IND vs PAK: ರೋಹಿತ್ ಪಡೆಗೆ ಗುಡ್ ನ್ಯೂಸ್: ಹೈವೋಲ್ಟೇಜ್ ಪಂದ್ಯದಿಂದ ಹೊರಬಿದ್ದ ಪಾಕ್ ನ ಈ ಆಟಗಾರ

ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಪತ್ರಿಕಾಗೋಷ್ಠಿಯಲ್ಲಿ ಫಖರ್ ಜಮಾನ್ ಭಾರತ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸದ್ಯ ಬೇರೊಬ್ಬರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

Written by - Bhavishya Shetty | Last Updated : Oct 22, 2022, 06:40 PM IST
    • ಭಾರತ ಮತ್ತು ಪಾಕಿಸ್ತಾನ ನಡುವೆ ಭರ್ಜರಿ ಪಂದ್ಯಕ್ಕೆ ಕ್ಷಣಗಣನೆ
    • ಹೈವೋಲ್ಟೇಜ್ ಪಂದ್ಯದಿಂದ ಹೊರಬಿದ್ದ ಪಾಕ್ ನ ಈ ಆಟಗಾರ
    • ಪಾಕಿಸ್ತಾನದ ಸ್ಟಾರ್ ಆಟಗಾರ ಫಖರ್ ಜಮಾನ್ ಔಟ್
IND vs PAK: ರೋಹಿತ್ ಪಡೆಗೆ ಗುಡ್ ನ್ಯೂಸ್: ಹೈವೋಲ್ಟೇಜ್ ಪಂದ್ಯದಿಂದ ಹೊರಬಿದ್ದ ಪಾಕ್ ನ ಈ ಆಟಗಾರ title=
India

ಅಕ್ಟೋಬರ್ 23 ರಂದು ಮೆಲ್ಬೋರ್ನ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಭರ್ಜರಿ ಪಂದ್ಯ ನಡೆಯಲಿದೆ. ಈ ಅಮೋಘ ಪಂದ್ಯದ ಮೇಲೆ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಕಣ್ಣು ನೆಟ್ಟಿದೆ. ಆದರೆ ಈ ಪಂದ್ಯದಿಂದ ಭಾರತೀಯ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಪಾಕಿಸ್ತಾನದ ಸ್ಟಾರ್ ಆಟಗಾರನೊಬ್ಬ ಫಿಟ್ ಇಲ್ಲದ ಕಾರಣ ಭಾರತ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ.

ಇದನ್ನೂ ಓದಿ: IND vs PAK: ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ: ಪಿಚ್ ರಿಪೋರ್ಟ್, ಪ್ಲೇಯಿಂಗ್ 11 ಪಟ್ಟಿ ಹೀಗಿದೆ

ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಪತ್ರಿಕಾಗೋಷ್ಠಿಯಲ್ಲಿ ಫಖರ್ ಜಮಾನ್ ಭಾರತ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸದ್ಯ ಬೇರೊಬ್ಬರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು. ಆದರೆ ಭಾರತದ ವಿರುದ್ಧದ ಪಂದ್ಯದಲ್ಲಿ ಸ್ಟಾರ್ ಬ್ಯಾಟ್ಸ್ ಮನ್ ಶಾನ್ ಮಸೂದ್ ಲಭ್ಯರಾಗಲಿದ್ದಾರೆ. ಭಾರತ ವಿರುದ್ಧದ ಪಂದ್ಯದಿಂದ ಫಖರ್ ಜಮಾನ್ ಔಟಾದ ಕೂಡಲೇ ಅಭಿಮಾನಿಗಳಲ್ಲಿ ಸಂತಸದ ಅಲೆ ಎದ್ದಿದೆ.

ಫಖರ್ ಜಮಾನ್ ವಿಶ್ವದ ಅತ್ಯುತ್ತಮ ಆಟಗಾರರೆಂದು ಪರಿಗಣಿಸಲ್ಪಟ್ಟಿದ್ದಾರೆ. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಅವಿಸ್ಮರಣೀಯ ಸೋಲು ತಂದುಕೊಟ್ಟಿದ್ದು, ಭಾರತದ ಪ್ರಶಸ್ತಿ ಗೆಲ್ಲುವ ಕನಸನ್ನು ಭಗ್ನಗೊಳಿಸಿದ್ದು ಇದೇ ಫಖರ್ ಜಮಾನ್. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ 114 ರನ್ ಗಳಿಸಿದ್ದರು. ಫೈನಲ್‌ನಲ್ಲಿ ಟೀಂ ಇಂಡಿಯಾ 180 ರನ್‌ಗಳಿಂದ ಸೋಲನುಭವಿಸಿತ್ತು.

ಇದನ್ನೂ ಓದಿ: IND vs PAK: ಐತಿಹಾಸಿಕ ಇಂಡೋ-ಪಾಕ್ ಪಂದ್ಯಕ್ಕೂ ಮುನ್ನ ಅಭಿಮಾನಿಗಳಿಗೆ ಗುಡ್ ನ್ಯೂಸ್!

ಇನ್ನು ಫಖರ್ ಜಮಾನ್ ಪಾಕಿಸ್ತಾನ ತಂಡದ ಪರವಾಗಿ ಎಲ್ಲಾ ಮೂರು ಮಾದರಿಗಳಲ್ಲಿ ಕ್ರಿಕೆಟ್ ಆಡಿದ್ದಾರೆ. ಪಾಕಿಸ್ತಾನ ತಂಡಕ್ಕೆ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದುಕೊಟ್ಟಿದ್ದಾರೆ. 3 ಟೆಸ್ಟ್ ಪಂದ್ಯಗಳಲ್ಲಿ 192 ರನ್, 62 ಏಕದಿನ ಪಂದ್ಯಗಳಲ್ಲಿ 2628 ರನ್ ಗಳಿಸಿದ್ದಾರೆ. 71 ಟಿ20 ಪಂದ್ಯಗಳಲ್ಲಿ 1349 ರನ್ ಗಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಫಖರ್ ಜಮಾನ್ ಅವರಂತಹ ಮಾರಕ ಬ್ಯಾಟ್ಸ್‌ಮನ್ ಭಾರತದ ವಿರುದ್ಧ ಆಡದೇ ಇರುವುದು ಟೀಂ ಇಂಡಿಯಾಕ್ಕೆ ತುಂಬಾ ಲಾಭದಾಯಕ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News