ಭಾರತ vs ಪಾಕ್ ಸೂಪರ್ 4 ಪಂದ್ಯಕ್ಕೆ ಸ್ಥಳ, ದಿನಾಂಕ ಫಿಕ್ಸ್: ಈ ಆಟವೂ ಮಳೆಯಿಂದ ರದ್ದಾದರೆ ಮುಂದೇನು ಕಥೆ?
Asia Cup 2023, Super 4 Match: ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಕೊಲಂಬೊದಲ್ಲಿ ನಿರಂತರ ಮಳೆಯಿಂದಾಗಿ ಸೂಪರ್-4 ಅನ್ನು ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ. ಭಾರತದ ಎರಡೂ ಗ್ರೂಪ್ ಪಂದ್ಯಗಳಲ್ಲಿ ಮಳೆ ಅಡ್ಡಿಯಾಗಿದ್ದು, ಈ ಕಾರಣದಿಂದಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
Asia Cup 2023, Super 4 Match: ಭಾರತ ತಂಡ ಏಷ್ಯಾಕಪ್’ನ ಸೂಪರ್-4 ಸುತ್ತಿಗೆ ಪ್ರವೇಶ ಪಡೆದಿದೆ. ಸೆಪ್ಟೆಂಬರ್ 10 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಆಡಲಿದೆ. ಆದರೆ ಮೊದಲ ಪಂದ್ಯವು ಮಳೆಗೆ ಆಹುತಿಯಾದಂತೆ, ಸೂಪರ್ 4 ಪಂದ್ಯವೂ ಮಳೆಯಿಂದ ರದ್ದಾದರೆ ಏನು ಕಥೆ ಎಂಬುದು ಸದ್ಯ ಅಭಿಮಾನಿಗಳಿಗಿರುವ ಚಿಂತೆ. ಆದರೆ ಈ ಪಂದ್ಯಕ್ಕೆ ಸಂಬಂಧಿಸಿದಂತೆ ಅಪ್ಟೇಟ್ ಹೊರಬಿದ್ದಿದ್ದು, ನಿರಾಸೆ ಬದಲು ಫ್ಯಾನ್ಸ್’ಗೆ ಖುಷಿ ನೀಡಲಿದೆ.
ಇದನ್ನೂ ಓದಿ: ವಿಶ್ವಕಪ್ 2023ಕ್ಕೆ 15 ಸದಸ್ಯರ ಟೀಂ ಇಂಡಿಯಾ ತಂಡ ಪ್ರಕಟ: ಮೂವರಿಗಿಲ್ಲ ಸ್ಥಾನ
ಸ್ಥಳದಲ್ಲಿ ಬದಲಾವಣೆ:
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಕೊಲಂಬೊದಲ್ಲಿ ನಿರಂತರ ಮಳೆಯಿಂದಾಗಿ ಸೂಪರ್-4 ಅನ್ನು ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ. ಭಾರತದ ಎರಡೂ ಗ್ರೂಪ್ ಪಂದ್ಯಗಳಲ್ಲಿ ಮಳೆ ಅಡ್ಡಿಯಾಗಿದ್ದು, ಈ ಕಾರಣದಿಂದಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸೆಪ್ಟೆಂಬರ್ 9 ರಿಂದ ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಬೇಕಿತ್ತು. ಆದರೆ ಇನ್ಮುಂದೆ ಹಂಬಂಟೋಟಾದಲ್ಲಿ ನಡೆಯಲಿದೆ. ಏಷ್ಯಾ ಕಪ್-2023ರ ಅಂತಿಮ ಪಂದ್ಯವೂ ಹಂಬಂಟೋಟದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಸೆಪ್ಟೆಂಬರ್ 9, 10, 12, 14 ಮತ್ತು 15 ರಂದು ಸೂಪರ್-4 ಸುತ್ತಿನಲ್ಲಿ 5 ಪಂದ್ಯಗಳಿಗೆ ಹಂಬಂಟೋಟಾ ಆತಿಥ್ಯ ವಹಿಸಲಿದೆ. ಇದಾದ ಬಳಿಕ ಸೆ.17ರಂದು ಈ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಮೀಸಲು ದಿನ:
ಇನ್ಸೈಡ್ ಸ್ಪೋರ್ಟ್ ವರದಿ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್-4 ರೌಂಡ್ ಪಂದ್ಯಕ್ಕೆ ಕೂಡ ಮಳೆ ಅಡ್ಡಿಪಡಿಸಿದರೆ, ಇದಕ್ಕಾಗಿ ರಿಸರ್ವ್ ಡೇ ಕೂಡ ಇರಿಸಲಾಗಿದೆ. ಈ ಪಂದ್ಯವು ಸೆಪ್ಟೆಂಬರ್ 10 ರಂದು ಪೂರ್ಣಗೊಳ್ಳದಿದ್ದರೆ ಸೆಪ್ಟೆಂಬರ್ 11 ರಂದು ನಡೆಸಲಾಗುತ್ತದೆ. ಆದರೆ, ಹಂಬಂಟೋಟದಲ್ಲಿ ಸದ್ಯ ಉತ್ತಮ ಹವಾಮಾನವಿದೆ ಎನ್ನಲಾಗಿದೆ.
ಇದನ್ನೂ ಓದಿ: ಸಚಿನ್, ಕೊಹ್ಲಿ, ಗಂಗೂಲಿ ರೆಕಾರ್ಡ್ ಸೇರಿ ಆಡಿದ ಒಂದೇ ಪಂದ್ಯದಲ್ಲಿ 5 ದಾಖಲೆ ಬ್ರೇಕ್ ಮಾಡಿದ ರೋಹಿತ್
ಸೆಪ್ಟೆಂಬರ್ 12 ರಂದು ಭಾರತಕ್ಕೆ ಮತ್ತೊಂದು ಪಂದ್ಯ:
ಆದರೆ, ಭಾರತ ತಂಡಕ್ಕೆ ಸ್ವಲ್ಪ ಸಮಸ್ಯೆ ಎದುರಾಗಬಹುದು. ಟೀಮ್ ಇಂಡಿಯಾ ಸೆಪ್ಟೆಂಬರ್ 10 ಮತ್ತು 12 ರಂದು ಸೂಪರ್-4 ನಲ್ಲಿ ತನ್ನ ಪಂದ್ಯಗಳನ್ನು ಆಡಬೇಕಾಗಿದೆ. 10ರಂದು ಪಾಕಿಸ್ತಾನವನ್ನು ಎದುರಿಸಲಿದ್ದರೆ, ಸೆ.12ರಂದು ಬಿ ಗುಂಪಿನ ಎರಡನೇ ಸ್ಥಾನದಲ್ಲಿರುವ ತಂಡವನ್ನು ಎದುರಿಸಲಿದೆ. ನಂತರ ಸೆಪ್ಟೆಂಬರ್ 14 ರಂದು ಪಾಕಿಸ್ತಾನವು ಬಿ ಗುಂಪಿನ ಅಗ್ರ ತಂಡದೊಂದಿಗೆ ಪಂದ್ಯವನ್ನು ಆಡಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ