ವಿಶ್ವಕಪ್ 2023ಕ್ಕೆ 15 ಸದಸ್ಯರ ಟೀಂ ಇಂಡಿಯಾ ತಂಡ ಪ್ರಕಟ: ಪ್ರಮುಖ ವಿಕೆಟ್ ಕೀಪರ್ ಸೇರಿ ಮೂವರಿಗಿಲ್ಲ ಸ್ಥಾನ

Team India for World Cup 2023: ಭಾರತವು ಈ ವರ್ಷದ ಅಕ್ಟೋಬರ್-ನವೆಂಬರ್‌’ನಲ್ಲಿ ODI ವಿಶ್ವಕಪ್-2023 ಅನ್ನು ಆಯೋಜಿಸಲಿದೆ. ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರಿಗೆ ತಂಡದ ನಾಯಕತ್ವವನ್ನು ವಹಿಸಲಾಗುತ್ತಿದೆ. ಇನ್ನು ವಿಶ್ವಕಪ್‌’ನಲ್ಲಿ ಟೀಂ ಇಂಡಿಯಾ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಲಿದೆ.

Written by - Bhavishya Shetty | Last Updated : Sep 5, 2023, 11:12 AM IST
    • ಭಾರತವು ಈ ವರ್ಷದ ಅಕ್ಟೋಬರ್-ನವೆಂಬರ್‌’ನಲ್ಲಿ ODI ವಿಶ್ವಕಪ್-2023 ಅನ್ನು ಆಯೋಜಿಸಲಿದೆ.
    • ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರಿಗೆ ತಂಡದ ನಾಯಕತ್ವವನ್ನು ವಹಿಸಲಾಗುತ್ತಿದೆ.
    • ವಿಶ್ವಕಪ್‌’ನಲ್ಲಿ ಟೀಂ ಇಂಡಿಯಾ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಲಿದೆ
ವಿಶ್ವಕಪ್ 2023ಕ್ಕೆ 15 ಸದಸ್ಯರ ಟೀಂ ಇಂಡಿಯಾ ತಂಡ ಪ್ರಕಟ: ಪ್ರಮುಖ ವಿಕೆಟ್ ಕೀಪರ್ ಸೇರಿ ಮೂವರಿಗಿಲ್ಲ ಸ್ಥಾನ title=
World Cup 2023

Team India for World Cup 2023: ಭಾರತೀಯ ಕ್ರಿಕೆಟ್ ತಂಡವು ಪ್ರಸ್ತುತ ಏಷ್ಯಾ ಕಪ್-2023ರಲ್ಲಿ ಆಡುತ್ತಿದೆ.  ಈ ಕಾಂಟಿನೆಂಟಲ್ ಕ್ರಿಕೆಟ್ ಟೂರ್ನಿಯ ಸೂಪರ್-4 ಸುತ್ತಿಗೆ ಟೀಂ ಇಂಡಿಯಾ ಪ್ರವೇಶ ಪಡೆದಿದೆ. ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯದಲ್ಲಿ ಮಳೆ ಅಡ್ಡಿ ಮಾಡಿದ್ದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಇನ್ನು ಕಳೆದ ದಿನ ನಡೆದ ಪಂದ್ಯಕ್ಕೂ ಮಳೆ ಅಡ್ಡಿಯಾಗಿದ್ದರೂ ಸಹ ಡಿಎಲ್ಎಸ್ ಅನುಸಾರ ಭಾರತ ಗೆಲುವು ಸಾಧಿಸಿದೆ.

ಈ ಮಧ್ಯೆ ಮುಂಬರುವ ಏಕದಿನ ವಿಶ್ವಕಪ್ ಬಗ್ಗೆ ದೊಡ್ಡ ಅಪ್ಡೇಟ್ ಹೊರಬಿದ್ದಿದ್ದು ಭಾರತ ಆತಿಥ್ಯ ವಹಿಸಲಿರುವ ಈ ಐಸಿಸಿ ಟೂರ್ನಿಗೆ ತಂಡವನ್ನು ಪ್ರಕಟಿಸಬೇಕಿದೆ.

ಇದನ್ನೂ ಓದಿ: “ಕಳಪೆ ಫೀಲ್ಡಿಂಗ್, ಇನ್ನಿಂಗ್ಸ್’ನಿಂದ ಸಂತೋಷವಾಗಿಲ್ಲ”: ಗೆದ್ದರೂ ಅಸಮಾಧಾನ ಹೊರಹಾಕಿದ ರೋಹಿತ್ ಶರ್ಮ

ಭಾರತವು ಈ ವರ್ಷದ ಅಕ್ಟೋಬರ್-ನವೆಂಬರ್‌’ನಲ್ಲಿ ODI ವಿಶ್ವಕಪ್-2023 ಅನ್ನು ಆಯೋಜಿಸಲಿದೆ. ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರಿಗೆ ತಂಡದ ನಾಯಕತ್ವವನ್ನು ವಹಿಸಲಾಗುತ್ತಿದೆ. ಇನ್ನು ವಿಶ್ವಕಪ್‌’ನಲ್ಲಿ ಟೀಂ ಇಂಡಿಯಾ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಲಿದೆ. ಉಪನಾಯಕನಾಗಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಲಾಗುತ್ತಿದೆ. ಇಶಾನ್ ಕಿಶನ್ ಬ್ಯಾಕಪ್ ಕೀಪರ್ ಆಗಿ ತಂಡದಲ್ಲಿ ಉಳಿಯುವ ಸಾಧ್ಯತೆ ಇದೆ.

ಇಂದು ತಂಡ ಘೋಷಣೆ!

2023ರ ODI ವಿಶ್ವಕಪ್‌’ಗೆ ಭಾರತ ತಂಡವನ್ನು ಇಂದು ಅಂದರೆ ಸೆಪ್ಟೆಂಬರ್ 5 ರಂದು ಪ್ರಕಟಿಸುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯು 2023 ರ ವಿಶ್ವಕಪ್‌’ಗಾಗಿ ಭಾರತ ತಂಡವನ್ನು ಸೆಪ್ಟೆಂಬರ್ 5 ರಂದು ಪ್ರಕಟಿಸಲಿದೆ. ಸೆಪ್ಟೆಂಬರ್ 5 ರೊಳಗೆ ವಿಶ್ವಕಪ್‌’ನಲ್ಲಿ ಭಾಗವಹಿಸುವ ದೇಶಗಳು ತಮ್ಮ ತಂಡವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಹಸ್ತಾಂತರಿಸಬೇಕಾಗುತ್ತದೆ.

15 ಆಟಗಾರರ ಭವಿಷ್ಯ ನಿರ್ಧಾರ:

ಏಷ್ಯಾಕಪ್-2023ಕ್ಕೆ ಶ್ರೀಲಂಕಾದಲ್ಲಿ ಪ್ರಸ್ತುತವಿರುವ ತಂಡವನ್ನೇ ವಿಶ್ವಕಪ್‌ ಕೂಡ ಆಯ್ಕೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಆದರೆ, ಈ ಪೈಕಿ ಇಬ್ಬರು ಆಟಗಾರರು ಔಟಾಗುವುದು ಖಚಿತವಾಗಿದೆ. ಏಷ್ಯಾಕಪ್‌’ಗೆ 17 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ, ಆದರೆ ವಿಶ್ವಕಪ್‌’ಗೆ ಭಾರತ ತಂಡದಲ್ಲಿ 15 ಆಟಗಾರರಿಗೆ ಸೀಮಿತಗೊಳಿಸಬೇಕಾಗಿದೆ.

ಮೂವರು ಆಟಗಾರರಿಗೆ ಗೇಟ್ ಪಾಸ್:

ವಿಶ್ವಕಪ್‌’ಗೆ 15 ಸದಸ್ಯರ ತಂಡವನ್ನು ಬಿಸಿಸಿಐ ಸಿದ್ಧಪಡಿಸಬೇಕಿದೆ. ವಿಕೆಟ್‌ ಕೀಪರ್ ಸಂಜು ಸ್ಯಾಮ್ಸನ್‌’ಗೆ ಭಾರತ ತಂಡದಲ್ಲಿ ಅವಕಾಶ ಸಿಗುವುದು ಕಷ್ಟ. ಇನ್ನೊಂದೆಡೆ ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ತಂಡದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ಸ್ಟಾರ್ ಆಟಗಾರ ತಿಲಕ್ ವರ್ಮಾ ಹೊರತುಪಡಿಸಿ, ಸೀಮ್ ಬೌಲರ್‌’ನ ಆಯ್ಕೆಗಳಲ್ಲಿ ಒಬ್ಬರನ್ನು ಹೊರಗಿಡಬಹುದು. ವೇಗದ ಬೌಲಿಂಗ್ ಆಯ್ಕೆಗೆ ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ ಕೃಷ್ಣ ಅವರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಸಿಗುತ್ತದೆ. ಈ ಆಯ್ಕೆಯಲ್ಲಿ ಶಾರ್ದೂಲ್ ಪ್ರಬಲ ಸ್ಪರ್ಧಿಯಾಗಿದ್ದಾರೆ.

ವಿಶ್ವಕಪ್‌’ನಲ್ಲಿ ಭಾರತದ ವೇಳಾಪಟ್ಟಿ

  • ಅಕ್ಟೋಬರ್ 8: ಭಾರತ ವಿರುದ್ಧ ಆಸ್ಟ್ರೇಲಿಯಾ, ಚೆನ್ನೈ
  • ಅಕ್ಟೋಬರ್ 11: ಭಾರತ vs ಅಫ್ಘಾನಿಸ್ತಾನ, ನವದೆಹಲಿ
  • ಅಕ್ಟೋಬರ್ 14: ಭಾರತ ವಿರುದ್ಧ ಪಾಕಿಸ್ತಾನ, ಅಹಮದಾಬಾದ್
  • ಅಕ್ಟೋಬರ್ 19: ಭಾರತ ವಿರುದ್ಧ ಬಾಂಗ್ಲಾದೇಶ, ಪುಣೆ
  • ಅಕ್ಟೋಬರ್ 22: ಭಾರತ vs ನ್ಯೂಜಿಲೆಂಡ್, ಧರ್ಮಶಾಲಾ
  • ಅಕ್ಟೋಬರ್ 29: ಭಾರತ vs ಇಂಗ್ಲೆಂಡ್, ಲಕ್ನೋ
  • ನವೆಂಬರ್ 2: ಭಾರತ ವಿರುದ್ಧ ಶ್ರೀಲಂಕಾ, ಮುಂಬೈ
  • ನವೆಂಬರ್ 5: ಭಾರತ ವಿರುದ್ಧ ದಕ್ಷಿಣ ಆಫ್ರಿಕಾ, ಕೋಲ್ಕತ್ತಾ
  • ನವೆಂಬರ್ 12: ಭಾರತ ವಿರುದ್ಧ ನೆದರ್ಲ್ಯಾಂಡ್ಸ್, ಬೆಂಗಳೂರು

2023 ರ ವಿಶ್ವಕಪ್‌’ಗೆ ಭಾರತದ ಸಂಭಾವ್ಯ ತಂಡ:

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್.

ಇದನ್ನೂ ಓದಿ:  ಸಚಿನ್, ಕೊಹ್ಲಿ, ಗಂಗೂಲಿ ರೆಕಾರ್ಡ್ ಸೇರಿ ಆಡಿದ ಒಂದೇ ಪಂದ್ಯದಲ್ಲಿ 5 ದಾಖಲೆ ಬ್ರೇಕ್ ಮಾಡಿದ ರೋಹಿತ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News