ್ ಕುಮಾರ್ 4 ವಿಕೆಟ್ ಪಡೆದರೆ, ದೀಪಕ್ ಚಹರ್ 2 ವಿಕೆಟ್ ಪಡೆದಿದ್ದರು, ವರುಣ್ ಚಕ್ರವರ್ತಿ, ಯುಜ್ವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯ ಮತ್ತು ಕ್ರುನಾಲ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದಿದ್ದರು.
ಇದನ್ನೂ ಓದಿ-"ಜನರು ನಿವೃತ್ತರಾದಾಗ ದಂತಕಥೆಗಳಾಗುತ್ತಾರೆ. ಕೊಹ್ಲಿ 30 ನೇ ವಯಸ್ಸಿನಲ್ಲಿಯೇ ದಂತಕಥೆ"
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ