ಅಹ್ಮದಾಬಾದ್: India Vs England - ಇಂಗ್ಲೆಂಡ್ ತಂಡದ ವೇಗಿ ಜೋಫ್ರಾ ಆರ್ಚರ್ (Jofra Archer) ಅವರು ಮಾರ್ಚ್ 23 ಭಾರತದ ವಿರುದ್ಧ ಆರಂಭವಾಗಬೇಕಿರುವ ಏಕದಿನ ಸರಣಿ ಮತ್ತು ಮುಂಬರುವ IPL ಟೂರ್ನಿಯಿಂದ (IPL T20 Series) ಬಹುತೇಕ ಹೊರಗುಳಿಯುವ ಸಾಧ್ಯತೆ ಇದೆ ಎಂದು ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ (Eoin Morgan) ಹೇಳಿದ್ದಾರೆ. ಆರ್ಚರ್ ಅವರ ಬಲ ಮೊಣಕೈಯಲ್ಲಿ ಈಗಾಗಲೇ ನೋವಿತ್ತು ಮತ್ತು ಅದು ಇದೀಗ ಮತ್ತಷ್ಟು ತೀವ್ರವಾಗಿದೆ ಎಂದು ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ- India vs England, 5th T20I: ಭಾರತದ ತಂಡಕ್ಕೆ 3-2 ರಿಂದ ಸರಣಿ ಗೆಲುವು


ಆರ್ಚರ್ ಗಾಯದ ಕುರಿತು ಮಹತ್ವದ ಅಪ್ಡೇಟ್
ಜೆಫ್ ಆರ್ಚರ್ ಪುಣೆಯಲ್ಲಿ ಭಾರತದ ವಿರುದ್ಧ ಆರಂಭವಾಗಬೇಕಿರುವ ಸರಣಿಯಲ್ಲಿ ಉಪಸ್ಥಿತರಿರಲಿದ್ದಾರೆ ಎಂಬುದರ ಬಗ್ಗೆ ಇಯಾನ್ ಮಾರ್ಗನ್ ಅವರಿಗೆ ಅನಿಶ್ಚಿತತೆ ಕಾಡುತ್ತಿದೆ. ಶನಿವಾರ ಭಾರತದ ವಿರುದ್ಧ ನಡೆದ ಅಂತಿಮ ಟಿ-20 ಅಂತಾರಾಷ್ಟ್ರೀಯ ಪಂದ್ಯದ ಬಳಿಕ ಮಾತನಾಡಿರುವ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್, 'ಆರ್ಚರ್ ಅವರ ODI ಸರಣಿ (ODI Series) ಆಡುವುದು ಇನ್ನೂ ಖಚಿತವಾಗಿಲ್ಲ. ಅವರ ಸ್ಥಿತಿಯ ಕುರಿತು ಅಂದಾಜು ಪಡೆಯಲು ನಾವು ನಾಳೆಯವರೆಗೆ ಕಾಯಬೇಕು. ಏಕೆಂದರೆ ಏಕೆಂದರೆ ಅವರ ಬಲ ಮೊಣಕೈಗಾಗಿರುವ ಗಾಯ ಮತ್ತಷ್ಟು ತೀವ್ರಗೊಂಡಿದೆ ಹೀಗಾಗಿ ಅವರ ಮೇಲೆ ಉಪಚಾರ ನಡೆಸುವ ಅವಶ್ಯಕತೆ ಇದೆ' ಎಂದು ಹೇಳಿದ್ದಾರೆ.


ಇದನ್ನೂ ಓದಿ-Ind vs Eng: ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಕ್ಕೆ ಭಾರತದ ತಂಡ ಘೋಷಣೆ, ಯಾರಿಗೆ ಅವಕಾಶ!


IPL ಆಡುವುದು ಕೂಡ ಡೌಟ್
ಈ ಬಾರಿಯ IPL ಪಂದ್ಯಾವಳಿ ಏಪ್ರಿಲ್ 9 ರಿಂದ ಆರಂಭಗೊಳ್ಳುತ್ತಿದೆ. ರಾಜಸ್ಥಾನ್ ರಾಯಲ್ಸ್ ಪರ ಆಡುವ ಈ ವೇಗಿ IPL ಟೂರ್ನಿಯ ಮೊದಲ ಕೆಲ ಪಂದ್ಯಗಳಿಗೆ ಅನುಪಸ್ಥಿತರಾಗುವ ಸಾಧ್ಯತೆ ಇದೆ. ಈ ಕುರಿತು ಮಾತನಾಡಿರುವ ಇಯಾನ್ ಮಾರ್ಗನ್, "ವೇಗದ ಬೌಲರ್ಗಳಿಗೆ ಗಾಯದ ಸಮಸ್ಯೆ ಕಾಡುವುದು ಸಾಮಾನ್ಯ. ಸದ್ಯ ಜೆಫ್ರಿ ಸ್ಥಿತಿ ಸರಿಯಾಗಿಲ್ಲ ಹಾಗೂ ಅವರ ಬಗ್ಗೆ ಕಾಳಜಿವಹಿಸುವ ಅವಶ್ಯಕತೆ ಇದೆ" ಎಂದಿದ್ದಾರೆ. ಮೊಣಕೈ ಗಾಯದಿಂದ ಬಳಲುತ್ತಿದ್ದ ಜೆಫ್ರಾ ಆರ್ಚರ್ ಭಾರತದ ವಿರುದ್ಧದ ನಾಲ್ಕನೇ ಟೆಸ್ಟ್ ಗೂ ಕೂಡ ಅನುಪಸ್ಥಿತರಾಗಿದ್ದರು. ಬಳಿಕ ಅವರು ಟಿ-20 ಸರಣಿಯ ವೇಳೆ ತಂಡಕ್ಕೆ ಮರಳಿದ್ದರು. ಈ ಸರಣಿಯ ನಾಲ್ಕನೇ ಪಂದ್ಯದಲ್ಲಿ(4th ODI) ಕೇವಲ 33 ರನ್ ಗಳನ್ನು ನೀಡಿ 4 ವಿಕೆಟ್ ಪಡೆದಿದ್ದ ಅವರು ತಮ್ಮ ಕರಿಯರ್ ನ ಅತ್ಯುತ್ತಮ ಪ್ರದರ್ಶನ ನೀಡಿದ್ದರು.


ಇದನ್ನೂ ಓದಿ-Ind vs Eng: 4 ಓವರ್‌ಗಳ ನಾಯಕತ್ವದಲ್ಲಿ 'ಹಿಟ್ಮ್ಯಾನ್' ಎಂದು ಸಾಬೀತು ಪಡಿಸಿದ Rohit Sharma


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.