2022 ರ ಟಿ20 ವಿಶ್ವಕಪ್‌ನಲ್ಲಿ ಭಾನುವಾರ ಎಂಸಿಜಿಯಲ್ಲಿ ಭಾರತವು ಪಾಕಿಸ್ತಾನವನ್ನು ಎದುರಿಸಲಿದೆ. ಏಷ್ಯಾಕಪ್ ಪಂದ್ಯದಲ್ಲಿ ಪಾಕ್ ವಿರುದ್ಧ ಸೋಲು ಕಂಡಿದ್ದ ಟೀಂ ಇಂಡಿಯಾ, ಇದೀಗ ಸೇಡು ತೀರಿಸಲು ಕಾತುರದಿಂದ ಕಾಯುತ್ತಿದೆ.   


ಇದನ್ನೂ ಓದಿ: IND vs PAK: ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ: ಪಿಚ್ ರಿಪೋರ್ಟ್, ಪ್ಲೇಯಿಂಗ್ 11 ಪಟ್ಟಿ ಹೀಗಿದೆ


ಇನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ T20 ವಿಶ್ವಕಪ್ ವನ್ನು ನೋಡಲು ಇಲ್ಲಿ ಸುಲಭ ಉಪಾಯವನ್ನು ನೀಡಲಾಗಿದೆ. ಭಾನುವಾರ (ಅಕ್ಟೋಬರ್ 23) ನಡೆಯಲಿರುವ T20 ವಿಶ್ವಕಪ್ 2022 ರ ಸೂಪರ್ 12 ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಎದುರಿಸಲಿದೆ. ಮೆಲ್ಬೋರ್ನ್‌ನ ಎಂಸಿಜಿ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಇನ್ನು ಈ ಪಂದ್ಯ ಭಾರತೀಯ ಕಾಲಮಾನ 1:30 ಕ್ಕೆ ಪ್ರಾರಂಭವಾಗಲಿದೆ.


ಇನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಭಾರತದಲ್ಲಿ ನ್ಯೂಜಿಲೆಂಡ್ ಹೋಮ್ ಪಂದ್ಯಗಳನ್ನು ಪ್ರಸಾರ ಮಾಡುವ ಹಕ್ಕನ್ನು ಹೊಂದಿದೆ. ಭಾರತ ಮತ್ತು ಪಾಕಿಸ್ತಾನದ T20 ವಿಶ್ವಕಪ್ ಪಂದ್ಯವು ಭಾರತದಲ್ಲಿನ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮ್ ಆಗಲಿದೆ.


ಇನ್ನು ಪಾಕಿಸ್ತಾನದಲ್ಲಿ PTV ಸ್ಪೋರ್ಟ್ಸ್, ಭಾರತ vs ಪಾಕಿಸ್ತಾನ T20 ವಿಶ್ವಕಪ್ 2022 ರ ಪ್ರಸಾರವನ್ನು ವೀಕ್ಷಕರಿಗೆ ಪ್ರಸ್ತುತಪಡಿಸುತ್ತದೆ. ಲೈವ್ ಸ್ಟ್ರೀಮಿಂಗ್ PTV ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.


ಸಂಭಾವ್ಯ ಆಟಗಾರರ ಪಟ್ಟಿ:


ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.


ಇದನ್ನೂ ಓದಿ: IND vs PAK: ರೋಹಿತ್ ಪಡೆಗೆ ಗುಡ್ ನ್ಯೂಸ್: ಹೈವೋಲ್ಟೇಜ್ ಪಂದ್ಯದಿಂದ ಹೊರಬಿದ್ದ ಪಾಕ್ ನ ಈ ಆಟಗಾರ


ಪಾಕಿಸ್ತಾನ ತಂಡ: ಬಾಬರ್ ಅಜಮ್ (ಕ್ಯಾ), ಮೊಹಮ್ಮದ್ ರಿಜ್ವಾನ್ (ವಿ.ಕೀ), ಶಾನ್ ಮಸೂದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹೈದರ್ ಅಲಿ, ಇಫ್ತಿಕರ್ ಅಹ್ಮದ್, ಆಸಿಫ್ ಅಲಿ, ನಸೀಮ್ ಶಾ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ, ಖುಶ್ದಿಲ್ ಶಾ, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ವಾಸಿಮ್ ಜೂನಿಯರ್,


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.