India vs South Africa 3rd T20: ಮಂಗಳವಾರ ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ vs ದಕ್ಷಿಣ ಆಫ್ರಿಕಾ 3ನೇ T20 ಅಂತಾರಾಷ್ಟ್ರೀಯ ಪಂದ್ಯ ಮುಕ್ತಾಯವಾಗಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 49 ರನ್‌ಗಳಿಂದ ಭಾರತವನ್ನು ಸೋಲಿಸಿದೆ. ಸೋಲಿನ ಬಳಿಕವೂ ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತ್ತು. ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 227 ರನ್ ಗಳಿಸಿತ್ತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಟೀಂ ಇಂಡಿಯಾ, 18.3 ಓವರ್‌ಗಳಲ್ಲಿ 178 ರನ್ ಗಳಿಸಲಷ್ಟೇ ಶಕ್ತವಾಗಿದೆ. ಭಾರತ ಪರ ದಿನೇಶ್ ಕಾರ್ತಿಕ್ 46, ದೀಪಕ್ ಚಹಾರ್ 31 ಮತ್ತು ರಿಷಬ್ ಪಂತ್ 27 ರನ್ ಗಳಿಸಿದ್ದಾರೆ. 2017ರ ಬಳಿಕ ತವರು ನೆಲದಲ್ಲಿ ಗುರಿ ಬೆನ್ನಟ್ಟಿದ ಭಾರತ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಕಳೆದುಕೊಂಡಿರುವುದು ಇದೇ ಮೊದಲು ಎಂದರೆ ತಪ್ಪಾಗಲಾರದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ವಿಮಾನ ತಪ್ಪಿದ ಕಾರಣ ಈ ಆಟಗಾರ ಟಿ20 ವಿಶ್ವಕಪ್‌ನಿಂದ ಔಟ್!


ದಕ್ಷಿಣ ಆಫ್ರಿಕಾ ಪರ ರುಸೋ  ಅಜೇಯ 100 ರನ್ ಗಳಿಸಿದ್ದಾರೆ. ಇದು ರೂಸೋ ಅವರ ಮೊದಲ ಶತಕ. ಇದೇ ವೇಳೆ ಕ್ವಿಂಟನ್ ಡಿ ಕಾಕ್ 68 ಮತ್ತು ಸ್ಟಬ್ಸ್ 23 ರನ್ ಗಳಿಸಿದ್ದಾರೆ. ಕಿಲ್ಲರ್ ಮಿಲ್ಲರ್ ಎಂದೇ ಖ್ಯಾತ ಡೇವಿಡ್ ಮಿಲ್ಲರ್ 5 ಎಸೆತಗಳಲ್ಲಿ ಅಜೇಯ 19 ರನ್ ಗಳಿಸಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದ್ದಾರೆ.


ಟಾಸ್ ಸೋತು ಬ್ಯಾಟ್ ಬೀಸಿದ ದ.ಆಫ್ರಿಕಾ


ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ದಕ್ಷಿಣ ಆಫ್ರಿಕಾ ತಂಡ ಐದನೇ ಓವರ್‌ನಲ್ಲಿ 30 ರನ್ ಗಳಿಸುವಷ್ಟರಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಇದರ ನಂತರ ಕ್ವಿಂಟನ್ ಡಿ ಕಾಕ್ ಮತ್ತು ರಿಲೆ ರುಸ್ಸೋ ಅವರ ನಡುವೆ 90 ರನ್ ಗಳ ಪ್ರಮುಖ ಜೊತೆಯಾಟ ನಡೆಯಿತು. ಡಿ ಕಾಕ್ 43 ಎಸೆತಗಳಲ್ಲಿ 68 ರನ್ ಗಳಿಸಿ ರನೌಟ್ ಆಗಿ ಪೆವಿಲಿಯನ್‌ಗೆ ಮರಳಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದೇ ವೇಳೆ ಡಿ ಕಾಕ್ ಹೊರತುಪಡಿಸಿ, ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ರಿಲೆ ರುಸ್ಸೋ 48 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಾಯದಿಂದ ಅದ್ಭುತ 100 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಿಂದಾಗಿ ದಕ್ಷಿಣ ಆಫ್ರಿಕಾ ಭಾರತವನ್ನು 49 ರನ್‌ಗಳಿಂದ ಸೋಲಿಸಿತು. ಒಟ್ಟಾರೆ ಹೇಳುವುದಾದರೆ ಈ ಟಿ20 ಸರಣಿಯನ್ನು ಭಾರತ 2-1 ರಿಂದ ತನ್ನದಾಗಿಸಿ ಕೊಂಡಂತಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.