India vs Pakistan: ಇದು ಜೀವನದ ಶ್ರೇಷ್ಠ ಇನಿಂಗ್ಸ್ ಎಂದ ವಿರಾಟ್ ಕೊಹ್ಲಿ..!
ಭಾನುವಾರದಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಐಸಿಸಿ ಟಿ 20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿಸುವ ಮೂಲಕ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.
ಮೆಲ್ಬೋರ್ನ್ : ಭಾನುವಾರದಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಐಸಿಸಿ ಟಿ 20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿಸುವ ಮೂಲಕ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.
160 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡವು ಪಂದ್ಯದ ಆರಂಭದಲ್ಲೇ ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ (4) ಮತ್ತು ರೋಹಿತ್ ಶರ್ಮಾ (4) ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದೆ ವೇಳೆ ಸೂರ್ಯಕುಮಾರ್ ಯಾದವ್ (15) ಮತ್ತು ಅಕ್ಷರ್ ಪಟೇಲ್ (2) ಅವರ ವಿಕೆಟ್‌ಗಳು ಸಹಿತ ಉರುಳಿದ್ದರಿಂದ ಭಾರತವು ತೀವ್ರ ಆಘಾತವನ್ನು ಎದುರಿಸಿತು.
ಇದನ್ನೂ ಓದಿ : BJP Minister slaps woman : ಸಚಿವ ಸೋಮಣ್ಣರಿಂದ ಕಪಾಳ ಮೋಕ್ಷ ಘಟನೆಗೆ ಟ್ವಿಸ್ಟ್: ತನಗೆ ಹೊಡೆದಿಲ್ಲ ಎಂದ ಮಹಿಳೆ!!
ಇಂತಹ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ನೊಂದಿಗೆ ಹಾರ್ದಿಕ್ ಪಾಂಡ್ಯ ಜೊತೆ ಸೇರಿ ಪಂದ್ಯವನ್ನು ಹಳಿಗೆ ತಂದರು. ತಂಡವು ಗೆಲುವು ಸಾಧಿಸಿದ ನಂತರ ತಮ್ಮ ಅತ್ಯುತಮ ಟಿ20 ಇನಿಂಗ್ಸ್ ಯಾವುದು ಎಂದು ಕೇಳಲಾಯಿತು.ಗೃಹಿಣಿಯ ಅನುಮಾನಾಸ್ಪದ ಸಾವು; ಚೆನ್ನಾಗಿ ನೋಡ್ಕೋತ್ತೀನಿ ಎಂದಿದ್ದ ಗಂಡ..!
ಇದಕ್ಕೆ ಉತ್ತರಿಸಿದ ಕೊಹ್ಲಿ“ಇಂದಿನವರೆಗೂ ನಾನು ಆಸ್ಟ್ರೇಲಿಯಾ ವಿರುದ್ಧದ ಮೊಹಾಲಿ (2016 ಟಿ20 ವಿಶ್ವಕಪ್) ಇನ್ನಿಂಗ್ಸ್ ನನ್ನ ಅತ್ಯುತ್ತಮ ಎಂದು ಹೇಳಿದ್ದೇನೆ. ನಾನು ಅಲ್ಲಿ 52 ರಲ್ಲಿ 82 ಗಳಿಸಿದ್ದೇನೆ ಮತ್ತು ಇಂದು ನಾನು 53 ರಲ್ಲಿ 82 ರನ್ ಗಳಿಸಿದ್ದೇನೆ. ಆದರೆ ಇಂದು ನಾನು ಇದನ್ನು ಅದಕ್ಕಿಂತಲೂ ಒಂದು ಕೈ ಮೇಲೆ ಎಂದು ಭಾವಿಸುತ್ತೇನೆ. ಏಕೆಂದರೆ ಆಟದ ಪರಿಸ್ಥಿತಿ ಕೂಡ ಹಾಗಿತ್ತು, ಒಂದು ಹಂತದಲ್ಲಿ ಇದು ಅಸಾಧ್ಯ ಎನ್ನುವಂತೆ ಇತ್ತು ಆದರೆ ಹಾರ್ದಿಕ್ ಆ ಜೊತೆಯಾಟದಲ್ಲಿ ನನ್ನನ್ನು ಪುಶ್ ಮಾಡುತ್ತಲೇ ಇದ್ದರು ಎಂದು ಅವರು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.