ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ 3ನೇ ಹಾಗೂ ಕೊನೆಯ ಪಂದ್ಯದಲ್ಲಿ ಸೋಲು ಕಂಡರೂ ಭಾರತ ತಂಡ ಸರಣಿ ಗೆಲುವು ಸಾಧಿಸಿದೆ. ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ 66 ರನ್‍ಗಳಿಂದ ಗೆಲುವು ಸಾಧಿಸಿತು.  


COMMERCIAL BREAK
SCROLL TO CONTINUE READING

ಟಾಸ್ ಗೆದ್ದ ಆಸ್ಟ್ರೇಲಿಯಾ ನಿಗದಿತ 50 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 352 ರನ್‍ಗಳ ಬೃಹತ್ ಮೊತ್ತ ಪೇರಿಸಿತು. ಆಸೀಸ್ ಪರ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (56) ಹಾಗೂ ಮಿಚೆಲ್ ಮಾರ್ಷ್ (96) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಬಳಿಕ ಬಂದ ಸ್ವೀವ್ ಸ್ಮಿತ್ (74) ಮತ್ತು ಮಾರ್ನಸ್ ಲಾಬುಶೇನ್ (72) ಸಹ ಭರ್ಜರಿ ಅರ್ಧಶತಕ ಬಾರಿಸಿದರು. ಈ ನಾಲ್ವರ ಸ್ಫೋಟಕ ಆಟದ ಪರಿಣಾಮ ಆಸ್ಟ್ರೇಲಿಯಾ 350ರ ಗಡಿ ದಾಟಿ ಭಾರತಕ್ಕೆ ಬೃಹತ್ ಮೊತ್ತದ ಟಾರ್ಗೆಟ್ ನೀಡಲು ಸಾಧ್ಯವಾಯಿತು. ಭಾರತದ ಪರ ಬೌಲಿಂಗ್‍ನಲ್ಲಿ ಜಸ್ಪ್ರೀತ್ ಬುಮ್ರಾ 3, ಕುಲದೀಪ್ ಯಾದವ್ 3, ಪ್ರಸಿಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.


12 ವರ್ಷಗಳ ನಂತರ ವಿಶ್ವಕಪ್ ನಲ್ಲಿ ವಿಜಯ ಪತಾಕೆ ಹಾರಿಸಲಿದೆಯಂತೆ ಭಾರತ ! ಯಾವ ಲೆಕ್ಕಾಚಾರದಲ್ಲಿ ಅನ್ನುವ ಮಾಹಿತಿ ಇಲ್ಲಿದೆ !


ಚೇಸಿಂಗ್‍ನಲ್ಲಿ ಎಡವಿದ ಭಾರತ..!


ಆಸ್ಟ್ರೇಲಿಯಾದ ಬೃಹತ್ ಮೊತ್ತದ ಟಾರ್ಗೆಟ್ ಬೆನ್ನತ್ತಿದ ಭಾರತ ತಂಡ ಆರಂಭದಲ್ಲಿ ಉತ್ತಮ ಚೇಸಿಂಗ್ ನಡೆಸಿತು. ನಾಯಕ ರೋಹಿತ್ ಶರ್ಮಾ(81) ಭರ್ಜರಿ ಅರ್ಧಶತಕ ಬಾರಿಸಿದರು. ವಿರಾಟ್ ಕೊಹ್ಲಿ(56), ಶ್ರೇಯಸ್ ಅಯ್ಯರ್(48), ರವೀಂದ್ರ ಜಡೇಜಾ(35) ಮತ್ತು ಕೆ.ಎಲ್.ರಾಹುಲ್(26) ರನ್ ಗಳಿಸಿದರು. ಆಸೀಸ್ ಬೌಲರ್‍ಗಳ ದಾಳಿಗೆ ನಲುಗಿದ ಭಾರತ ಅಂತಿಮವಾಗಿ 49.4 ಓವರ್‍ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 286 ರನ್ ಗಳಿಸಿತು.   


ಆಸ್ಟ್ರೇಲಿಯಾ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ 4 ವಿಕೆಟ್ ಕಬಳಿಸಿ ಮಿಂಚಿದರು. ಜೋಶ್ ಹ್ಯಾಜಲ್ವುಡ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್, ಕ್ಯಾಮರೂನ್ ಗ್ರೀನ್ & ತನ್ವೀರ್ ಸಂಘ ತಲಾ ಒಂದೊಂದು ವಿಕೆಟ್ ಪಡೆದರು. ಅಂತಿಮ ಏಕದಿನ ಪಂದ್ಯದಲ್ಲಿ ಸೋತರೂ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದುಕೊಂಡಿದೆ. 3 ಪಂದ್ಯಗಳ ಈ ಸರಣಿಯ ಮೊದಲ 2 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿತ್ತು. ಹೀಗಾಗಿ ಭಾರತ 2-1 ಅಂತರದಿಂದ  ಸರಣಿ ಗೆಲುವು ಸಾಧಿಸಿತು.


ಇದನ್ನೂ ಓದಿ: IND VS AUS ಸರಣಿಯ ನಡುವೆ ಶಾಕಿಂಗ್ ನ್ಯೂಸ್, ಈ ಆಟಗಾರನಿಗೆ ಎರಡು ಪಂದ್ಯಗಳಿಗೆ ನಿಷೇಧ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.