women`s world cup 2022 : ಪಾಕ್ ವಿರುದ್ಧ ಗೆದ್ದು ಬೀಗಿದ ಭಾರತದ ಮಹಿಳಾ ಮಣಿಗಳು!
ಭಾರತ ಪರ ಸ್ಮೃತಿ ಮಂಧಾನ, ಪೂಜಾ ವಸ್ತ್ರಕರ್ ಮತ್ತು ಸ್ನೇಹಾ ರಾಣಾ ಅರ್ಧಶತಕ ಬಾರಿಸಿದರು. ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.
ನವದೆಹಲಿ : ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡ ಪಾಕಿಸ್ತಾನವನ್ನು 107 ರನ್‌ಗಳಿಂದ ಸೋಲಿಸಿದೆ. ಭಾರತದ ಪರ ರಾಜೇಶ್ವರಿ ಗಾಯಕ್ವಾಡ್ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದರು. ಭಾರತ ಪರ ಸ್ಮೃತಿ ಮಂಧಾನ, ಪೂಜಾ ವಸ್ತ್ರಕರ್ ಮತ್ತು ಸ್ನೇಹಾ ರಾಣಾ ಅರ್ಧಶತಕ ಬಾರಿಸಿದರು. ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.
ಭಾರತದ ಬೌಲರ್‌ಗಳು ಅದ್ಭುತ ಪ್ರದರ್ಶನ
ಪಂದ್ಯದಲ್ಲಿ ಭಾರತದ ಮಹಿಳಾ ಬೌಲರ್‌ಗಳು ಅದ್ಭುತ ಆಟ ಪ್ರದರ್ಶಿಸಿದರು. ಆರಂಭದಿಂದಲೇ ಪಾಕಿಸ್ತಾನದ ಬ್ಯಾಟ್ಸ್ ಮನ್ ಗಳಿಗೆ ಸೆಡ್ಡು ಹೊಡೆದರು. ರಾಜೇಶ್ವರಿ ಗಾಯಕ್ವಾಡ್ 4 ವಿಕೆಟ್ ಪಡೆದರು. ಅದೇ ಸಮಯದಲ್ಲಿ ದೀಪ್ತಿ ಶರ್ಮಾ ಮತ್ತು ಸ್ನೇಹಾ ರಾಯ್ 1-1 ವಿಕೆಟ್ ಪಡೆದರು. ಜೂಲನ್ ಗೋಸ್ವಾಮಿ ಎರಡು ವಿಕೆಟ್ ಪಡೆದರು. ಅವರು ತಮ್ಮ 10 ಓವರ್‌ಗಳಲ್ಲಿ 26 ರನ್‌ಗಳನ್ನು ಬಿಟ್ಟುಕೊಟ್ಟರು. ಪಾಕಿಸ್ತಾನ ಪರ ಶಿದ್ರಾ ಅಮೀನ್ 30 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದರು. ಇದರ ಹೊರತಾಗಿ ಅವರ ಯಾವ ಬ್ಯಾಟ್ಸ್‌ಮನ್‌ಗಳಿಗೂ ದೊಡ್ಡ ಇನ್ನಿಂಗ್ಸ್ ಆಡಲಾಗಲಿಲ್ಲ. ರಾಜೇಶ್ವರಿ ತನ್ನ 10 ಓವರ್‌ಗಳಲ್ಲಿ 31 ರನ್‌ಗಳನ್ನು ಕಳೆದರು ಮತ್ತು ನಾಲ್ಕು ವಿಕೆಟ್‌ಗಳೊಂದಿಗೆ ಭಾರತದ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು.
ಇದನ್ನೂ ಓದಿ : women's world cup 2022 : 25ನೇ ಅರ್ಧಶತಕ ಸಿಡಿಸಿದ ಸ್ಮ್ರತಿ ಮಂದನಾ!
ಒಂದು ಕಾಲದಲ್ಲಿ ಭಾರತ ತಂಡ 200 ರನ್‌ಗಳ ಒಳಗೆ ಸೀಮಿತವಾದಂತೆ ಕಂಡುಬಂದರೂ ಪೂಜಾ ವಸ್ತ್ರಕರ್ ಮತ್ತು ಸ್ನೇಹಾ ರಾಣಾ ಅವರ ಇನ್ನಿಂಗ್ಸ್‌ನಿಂದ ಟೀಂ ಇಂಡಿಯಾ ಗೌರವಾನ್ವಿತ ಸ್ಕೋರ್ ತಲುಪಲು ಸಾಧ್ಯವಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಕಳಪೆ ಆರಂಭವನ್ನು ಹೊಂದಿತ್ತು ಮತ್ತು ಒಟ್ಟು 4 ರನ್‌ಗಳ ಸ್ಕೋರ್‌ನಲ್ಲಿ ಶೆಫಾಲಿ ವರ್ಮಾ (0) ರೂಪದಲ್ಲಿ ಮೊದಲ ಹೊಡೆತವನ್ನು ಪಡೆದರು.ಇದಾದ ಬಳಿಕ ಸ್ಮೃತಿ ಮಂಧಾನ (52 ರನ್) ದೀಪ್ತಿ ಶರ್ಮಾ (40) ಜತೆಗೂಡಿ ಎರಡನೇ ವಿಕೆಟ್‌ಗೆ 92 ರನ್ ಸೇರಿಸಿದರು. ಪೂಜಾ ಮತ್ತು ಸ್ನೇಹಾ ನಡುವೆ 7ನೇ ವಿಕೆಟ್‌ಗೆ 122 ರನ್‌ಗಳ ಜೊತೆಯಾಟವಿತ್ತು. ಪೂಜಾ 59 ಎಸೆತಗಳಲ್ಲಿ ಎಂಟು ಬೌಂಡರಿಗಳ ನೆರವಿನಿಂದ 67 ರನ್ ಗಳಿಸಿದರೆ, ಸ್ನೇಹ್ ರಾಣಾ 48 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ ಅಜೇಯ 53 ರನ್ ಗಳಿಸಿದರು.
ಕೊನೆಯ ಓವರ್‌ಗಳಲ್ಲಿ ರನ್ ಲೂಟಿ ಮಾಡಿದ ಭಾರತ
ಒಮ್ಮೊಮ್ಮೆ ಭಾರತೀಯ ಆಟಗಾರ ಸಂಕಷ್ಟಕ್ಕೆ ಸಿಲುಕಿದಂತೆ ಕಂಡರೂ ಕೊನೆಯ ಐದು ಓವರ್ ಗಳಲ್ಲಿ ಟೀಂ ಇಂಡಿಯಾ ಆಟಗಾರರು ಬಿರುಸಿನ ಬ್ಯಾಟಿಂಗ್ ನಡೆಸಿ ಭಾರತವನ್ನು ಉತ್ತಮ ಸ್ಥಿತಿಗೆ ತಂದರು. ಪೂಜಾ ವಸ್ತ್ರಾಕರ್ 67 ರನ್ ಮತ್ತು ಸ್ನೇಹಾ ರಾಣಾ 48 ಎಸೆತಗಳಲ್ಲಿ 53 ರನ್ ಗಳಿಸಿದರು. ಪಾಕ್ ಪರ ನಶ್ರಾ ಸಂಧು, ನಿದಾ ದಾರ್ ತಲಾ ಎರಡು, ಡಯಾನಾ ಬಾಗ್, ಅನಮ್ ಅಮೀನ್ ಮತ್ತು ಫಾತಿಮಾ ಸನಾ ತಲಾ ಒಂದು ವಿಕೆಟ್ ಪಡೆದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.