Tokyo Olympics 2020 Updates: ಗರಿಗೆದರಿದ ಮತ್ತೊಂದು ಪದಕದ ಆಸೆ, ಮೂರನೇ ಸುತ್ತಿಗೆ ದೀಪಿಕಾ ಕುಮಾರಿ ಪ್ರವೇಶ

Tokyo Olympics 2020 Updates: ಭಾರತೀಯ ಮಹಿಳಾ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ತಮ್ಮ ಎರಡನೇ ಸುತ್ತಿನ ಪಂದ್ಯವನ್ನು ಗೆಲ್ಲುವ ಮೂಲಕ ರೌಂಡ್ ಆಫ್ 16ರಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿದ್ದಾರೆ. ಇದರಿಂದ ದೇಶಕ್ಕೆ ಮತ್ತೊಂದು ಪದಕದ ಭರವಸೆಯನ್ನು ಮೂಡಿಸಿದ್ದಾರೆ.

Written by - Nitin Tabib | Last Updated : Jul 28, 2021, 08:32 PM IST
  • ಟೋಕಿಯೋ ಒಲಿಂಪಿಕ್ಸ್ 2020ನಲ್ಲಿ ದೀಪಿಕಾ ಕಮಾಲ್.
  • ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿಸಿದ ದೀಪಿಕಾ.
  • ವೈಯಕ್ತಿಕ ಬಿಲ್ಲುಗಾರಿಗೆ ಸ್ಪರ್ಧೆಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ ದೀಪಿಕಾ.
Tokyo Olympics 2020 Updates: ಗರಿಗೆದರಿದ ಮತ್ತೊಂದು ಪದಕದ ಆಸೆ, ಮೂರನೇ ಸುತ್ತಿಗೆ ದೀಪಿಕಾ ಕುಮಾರಿ ಪ್ರವೇಶ title=
Tokyo Olympics 2020 Updates (File Photo)

Tokyo Olympics 2020 Updates: ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ (Olympics 2020) ಕ್ರೀಡಾಕೂಟದ ವೈಯಕ್ತಿಕ ಬಿಲ್ಲುಗಾರಿಕೆಯ ಸ್ಪರ್ಧೆಯ (Tokyo Olympics 2020 Archery) ಎರಡನೇ ಸುತ್ತಿನಲ್ಲಿ ಅಮೆರಿಕಾದ ಜೆನ್ನಿಫರ್ ಫರ್ನಾಂಡಿಸ್ ಮುಸಿನೂ (Jennifer Mucino-Fernandez) ಅವರನ್ನು ಸೋಲಿಸುವ ಮೂಲಕ ಭಾರತೀಯ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ರೌಂಡ್ ಆಫ್ 16 ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿದ್ದಾರೆ. ದೀಪಿಕಾ ಎರಡನೇ ಸುತಿನಲ್ಲಿ ಜೆನ್ನಿಫರ್ ಅವರನ್ನು 6-4ರಿಂದ ಮಣಿಸಿದ್ದಾರೆ. ಪಂದ್ಯದ ಆರಂಭದಲ್ಲಿ ಮೊದಲ ಸೆಟ್ ಸೋತ ದೀಪಿಕಾ ನಂತರ ಜಬರ್ದಸ್ತ್ ಕಮ್ ಬ್ಯಾಕ್ ಮಾಡುವ ಮೂಲಕ ಎರಡನೇ ಸೆಟ್ ಅನ್ನು ತನ್ನದಾಗಿಸಿಕೊಂಡಿದ್ದಾರೆ. 

ಇದನ್ನೂ ಓದಿ-Tokyo Olympics 2021: ಸ್ಪೇನ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ ಹಾಕಿ ತಂಡ

ರೋಮಾಂಚಕ ಪಂದ್ಯದಲ್ಲಿ ಗೆಲುವು ಸಾಧಿಸಿದ ದೀಪಿಕಾ
ಪಂದ್ಯದ ನಾಲ್ಕನೇ ಸೆಟ್ ನಲ್ಲಿ ದೀಪಿಕಾ ಮತ್ತೊಮ್ಮೆ ಹಿಂದಕ್ಕೆ ಬಿದ್ದಿದ್ದರು. ಆದರೆ, ಐದನೇ ಹಾಗೂ ನಿರ್ಣಾಯಕ ಸೆಟ್ ಅನ್ನು ತನ್ನದಾಗಿಸುವ ಮೂಲಕ ಎಲ್ಲಾ ಅಡೆತಡೆಗಳನ್ನು ತೊಡೆದು ಹಾಕಿ ಪದಕದತ್ತ ಮತ್ತೊಂದು ಹೆಜ್ಜೆಯನ್ನಿಟ್ಟಿದ್ದಾರೆ. ಇದಕ್ಕೂ ಮೊದಲು ದೀಪಿಕಾ ಕುಮಾರಿ ರೌಂಡ್ 64  ನಲ್ಲಿ ಭೂತಾನ್ ಬಿಲ್ಲುಗಾರ್ತಿ ಕರ್ಮಾಳನ್ನು ಮಣಿಸಿ ಎರಡನೇ ಸುತ್ತಿನಲ್ಲಿ ತನ್ನ ಸ್ಥಾನ ಭದ್ರಪಡಿಸಿದ್ದರು. ಈ ಪಂದ್ಯದಲ್ಲಿ ದೀಪಿಕಾ, ಕರ್ಮಾ ಅವರನ್ನು ಏಕಪಕ್ಷೀಯ 6-0 ಅಂತರದಿಂದ ಸೋಲಿಸಿದ್ದರು.

ಇದನ್ನೂ ಓದಿ-Tokyo Olympics Update:ಸ್ವದೇಶಕ್ಕೆ ಮರಳುತ್ತಿದ್ದಂತೆ ASPಯಾಗಿ ನೇಮಕಗೊಂಡ Silver Girl ಮೀರಾಬಾಯಿ ಚಾನು

ದೀಪಿಕಾ ಅವರಿಂದ ಪದಕ ನಿರೀಕ್ಷಿಸಲಾಗುತ್ತಿದೆ
ದೀಪಿಕಾಗೂ ಮುನ್ನ ಭಾರತದ ಬಿಲ್ಲುಗಾರರಾದ ತರುಣಡೀಪ್ ರಾಯ್ ಹಾಗೂ ಪ್ರವೀಣ್ ಜಾಧವ್ ಕೂಡ ತಮ್ಮ ಮೊದಲ ಸುತ್ತಿನ ಪಂದ್ಯಗಳನ್ನು ಗೆದ್ದು, ಎರಡನೇ ಸುತ್ತಿನಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಿದ್ದರು. ಆದರೆ, ಈ ಇಬ್ಬರು ಬಿಲ್ಲುಗಾರರು ಎರಡನೇ ರೌಂಡ್ ನಲ್ಲಿ ಸೋಲನ್ನು ಅನುಭವಿಸಿದ್ದಾರೆ. ಪುರುಷ ಬಿಲ್ಲುಗಾರರು ವಿಫಲರಾದ ಬಳಿಕ ದೀಪಿಕಾಳಿಂದ ಪದಕ (Medal) ನಿರೀಕ್ಷಿಸಲಾಗುತ್ತಿದೆ. ಈ ಮೊದಲು ಭಾರತದ ದೀಪಿಕಾ-ಪ್ರವೀಣ್ ಜೋಡಿ  ಬಿಲ್ಲುಗಾರಿಕೆಯ ಮಿಕ್ಸೆಡ್ ಇವೆಂಟ್ ನ ಕ್ವಾರ್ಟರ್ ಫೈನಲ್ ನಲ್ಲಿ ದಕ್ಷಿಣ ಕೊರಿಯಾದ ಜೋಡಿ ಆನ್ ಸಾನ್-ಕಿಮ್ ಜೋ ದಿವೊಕ್ ವಿರುದ್ಧ 2-6ರಿಂದ ಸೋಲನ್ನು ಅನುಭವಿಸಿದೆ.

ಇದನ್ನೂ ಓದಿ-ಚೀನಾದ ವೇಟ್‌ಲಿಫ್ಟರ್ ಗೆ ಡೋಪಿಂಗ್ ಕಂಟಕ: ಮೀರಾಬಾಯಿ ಚಾನುಗೆ ಚಿನ್ನದ ಪದಕ ಸಾಧ್ಯತೆ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News