ವಿಚ್ಛೇದನದ ಬಳಿಕ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ Sania Mirza ! ಏನಿದೆ ಈ ಪೋಸ್ಟ್ ನಲ್ಲಿ ?

Sania Mirza First Post After Divorce :ಇದೀಗ ವಿಚ್ಛೇದನದ ನಂತರ ಸಾನಿಯಾ ಮಿರ್ಜಾ ತಮ್ಮ ಮೊದಲ ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಟೆನಿಸ್ ಆಟಗಾರ್ತಿಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Written by - Ranjitha R K | Last Updated : Jan 26, 2024, 01:09 PM IST
  • ಶೋಯೆಬ್ ಮಲಿಕ್ ತನ್ನ ಮೂರನೇ ಮದುವೆಯನ್ನು ಘೋಷಿಸಿದ್ದಾರೆ
  • ವಿಚ್ಛೇದನದ ಬಳಿಕ ಸಾನಿಯಾ ಮೊದಲ ಪೋಸ್ಟ್
  • ಏನು ಹೇಳಿದ್ದಾರೆ ಸಾನಿಯಾ ?
ವಿಚ್ಛೇದನದ ಬಳಿಕ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ Sania Mirza ! ಏನಿದೆ ಈ ಪೋಸ್ಟ್ ನಲ್ಲಿ ?  title=

Sania Mirza First Post After Divorce : ವಿಚ್ಛೇದನದ ವದಂತಿಗಳ ನಡುವೆ, ಶೋಯೆಬ್ ಮಲಿಕ್ ತನ್ನ ಮೂರನೇ ಮದುವೆಯನ್ನು ಘೋಷಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರೊಂದಿಗೆ ಮೂರನೇ ವಿವಾಹವಾಗಿದ್ದಾರೆ. ಶೋಯೆಬ್ ಮಲಿಕ್ ತನ್ನ ಮೂರನೇ ವಿವಾಹವನ್ನು ಘೋಷಿಸಿದ ತಕ್ಷಣ, ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಈಗಾಗಲೇ ವಿಚ್ಛೇದನ ಪಡೆದಿದ್ದಾರೆ  ಎನ್ನುವುದನ್ನು ಸಾನಿಯಾ ಸಹೋದರಿ ಅನಮ್ ಮಿರ್ಜಾ  ಪ್ರಕಟಿಸಿದ್ದರು. ಇದೀಗ ವಿಚ್ಛೇದನದ ನಂತರ ಸಾನಿಯಾ ಮಿರ್ಜಾ ತಮ್ಮ ಮೊದಲ ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಟೆನಿಸ್ ಆಟಗಾರ್ತಿಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಸಾನಿಯಾ ಮಿರ್ಜಾ ಅವರ ಪೋಸ್ಟ್ ವೈರಲ್ : 
ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್ ನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಫೋಟೋದಲ್ಲಿ, ಸಾನಿಯಾ ಮಿರ್ಜಾ ಬೂದು ಬಣ್ಣದ ಉಡುಪಿನ ಮೇಲೆ ನೀಲಿ ಬಣ್ಣದ ಕೋಟ್ ಧರಿಸಿದ್ದಾರೆ.ಇದರೊಂದಿಗೆ, ಸಾನಿಯಾ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡುತ್ತಿರುವುದು ಕಂಡುಬರುತ್ತದೆ. ಸಾನಿಯಾ ತಮ್ಮ ಇತ್ತೀಚಿನ ಫೋಟೋದ ಶೀರ್ಷಿಕೆಯಲ್ಲಿ  Reflect ಎಂದು ಬರೆದಿದ್ದಾರೆ. ಸಾನಿಯಾಳ ಲುಕ್ ಮತ್ತು ಕಾನ್ಫಿಡೆನ್ಸ್ ನೆಟ್ಟಿಗರನ್ನು ಹೆಚ್ಚು ಆಕರ್ಷಿಸುತ್ತಿದೆ.ಸಾನಿಯಾ ಪೋಸ್ಟ್ ಗೆ ಅಭಿಮಾನಿಗಳಿಂದ  ಕೂಡಾ ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.  

ಇದನ್ನೂ ಓದಿ ಭದ್ರತೆಯನ್ನು ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿ ರೋಹಿತ್ ಶರ್ಮಾ ಪಾದ ಮುಟ್ಟಿದ ಅಭಿಮಾನಿ..! ವಿಡಿಯೋ ವೈರಲ್

ಅಭಿಮಾನಿಗಳು ಹರಿಸುತ್ತಿದ್ದಾರೆ ಪ್ರೀತಿಯ ಸುಧೆ : 
ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮೇಲೆ ಅಭಿಮಾನಿಗಳು ಪ್ರೀತಿಯ ಸುಧೆ ಹರಿಸುತ್ತಿದ್ದಾರೆ. ಸಾನಿಯಾ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಒಬ್ಬರು ರಿಫ್ಲೆಕ್ಟ್  ಎರಡು ವಿಚಾರವನ್ನು ಹೇಳುತ್ತದೆ. ಕ್ಲಾಸ್ ಮತ್ತು ರೆಸ್ಪೆಕ್ಟ್  ಎಂದಿದ್ದಾರೆ. ಮತ್ತೊಬ್ಬರು ಶಕ್ತಿ ಮತ್ತು ಗ್ರೇಸ್ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ನಿನ್ನ ಮೌನ ಅದ್ಭುತವಾಗಿದೆ ಸಾನಿಯಾ ಎಂದಿದ್ದಾರೆ. ಜೀವನದ ಹೊಸ ಅಧ್ಯಾಯದಲ್ಲಿ ಸಾಕಷ್ಟು ಶಕ್ತಿ ಮತ್ತು ಸಂತೋಷ  ನಿಮ್ಮದಾಗಲಿ ಎಂದು ಹರಸಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by Sania Mirza (@mirzasaniar)

ಇದನ್ನೂ ಓದಿ : ಭಾರತೀಯ ಸ್ಪಿನ್ನರ್ ಗಳ ಕೈಚಳಕಕ್ಕೆ ಇಂಗ್ಲೆಂಡ್ 246ಕ್ಕೆ ಆಲೌಟ್, ಟೀಮ್ ಇಂಡಿಯಾ ಶುಭಾರಂಭ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News