BJP Minister slaps woman : ಸಚಿವ ಸೋಮಣ್ಣರಿಂದ ಕಪಾಳ ಮೋಕ್ಷ ಘಟನೆಗೆ ಟ್ವಿಸ್ಟ್: ತನಗೆ ಹೊಡೆದಿಲ್ಲ ಎಂದ ಮಹಿಳೆ!!

BJP Minister slaps woman at an event  : ತನಗೆ ಸಚಿವರು ಹೊಡೆದಿಲ್ಲ, ತಾನು ಭಾವುಕಳಾದಾಗ ಸಚಿವ ಸೋಮಣ್ಣ ತಮ್ಮನ್ನು ಸಮಾಧಾನ ಪಡಿಸಿದರು ಎಂದು  ಕೆಂಪಮ್ಮ ಸಮಜಾಯಿಷಿ ಕೊಟ್ಟಿದ್ದಾರೆ. 

Written by - Zee Kannada News Desk | Last Updated : Oct 23, 2022, 01:54 PM IST
  • ಸಚಿವ ಸೋಮಣ್ಣರಿಂದ ಕಪಾಳ ಮೋಕ್ಷ ಘಟನೆಗೆ ಟ್ವಿಸ್ಟ್
  • ತನಗೆ ಹೊಡೆದಿಲ್ಲ ಎಂದು ವಿಡಿಯೋ ಮಾಡಿದ ಮಹಿಳೆ
  • ಘಟನೆಗೆ ಬಿಗ್‌ ಟ್ವಿಸ್ಟ್‌ ಕೊಟ್ಟ ಮಹಿಳೆಯ ಈ ಹೇಳಿಕೆ
BJP Minister slaps woman : ಸಚಿವ ಸೋಮಣ್ಣರಿಂದ ಕಪಾಳ ಮೋಕ್ಷ ಘಟನೆಗೆ ಟ್ವಿಸ್ಟ್: ತನಗೆ ಹೊಡೆದಿಲ್ಲ ಎಂದ ಮಹಿಳೆ!! title=
ಸಚಿವ ಸೋಮಣ್ಣ

ಚಾಮರಾಜನಗರ: ತನಗೆ ಸಚಿವರು ಹೊಡೆದಿಲ್ಲ, ತಾನು ಭಾವುಕಳಾದಾಗ ಸಚಿವ ಸೋಮಣ್ಣ ತಮ್ಮನ್ನು ಸಮಾಧಾನ ಪಡಿಸಿದರು ಎಂದು  ಕೆಂಪಮ್ಮ ಸಮಜಾಯಿಷಿ ಕೊಟ್ಟಿದ್ದಾರೆ. ಸಮಸ್ಯೆ ಹೇಳಲು ಬಂದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂಬ ಸುದ್ದಿ ವೈರಲ್‌ ಆಗಿತ್ತು. ಸಮಸ್ಯೆ ಹೇಳಲು ಬಂದ ಮಹಿಳೆಯ ಕಪಾಳಕ್ಕೆ ಸಚಿವ ಸೋಮಣ್ಣ ಹೊಡೆದಿರುವ ವಿಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆದರೆ ಈ ನಡುವೆ ಮಹಿಳೆಯ ಈ ಹೇಳಿಕೆ ಬಿಗ್‌ ಟ್ವಿಸ್ಟ್‌ ನೀಡಿದೆ.

ಇದನ್ನೂ ಓದಿ : Video ನೋಡಿ: ಸಮಸ್ಯೆ ಹೇಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ..!

ಕಪಾಳ ಮೋಕ್ಷಕ್ಕೆ ಸಂಬಂಧಿಸಿದಂತೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರಣಯ್ ಜೊತೆ ವಿಡಿಯೋ ಮಾಡಿರುವ ಕೆಂಪಮ್ಮ, ಪದೇಪದೆ ಸಚಿವರ ಕಾಲಿಗೆ ನಮಸ್ಕರಿಸುತ್ತಿದ್ದಾಗ ಬೇಡ ಎಂದು ತಿಳಿಸಿದರು. ಆ ಸಂದರ್ಭದಲ್ಲಿ ಸ್ವಲ್ಪ ಹೊತ್ತು ಭಾವುಕಳಾದೆ, ತಕ್ಷಣವೇ ಸಚಿವರು ಕೆಂಪಮ್ಮನನ್ನು ಸಮಾಧಾನಪಡಿಸಿ ನಿನಗೆ ವಸತಿ ಕಲ್ಪಿಸಿ ಕೊಡುತ್ತೇನೆಂದು ಸೂಚಿಸಿದರು. ಅವರು ತನಗೆ ಒಳ್ಳೆಯದು ಮಾಡಿದ್ದಾರೆಯೇ ಹೊರತು ಕೆಟ್ಟದು ಮಾಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.

ಶನಿವಾರ ಸಂಜೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಕೆಂಪಮ್ಮ ಎಂಬ ಮಹಿಳೆ ಸಮಸ್ಯೆ ಹೇಳಿಕೊಳ್ಳಲು ವೇದಿಕೆ ಮೇಲೆ ಬಂದಿದ್ದರು. ನಿವೇಶನದ ಹಕ್ಕು ಪತ್ರ ಸಿಗದ ಹಿನ್ನಲೆ ಬೇಸತ್ತಿದ್ದ  ಮಹಿಳೆ ಏರು ಧ್ವನಿಯಲ್ಲಿ ಸಚಿವರನ್ನು ಪ್ರಶ್ನಿಸಿದ್ದಾಳೆ. ಇದರಿಂದ ಕೋಪಗೊಂಡ ಸೋಮಣ್ಣ ಮಹಿಳೆಯ ಕಪಾಳಕ್ಕೆ ಬಾರಿಸಿದ್ದಾರೆ ಎಂಬ ವಿಡಿಯೋ ಒಂದು ಎಲ್ಲೆಡೆ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ಕಪಾಳಕ್ಕೆ ಹೊಡೆದರೂ ಮಹಿಳೆ ಸಚಿವರ ಕಾಲಿಗೆ ನಮಸ್ಕಾರ ಮಾಡಿದ್ದಾಳೆ.

ಇದನ್ನೂ ಓದಿ : ಗೃಹಿಣಿಯ ಅನುಮಾನಾಸ್ಪದ ಸಾವು; ಚೆನ್ನಾಗಿ ನೋಡ್ಕೋತ್ತೀನಿ ಎಂದಿದ್ದ ಗಂಡ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News