Virat Kohli: ಮತ್ತೊಮ್ಮೆ ತಂದೆಯಾಗುವ ಸೂಚನೆ ನೀಡಿದ ವಿರಾಟ್ ಕೊಹ್ಲಿ..?
India vs England: ವಿರಾಟ್ ಕೊಹ್ಲಿ ಇದೀಗ ಏಕೆ ಆಡುತ್ತಿಲ್ಲವೆಂಬುದರ ಬಗ್ಗೆ ಶೀಘ್ರವೇ ನಾನು ಸರಿಯಾದ ಕಾರಣ ತಿಳಿದುಕೊಳ್ಳುತ್ತೇನೆ. ಆದರೆ ನಾನು ಇದರ ಬಗ್ಗೆ ನಿಮಗೆ ಹೇಳುವುದಿಲ್ಲ. ಏಕೆಂದರೆ ಅವರ ಸ್ನೇಹ ನನಗೆ ಬಹಳ ಮುಖ್ಯʼವೆಂದು ಹೇಳುವ ಮೂಲಕ ಎಬಿಡಿಯವರು, ಕೊಹ್ಲಿ ಮತ್ತೊಮ್ಮೆ ತಂದೆ ಆಗುತ್ತಿರುವುದರ ಬಗ್ಗೆ ಪರೋಕ್ಷ ಸೂಚನೆ ನೀಡಿದ್ದಾರೆಂದು ವರದಿಯಾಗಿದೆ.
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದೆ. ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಮೊದಲ 2 ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿರುವುದು ಕೋಟ್ಯಂತರ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ. ವೈಯಕ್ತಿಕ ಕಾರಣಗಳಿಂದ ಕೊಹ್ಲಿ ಆಂಗ್ಲರ ವಿರುದ್ಧದ ಮೊದಲ 2 ಟೆಸ್ಟ್ ಪಂದ್ಯಗಳನ್ನು ಆಡುವುದಿಲ್ಲವೆಂದು ಬಿಸಿಸಿಐ ಮಾಹಿತಿ ನೀಡಿದೆ. ವಿರಾಟ್ ಅವರ ಈ ನಿರ್ಧಾರವನ್ನು ಅನೇಕ ಅನುಭವಿ ಆಟಗಾರರು ಗೌರವಿಸಿದ್ದಾರೆ.
ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಸಹ ವಿರಾಟ್ ಪರ ಬ್ಯಾಟ್ ಬೀಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ʼಇಂಗ್ಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಿಂದ ಕೊಹ್ಲಿ ದೂರ ಉಳಿಯಲು ಸರಿಯಾದ ಕಾರಣ ಬಹಿರಂಗವಾಗಿಲ್ಲ. ಆದರೆ ನಾವು ಶೀಘ್ರವೇ ಶುಭಸುದ್ದಿಯನ್ನು ಕೇಳಲಿದ್ದೇವೆ. ವೈಯಕ್ತಿಕ ಕಾರಣಕ್ಕೆ ಕೊಹ್ಲಿ ಬ್ರೇಕ್ ತೆಗೆದುಕೊಳ್ಳುತ್ತಿರುವುದರಲ್ಲಿ ಒಳ್ಳೆಯ ಕಾರಣವಿರುತ್ತದೆ. ಬಹುಶಃ ಅವರು ದಣಿದಿರಬೇಕು, ಹೀಗಾಗಿ ಅವರಿಗೆ ವಿಶ್ರಾಂತಿ ಅಗತ್ಯವಿದೆ. ನಿರಂತರವಾಗಿ ಕ್ರಿಕೆಟ್ ಆಡುತ್ತಿರುವ ಅವರು ಕುಟುಂಬದ ಜೊತೆ ಕೆಲ ಸಮಯ ಕಾಲ ಕಳೆಯಬೇಕುʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭದ್ರತೆಯನ್ನು ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿ ರೋಹಿತ್ ಶರ್ಮಾ ಪಾದ ಮುಟ್ಟಿದ ಅಭಿಮಾನಿ..! ವಿಡಿಯೋ ವೈರಲ್
ʼಕೊಹ್ಲಿ ಇದೀಗ ಏಕೆ ಆಡುತ್ತಿಲ್ಲವೆಂಬುದರ ಬಗ್ಗೆ ಶೀಘ್ರವೇ ನಾನು ಸರಿಯಾದ ಕಾರಣ ತಿಳಿದುಕೊಳ್ಳುತ್ತೇನೆ. ಆದರೆ ನಾನು ಇದರ ಬಗ್ಗೆ ನಿಮಗೆ ಹೇಳುವುದಿಲ್ಲ. ಏಕೆಂದರೆ ಅವರ ಸ್ನೇಹ ನನಗೆ ಬಹಳ ಮುಖ್ಯʼವೆಂದು ಹೇಳುವ ಮೂಲಕ ಎಬಿಡಿಯವರು, ಕೊಹ್ಲಿ ಮತ್ತೊಮ್ಮೆ ತಂದೆ ಆಗುತ್ತಿರುವುದರ ಬಗ್ಗೆ ಪರೋಕ್ಷ ಸೂಚನೆ ನೀಡಿದ್ದಾರೆಂದು ವರದಿಯಾಗಿದೆ.
ವಿರಾಟ್ ಕೊಹ್ಲಿ ನಿರ್ಧಾರದ ಬಗ್ಗೆ ಟ್ವೀಟ್ ಮಾಡಿರುವ ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸನ್, ʼಒಬ್ಬ ಕ್ರೀಡಾಪಟು ವೈಯಕ್ತಿಕ ಕಾರಣಕ್ಕೆ ಆಟದಿಂದ ಹಿಂದೆ ಸರಿದರೆ, ಅವರನ್ನು ಗೌರವಿಸಿʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಚ್ಛೇದನದ ಬಳಿಕ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ Sania Mirza ! ಏನಿದೆ ಈ ಪೋಸ್ಟ್ ನಲ್ಲಿ ?
ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಕೆ.ಎಸ್.ಭರತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪ ನಾಯಕ), ಅವೇಶ್ ಖಾನ್.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.