Ind vs Eng: ಮೂರನೇ T20 ಪಂದ್ಯದ ಸೋಲಿನ ಕಾರಣ ಹೇಳಿದ ಕೊಹ್ಲಿ!
ಮೂರನೇ ಟಿ20 ಪಂದ್ಯದ ಫೀಲ್ಡಿಂಗ್ ವೇಳೆ ಭಾರತ ತಂಡದ ಆಟಗಾರರ ಬಾಡಿ ಲಾಂಗ್ವೇಜ್ ಸರಿ ಇರಲಿಲ್ಲವೆಂದು
ಅಹ್ಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಮೂರನೇ ಟಿ20 ಪಂದ್ಯದ ಫೀಲ್ಡಿಂಗ್ ವೇಳೆ ಭಾರತ ತಂಡದ ಆಟಗಾರರ ಬಾಡಿ ಲಾಂಗ್ವೇಜ್ ಸರಿ ಇರಲಿಲ್ಲವೆಂದು ನಾಯಕ ವಿರಾಟ್ ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು.
157 ರನ್ ಗುರಿ ಹಿಂಬಾಲಿಸಿದ್ದ ಇಂಗ್ಲೆಂಡ್ ತಂಡದ ವಿರುದ್ಧ ಭಾರತ(Team India)ದ ಬೌಲರ್‌ಗಳು ಆರಂಭದಲ್ಲಿ ಉತ್ತಮ ಬೌಲಿಂಗ್ ಮಾಡಿದ್ದರು. ನಾಲ್ಕನೇ ಓವರ್‌ನಲ್ಲಿ ಯುಜ್ವೇಂದ್ರ ಚಹಲ್ ಜೇಸನ್ ರಾಯ್ ವಿಕೆಟ್ ಕಿತ್ತಿದ್ದರು. ಆದರೆ, ತಂಡದ ಫೀಲ್ಡಿಂಗ್ ವೈಫಲ್ಯದಿಂದ ಟೀಮ್ ಇಂಡಿಯಾ ಭಾರಿ ಹಿನ್ನಡೆ ಅನುಭವಿಸಿತು.
Saba Karim: 'ಭಾರತ ತಂಡಕ್ಕೆ ಇಬ್ಬರು ಧೋನಿ ಸಿಗಲಿದ್ದಾರಂತೆ'
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಕೆ.ಎಲ್ ರಾಹುಲ್(KL Rahul), ರೋಹಿತ್ ಶರ್ಮಾ, ಇಶಾನ್ ಕಿಶಾನ್ ಬಹುಬೇಗ ವಿಕೆಟ್ ಒಪ್ಪಿಸಿದರು. ಆದರೆ, ನಾಯಕ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನಡೆಸಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ತಂಡಕ್ಕೆ ನೆರವಾಗಿದ್ದರು. ಪಂದ್ಯದ ಬಳಿಕ ಮಾತನಾಡಿದ್ದ ವಿರಾಟ್, ಫೀಲ್ಡಿಂಗ್ ವೈಫಲ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
Ind vs Eng: ವಿಜಯದ ನಂತರ ಭಾರತಕ್ಕೆ ಕಹಿ ಸುದ್ದಿ, Team India ವಿರುದ್ಧ ಕ್ರಮ
'ದ್ವಿತೀಯಾರ್ಧದಲ್ಲಿ ನಮ್ಮಲ್ಲಿ ತೀವ್ರತೆಯ ಕೊರತೆ ಎದ್ದು ಕಾಣುತ್ತಿತ್ತು. ನಾವು ಕಮ್‌ಬ್ಯಾಕ್ ಮಾಡಲು ಪ್ರಯತ್ನ ನಡೆಸಿದೆವು ಆದರೂ, ಎರಡನೇ ಇನಿಂಗ್ಸ್(Second Innings)ನಲ್ಲಿ ನಮ್ಮ ತಂಡದ ಬಾಡಿ ಲಾಂಗ್ವೇಜ್ ಚೆನ್ನಾಗಿರಲಿಲ್ಲ ಎಂದು ಭಾವಿಸುತ್ತೇನೆ,' ಎಂದು 46 ಎಸೆತಗಳಲ್ಲಿ ಅಜೇಯ 77 ರನ್ ಸಿಡಿಸಿದ್ದ ವಿರಾಟ್ ಕೊಹ್ಲಿ ಹೇಳಿದರು.
ಭಾರತದ ವೇಗಿ ಜಸ್ಪ್ರೀತ್ ಬುಮ್ರಾಗೆ ಕಂಕಣ ಭಾಗ್ಯ...!
ಟಿ20 ಸರಣಿಯ ಆರಂಭಿಕ ಮೂರು ಪಂದ್ಯಗಳ ಭವಿಷ್ಯ ನಿರ್ಧರಿಸುವಲ್ಲಿ ಟಾಸ್(Toss) ಮಹತ್ವದ ಪಾತ್ರ ವಹಿಸಿದೆ ಎಂದು ವಿರಾಟ್ ಕೊಹ್ಲಿ ವಿಷಾದಿಸಿದರು. ಕಳೆದ ಮೂರೂ ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದ ತಂಡಗಳು, ಚೇಸಿಂಗ್ ಆಯ್ಕೆ ಮಾಡಿಕೊಂಡು ಗೆಲುವು ಪಡೆದಿವೆ.
ಟಾಸ್ ಪಂದ್ಯದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದೆ. ನೀವು ಟಾಸ್ ಸೋತರೆ ಪಂದ್ಯ(Match) ಆರಂಭಕ್ಕೂ ಮೊದಲೇ ನಿಮಗೆ ಹಿನ್ನಡೆಯಾಗುತ್ತದೆ. ಮೊದಲನೇ ಇನಿಂಗ್ಸ್‌ನಲ್ಲಿ ಹೊಸ ಚೆಂಡಿನೊಂದಿಗೆ ಆಡುವುದು ತುಂಬಾ ಕಠಿಣವಾಗಿದೆ. ಇದರ ಲಾಭ ಪಡೆದ ಇಂಗ್ಲೆಂಡ್ ತಂಡದ ವೇಗಿಗಳು ಹೆಚ್ಚುವರಿ ವೇಗದೊಂದಿಗೆ ಉತ್ತಮ ಸ್ಥಳಗಳಲ್ಲಿ ಪಿಚ್ ಮಾಡುತ್ತಿದ್ದರು," ಎಂದರು.
T20 ಇಂಟರ್‌ನ್ಯಾಷನಲ್‌ನಲ್ಲಿ ಇತಿಹಾಸ ಸೃಷ್ಟಿಸಿದ Virat Kohli
'ಪಂದ್ಯಕ್ಕೆ ಜತೆಯಾಟ ತುಂಬಾ ಮುಖ್ಯ. ರಿಷಭ್ ಪಂತ್(Rishabh Pant) ಹಾಗೂ ನನ್ನಿಂದ ಚಿಕ್ಕ ಜತೆಯಾಟ ಮೂಡಿಬಂದಿತು. ಪಂತ್ ಔಟಾದ ಬಳಿಕ ಮೊದಲನೇ ಅವಧಿಯಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ತಿಣುಕಾಡಿದ್ದರು. ಆದರೆ, ಲೈನ್‌ನಲ್ಲಿ ಇರುವ ಎಸೆತಗಳನ್ನು ಹೊಡೆಯುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಕೊನೆಯವರೆಗೂ ಬ್ಯಾಟಿಂಗ್ ಮಾಡುವುದು ನನ್ನ ಪಾಲಿಗೆ ತುಂಬಾ ಮುಖ್ಯವಾಗಿತ್ತು,' ಎಂದು ತಿಳಿಸಿದರು.
India vs England, 2nd T20I: ಕೊಹ್ಲಿ ,ಇಶಾಂತ್ ಕಿಶನ್ ಸ್ಪೋಟಕ ಬ್ಯಾಟಿಂಗ್ ನಿಂದಾಗಿ ಭಾರತಕ್ಕೆ ಗೆಲುವು
'ಹಾರ್ದಿಕ್ ಪಾಂಡ್ಯಗೆ ಬೌಲಿಂಗ್(Bowling)ನಲ್ಲಿ ಇನ್ನಷ್ಟು ಜವಾಬ್ದಾರಿಯನ್ನು ನೀಡಬೇಕಾದ ಅಗತ್ಯವಿದೆ. ಏಕೆಂದರೆ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಇದು ಬಹಳ ಮುಖ್ಯವಾಗಿದೆ. ಅವರು ಬೌಲಿಂಗ್ ಮಾಡಿ ತುಂಬಾ ತಿಂಗಳುಗಳಾಗಿದ್ದರೂ ಅವರು ಉತ್ತಮವಾಗಿಯೇ ಎಸೆಯುತ್ತಿದ್ದಾರೆ,' ಎಂದು ವಿರಾಟ್ ಕೊಹ್ಲಿ ಸಹ ಆಟಗಾರನ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ನಾಳೆ ಇದೇ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ನಾಲ್ಕನೇ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
Vijay Hazare Trophy Final: 4ನೇ ಬಾರಿಗೆ 'ವಿಜಯ್ ಹಜಾರೆ ಟ್ರೋಫಿ' ಗೆದ್ದ ಮುಂಬೈ ತಂಡ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.