IND vs ENG : ಮೊದಲ ಟಿ20 ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಬಿಗಿದೆ. ರೋಹಿತ್ ಶರ್ಮಾ ನಾಯಕತ್ವದ ಇಂಗ್ಲೆಂಡ್ ವಿರುದ್ಧ ಭಾರತ 50 ರನ್‌ಗಳ ಜಯ ಸಾಧಿಸಿದೆ. ಎರಡನೇ ಟಿ-20 ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡವು 2-0 ಅಂತರದಲ್ಲಿ ಸರಣಿಯನ್ನು ಗೆಲ್ಲುವ ತವಕದಲ್ಲಿದೆ. ಇದಕ್ಕಾಗಿ ನಾಯಕ ರೋಹಿತ್ ಶರ್ಮಾ ಟೀಂ ಇಂಡಿಯಾದಲ್ಲಿ ಭಾರಿ ಬದಲಾವಣೆ ಮಾಡಬಹುದು. ಇದರಿಂದ ಅನೇಕ ಫ್ಲಾಪ್ ಆಟಗಾರರಿಗೆ ಚಾನ್ಸ್ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಓಪನರ್ ಜೋಡಿ ಇದಾಗಿದೆ


ಓಪನರ್ ಜೋಡಿ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಇಳಿಯುವುದು ಖಚಿತವಾಗಿದೆ. ಇಶಾನ್ ಕಿಶನ್ ಕಳೆದ ಪಂದ್ಯದಲ್ಲಿ ಹೆಸರಿಗೆ ತಕ್ಕಂತೆ ಪ್ರದರ್ಶನ ನೀಡದಿರಬಹುದು, ಆದರೆ ಅವರು ಶ್ರೇಷ್ಠ ಮಟ್ಟದ ಆಟಗಾರ. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡುವುದು ಖಚಿತ.


ಇದನ್ನೂ ಓದಿ : ಹೇಗಿತ್ತು ಸೌರವ್ ಗಂಗೂಲಿ 50ನೇ ಹುಟ್ಟುಹಬ್ಬದ ಸಂಭ್ರಮ?


ಈ ಆಟಗಾರರಿಗೆ ಸಿಗಬಹುದು ಅವಕಾಶ 


ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ನಾಲ್ಕನೇ ಕ್ರಮಾಂಕದಲ್ಲಿ ಅವಕಾಶ ಪಡೆಯಬಹುದು. ಅದೇ ವೇಳೆ ಹಾರ್ದಿಕ್ ಪಾಂಡ್ಯ ಐದನೇ ಕ್ರಮಾಂಕದಲ್ಲಿ ಸ್ಥಾನ ಪಡೆಯಬಹುದು. ಮೊದಲ ಟಿ20 ಪಂದ್ಯದಲ್ಲಿ ಹಾರ್ದಿಕ್ ಬಿರುಸಿನ ಆಟ ತೋರಿದರು. ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಆ ಕಲೆ ಹಾರ್ದಿಕ್ ಅವರಿಗಿದೆ. ಅದೇ ಸಮಯದಲ್ಲಿ ರಿಷಬ್ ಪಂತ್ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.


ರೋಹಿತ್‌ಗೆ ಈ ಬೌಲರ್‌ಗಳ ಮೇಲೆ ನಂಬಿಕೆ


ಇಂಗ್ಲೆಂಡ್‌ನ ಪಿಚ್‌ಗಳು ಯಾವಾಗಲೂ ವೇಗದ ಬೌಲರ್‌ಗಳಿಗೆ ಸಹಾಯಕವಾಗಿವೆ. ಈ ಪಿಚ್‌ಗಳಲ್ಲಿ ವಿನಾಶವನ್ನುಂಟುಮಾಡಲು ಭಾರತವು ಭುವನೇಶ್ವರ್ ಕುಮಾರ್, ಹರ್ಷಲ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಬೌಲರ್‌ಗಳನ್ನು ಹೊಂದಿದೆ. ಅದೇ ಸಮಯದಲ್ಲಿ, ಯುಜ್ವೇಂದ್ರ ಚಹಾಲ್ ಸ್ಪಿನ್ ಜವಾಬ್ದಾರಿಯನ್ನು ವಹಿಸುತ್ತಾರೆ. ರವೀಂದ್ರ ಜಡೇಜಾ ಆಲ್ ರೌಂಡರ್ ಆಗಿ ಸ್ಥಾನ ಪಡೆಯಬಹುದು. ಭುವನೇಶ್ವರ್ ಕುಮಾರ್ ಅವರು ಟಿ20 ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವ ಹೊಂದಿದ್ದು, ತಂಡಕ್ಕೆ ಇದು ಉಪಯುಕ್ತವಾಗಿದೆ.


ಇದನ್ನೂ ಓದಿ : ಭಾರತದ ಟಿ 20 ತಂಡದಿಂದ ಹೊರಕ್ಕೆ ಹೋಗ್ತಾರಾ ವಿರಾಟ್ ಕೊಹ್ಲಿ?


1ನೇ T20Iಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI:


ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್, ಹರ್ಷಲ್ ಪಟೇಲ್ ಮತ್ತು ರವೀಂದ್ರ ಜಡೇಜಾ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ