Amravati Murder: ಕನ್ಹಯ್ಯಲಾಲ್ ಮಾದರಿಯಲ್ಲಿ ಅಮರಾವತಿ ಕೆಮಿಸ್ಟ್ ಹತ್ಯೆ?, ಮಾಸ್ಟರ್ ಮೈಂಡ್ ಅರೆಸ್ಟ್!

ಅಮರಾವತಿ ಹತ್ಯೆ ಪ್ರಕರಣ: ಅಮರಾವತಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಯಶಸ್ಸು ಸಾಧಿಸಿದ್ದಾರೆ. ಕೆಮಿಸ್ಟ್ ಉಮೇಶ್ ಕೋಲ್ಹೆ ಹತ್ಯೆಯ ಮಾಸ್ಟರ್ ಮೈಂಡ್ ಇರ್ಫಾನ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.

Written by - Puttaraj K Alur | Last Updated : Jul 3, 2022, 07:38 AM IST
  • ಉದಯಪುರದ ಟೈಲರ್ ಕನ್ಹಯ್ಯಲಾಲ್ ಹತ್ಯೆ ಮಾದರಿಯಲ್ಲಿಯೇ ಅಮರಾವತಿ ಕೆಮಿಸ್ಟ್ ಕೊಲೆ?
  • ನಾಗ್ಪುರದಲ್ಲಿ ಕೆಮಿಸ್ಟ್ ಉಮೇಶ್ ಕೊಲ್ಹೆ ಹತ್ಯೆಯ ಮಾಸ್ಟರ್ ಮೈಂಡ್ ಬಂಧಿಸಿದ ಪೊಲೀಸರು
  • ಜೂನ್ 21ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ 54 ವರ್ಷದ ರಸಾಯನಶಾಸ್ತ್ರಜ್ಞನ ಹತ್ಯೆ ನಡೆದಿತ್ತು
Amravati Murder: ಕನ್ಹಯ್ಯಲಾಲ್ ಮಾದರಿಯಲ್ಲಿ ಅಮರಾವತಿ ಕೆಮಿಸ್ಟ್ ಹತ್ಯೆ?, ಮಾಸ್ಟರ್ ಮೈಂಡ್ ಅರೆಸ್ಟ್!  title=
ಅಮರಾವತಿ ಹತ್ಯೆ ಪ್ರಕರಣ

ನವದೆಹಲಿ: ಉದಯಪುರದ ಟೈಲರ್ ಕನ್ಹಯ್ಯಲಾಲ್ ಹತ್ಯೆ ಮಾದರಿಯಲ್ಲಿ ಮಹಾರಾಷ್ಟ್ರದ ಅಮರಾವತಿಯಲ್ಲಿ ಔಷಧ ವ್ಯಾಪಾರಿಯ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಕೆಮಿಸ್ಟ್ ಉಮೇಶ್ ಕೊಲ್ಹೆ ಹತ್ಯೆಯ ಮಾಸ್ಟರ್ ಮೈಂಡ್ ನನ್ನು ಪೊಲೀಸರು ನಾಗ್ಪುರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ನಾಗ್ಪುರದ ಎನ್‌ಜಿಒ ಮಾಲೀಕ ಇರ್ಫಾನ್ ಖಾನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಕೆಮಿಸ್ಟ್ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಇರ್ಫಾನ್ ಕೊಲೆಯ ಸಂಪೂರ್ಣ ಯೋಜನೆ ಸಿದ್ಧಪಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇತರ ಆರೋಪಿಗಳನ್ನು ಕೊಲೆಗೆ ಪ್ರೇರೇಪಿಸುವ ಕೆಲಸವನ್ನೂ ಇರ್ಫಾನ್ ಖಾನ್ ಮಾಡಿದ್ದನೆಂದು ತಿಳಿದುಬಂದಿದೆ.

ಇದನ್ನೂ ಓದಿ: 'ದೇಶದಲ್ಲಿ ದ್ವೇಷ ಮತ್ತು ಕೋಪದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ'

ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಕೆಮಿಸ್ಟ್ ಕೊಲೆ?

ಜೂನ್ 21ರಂದು ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ 54 ವರ್ಷದ ರಸಾಯನಶಾಸ್ತ್ರಜ್ಞನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಕ್ಕೆ ಮಹಾರಾಷ್ಟ್ರದಲ್ಲಿ ಈ ಬರ್ಬರ ಹತ್ಯೆ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಮರಾವತಿಯಲ್ಲಿ ಉಮೇಶ್ ಕೊಲ್ಹೆ ಅವರು ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರು.

ಎನ್‌ಐಎ ಅಧಿಕಾರಿಗಳಿಂದ ತನಿಖೆ

ಅಂದು ರಾತ್ರಿ 10ರಿಂದ 10.30ರ ನಡುವೆ ಕೊಲ್ಹೆ ಅಂಗಡಿ ಮುಚ್ಚಿ ಬೈಕ್ ನಲ್ಲಿ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು. ಅವರ ಮಗ ಸಾಕೇತ್ (27) ಮತ್ತು ಅವರ ಪತ್ನಿ ವೈಷ್ಣವಿ ಅವರು ಪ್ರತ್ಯೇಕ ವಾಹನದಲ್ಲಿ ಬಂದಿದ್ದರು. ಹತ್ಯೆಯ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸಲಿದೆ ಎಂದು ಗೃಹ ಸಚಿವಾಲಯದ ವಕ್ತಾರರು ಶನಿವಾರ ತಿಳಿಸಿದ್ದಾರೆ. ಜೂನ್ 21ರಂದು ಹತ್ಯೆಗೀಡಾದ ಉಮೇಶ್ ಕೋಲ್ಹೆ ಹತ್ಯೆಯ ಹಿಂದಿನ ಸಂಚಿನ ಬಗ್ಗೆ ಎನ್‌ಐಎ ತನಿಖೆ ನಡೆಸಲಿದೆ ಎಂದು ವಕ್ತಾರರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಕನ್ಹಯ್ಯ ಲಾಲ್‌ ಹತ್ಯೆಗೆ ಪಾಕ್‌ನಿಂದ ಬಂದಿತ್ತು ಆದೇಶ!

ಇದುವರೆಗೆ 7 ಮಂದಿಯನ್ನು ಬಂಧಿಸಲಾಗಿದೆ

ಈ ಹತ್ಯೆ ಪ್ರಕರಣದ ಹಿಂದೆ ಯಾವುದೇ ಸಂಘಟನೆಗಳು ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಒಳಗೊಳ್ಳುವಿಕೆಯ ಬಗ್ಗೆ ಎನ್ಐಎ ಕೂಲಂಕುಷವಾಗಿ ತನಿಖೆ ನಡೆಸಲಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಬಂಧನದೊಂದಿಗೆ ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 7 ಮಂದಿಯನ್ನು ಬಂಧಿಸಿದಂತಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News