India vs England, 5th T20I: ಭಾರತದ ತಂಡಕ್ಕೆ 3-2 ರಿಂದ ಸರಣಿ ಗೆಲುವು

ಮೋಟೆರಾದಲ್ಲಿ ನಡೆದ ಐದನೇ ಟಿ20 ಪಂದ್ಯದಲ್ಲಿ ಭಾರತ ತಂಡವು 36 ರನ್ ಗಳ ಮೂಲಕ ಗೆಲುವು ಸಾಧಿಸುವ ಮೂಲಕ 3-2 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ.

Last Updated : Mar 20, 2021, 11:42 PM IST
India vs England, 5th T20I: ಭಾರತದ ತಂಡಕ್ಕೆ 3-2 ರಿಂದ ಸರಣಿ ಗೆಲುವು  title=

ನವದೆಹಲಿ: ಮೋಟೆರಾದಲ್ಲಿ ನಡೆದ ಐದನೇ ಟಿ20 ಪಂದ್ಯದಲ್ಲಿ ಭಾರತ ತಂಡವು 36 ರನ್ ಗಳ ಮೂಲಕ ಗೆಲುವು ಸಾಧಿಸುವ ಮೂಲಕ 3-2 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ.

ಟಾಸ್ ಗೆದ್ದು ಭಾರತಕ್ಕೆ ಬ್ಯಾಟಿಂಗ್ ಅವಕಾಶ ನೀಡಿದ ಇಂಗ್ಲೆಂಡ್ ತಂಡದ ನಿರೀಕ್ಷೆ ತಕ್ಷಣ ತಪ್ಪಾಯಿತು.ಭಾರತದ ಪರವಾಗಿ ರೋಹಿತ್  ಶರ್ಮಾ (Rohit Sharma) 64( 34 ಎಸೆತ) ವಿರಾಟ್ ಕೊಹ್ಲಿ 80 ರನ್ ಗಳಿಸುವ ಮೂಲಕ ಬೃಹತ್ ರನ್ ಗೆ ಅಡಿಪಾಯ ಹಾಕಿದರು. ನಂತರ ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಅಬ್ಬರದಿಂದಾಗಿ ಭಾರತ ತಂಡವು 2 ವಿಕೆಟ್ ನಷ್ಟಕ್ಕೆ 224 ರನ್ ಗಳ ಬೃಹತ್ ರನ್ ಗಳಿಸಿತು.

ಇದನ್ನೂ ಓದಿ: Ind vs Eng: ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಕ್ಕೆ ಭಾರತದ ತಂಡ ಘೋಷಣೆ, ಯಾರಿಗೆ ಅವಕಾಶ!

ಇನ್ನೊಂದೆಡೆಗೆ 225 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು ಆರಂಭದಲ್ಲಿಯೇ ಜೇಸನ್ ರಾಯ್ ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತ ಎದುರಿಸಿತು.ಆದರೆ ನಂತರ ಬಂದಂತಹ ಜೋಸ್ ಬಟ್ಲರ್ ಹಾಗೂ ಡೇವಿಡ್ ಮಾಲನ್ ಅವರ 129 ರನ್ ಗಳ ಎರಡನೇ ವಿಕೆಟ್ ಜೊತೆಯಾಟ ಪಂದ್ಯದ ಗತಿಯನ್ನೇ ಬದಲಿಸುವಂತಿತ್ತು.ಆದರೆ ಈ ಇಬ್ಬರು ಆಟಗಾರರು ಔಟಾದ ನಂತರ ಇಂಗ್ಲೆಂಡ್ ತಂಡವು ತೀವ್ರ ಕುಸಿತಕ್ಕೆ ಒಳಗಾಯಿತು.ಆ ಮೂಲಕ ಎಂಟು ವಿಕೆಟ್ ನಷ್ಟಕ್ಕೆ 188 ರನ್ ಗಳ್ಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

ಇದನ್ನೂ ಓದಿ: Ind vs Eng: 4 ಓವರ್‌ಗಳ ನಾಯಕತ್ವದಲ್ಲಿ 'ಹಿಟ್ಮ್ಯಾನ್' ಎಂದು ಸಾಬೀತು ಪಡಿಸಿದ Rohit Sharma 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News