ಇಂಗ್ಲೆಂಡ್ ವಿರುದ್ಧ ಗೆಲ್ಲಬೇಕಾದ್ರೆ ಟೀಂ ಇಂಡಿಯಾ ಈ 2 ಕೆಲಸ ಮಾಡಲೇಬೇಕು!
ಸದ್ಯ ಎರಡು ದಿನಗಳ ಟೆಸ್ಟ್ ಪಂದ್ಯ ಮುಗಿದಿದೆ. ಎರಡರಲ್ಲೂ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದ್ದು, ನಾಯಕ ಜಸ್ಪ್ರೀತ್ ಬುಮ್ರಾ ಬಿರುಸಿನ ಆಟವಾಡಿದ್ದಾರೆ. ಇನ್ನು ಪಂದ್ಯದ ಮೂರನೇ ದಿನವಾದ ಇಂದು ಭಾರತ ತಂಡವು ಯಾವ ರೀತಿ ಪ್ರದರ್ಶನ ನೀಡುತ್ತೆ ಎಂಬುದನ್ನು ಕಾದುನೋಡಬೇಕಿದೆ. ಒಂದು ವೇಳೆ ಈ ಎರಡು ಕೆಲಸಗಳನ್ನು ಮಾಡಿದರೆ, ಟೀಂ ಇಂಡಿಯಾಗೆ ಗೆಲುವು ಖಚಿತವಾಗುತ್ತದೆ.
ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿದೆ. ಕಳೆದ ದಿನ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿದ್ದು, ಜಡೇಜಾ ಶತಕ ಸಿಡಿಸಿದ್ದಾರೆ. ಈ ಪಂದ್ಯ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾಗೆ ಕೊರೊನಾ ಸೋಂಕು ತಗುಲಿದ್ದ ಕಾರಣ, ಜಸ್ಪ್ರೀತ್ ಬುಮ್ರಾಗೆ ಟೀಂ ಇಂಡಿಯಾದ ನಾಯಕತ್ವವನ್ನು ವಹಿಸಲಾಗಿತ್ತು.
ಇದನ್ನೂ ಓದಿ: Vegetable Price: ಇಂದಿನ ತರಕಾರಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ವಿವರ
ಸದ್ಯ ಎರಡು ದಿನಗಳ ಟೆಸ್ಟ್ ಪಂದ್ಯ ಮುಗಿದಿದೆ. ಎರಡರಲ್ಲೂ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದ್ದು, ನಾಯಕ ಜಸ್ಪ್ರೀತ್ ಬುಮ್ರಾ ಬಿರುಸಿನ ಆಟವಾಡಿದ್ದಾರೆ. ಇನ್ನು ಪಂದ್ಯದ ಮೂರನೇ ದಿನವಾದ ಇಂದು ಭಾರತ ತಂಡವು ಯಾವ ರೀತಿ ಪ್ರದರ್ಶನ ನೀಡುತ್ತೆ ಎಂಬುದನ್ನು ಕಾದುನೋಡಬೇಕಿದೆ. ಒಂದು ವೇಳೆ ಈ ಎರಡು ಕೆಲಸಗಳನ್ನು ಮಾಡಿದರೆ, ಟೀಂ ಇಂಡಿಯಾಗೆ ಗೆಲುವು ಖಚಿತವಾಗುತ್ತದೆ.
1. ಮೊದಲ ಸೆಷನ್‌ನಲ್ಲಿ ಇಂಗ್ಲೆಂಡ್ ಆಲೌಟ್ ಮಾಡಬೇಕು:
ಮೊದಲ ದಿನ ಭಾರತದ ಬೌಲರ್‌ಗಳು ಅಮೋಘ ಆಟ ಪ್ರದರ್ಶಿಸಿದ್ದಾರೆ. ನಾಯಕ ಬುಮ್ರಾ 3 ವಿಕೆಟ್ ಪಡೆದಿದ್ದಾರೆ. ಅಂತೆಯೇ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ತಲಾ ಒಂದೊಂದು ವಿಕೆಟ್ ಉರುಳಿಸಿದ್ದಾರೆ. ಇದೇ ರೀತಿ ಉತ್ತಮ ಪ್ರದರ್ಶನ ತೋರುವ ಮೂಲಕ ಮೂರನೇ ದಿನದ ಮೊದಲ ಅವಧಿಯಲ್ಲೇ ಇಂಗ್ಲೆಂಡ್‌ನ ಉಳಿದ ಐದು ವಿಕೆಟ್‌ಗಳನ್ನು ಕಬಳಿಸಿದರೆ, ಪಂದ್ಯದ ಮೇಲಿನ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ ಮತ್ತು ಅಪಾಯಕಾರಿ ಜಾನಿ ಬೈರ್‌ಸ್ಟೋವ್ ಕ್ರೀಸ್‌ನಲ್ಲಿದ್ದಾರೆ. ಭಾರತ ಈ ಇಬ್ಬರ ವಿಕೆಟ್‌ಗಳನ್ನು ಬಹುಬೇಗ ಕಬಳಿಸುವ ಅವಶ್ಯಕತೆ ಇದೆ.
2. ಆರಂಭಿಕ ಆಟಗಾರರು ಮೋಡಿ ಮಾಡಬೇಕು:
ಇಂಗ್ಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಆರಂಭಿಕ ಜೋಡಿ ವಿಶೇಷವಾಗಿ ಏನನ್ನೂ ಸಾಧಿಸಲಿಲ್ಲ. ಹೀಗಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಆರಂಭಿಕ ಜೋಡಿ ಅಬ್ಬರದ ಆರಂಭ ನೀಡುವ ಜವಾಬ್ದಾರಿಯನ್ನು ಹೊತ್ತಿದೆ. ಆಗ ಮಾತ್ರ ಭಾರತ ತಂಡ ಪಂದ್ಯದಲ್ಲಿ ದೊಡ್ಡ ಮುನ್ನಡೆ ಸಾಧಿಸಲು ಸಾಧ್ಯವಾಗುತ್ತದೆ. ಮೊದಲ ಇನ್ನಿಂಗ್ಸ್‌ನಲ್ಲಿ ಶುಭಮನ್ ಗಿಲ್ 17 ರನ್ ಮತ್ತು ಚೇತೇಶ್ವರ ಪೂಜಾರ 13 ರನ್ ಗಳಿಸಿದ್ದರು. ಇನ್ನು ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯಿಂದ ಸಹ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: Surya Gochar 2022: ಜುಲೈನಲ್ಲಿ ಸೂರ್ಯನು ಈ 3 ರಾಶಿಯವರ ಅದೃಷ್ಟವನ್ನು ಬೆಳಗುತ್ತಾನೆ
ಬುಮ್ರಾ ಸ್ಪೋಟಕ ಆಟ:
ಮಾರಕ ಬೌಲರ್ ಜಸ್ಪ್ರೀತ್ ಬುಮ್ರಾ ಉತ್ತಮ ಹಂತದಲ್ಲಿ ಸಾಗುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧ ಔಟಾಗದೆ 31 ರನ್ ಗಳಿಸಿದ್ದಾರೆ. ಜೊತೆಗೆ 3 ಪ್ರಮುಖ ವಿಕೆಟ್‌ಗಳನ್ನು ಪಡೆದಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.