IND vs SA T20I: ಸೋರುತಿಹುದು ಚಿನ್ನಸ್ವಾಮಿ ಸ್ಟೇಡಿಯಂ ಮೇಲ್ಛಾವಣಿ.. ಟ್ರೋಲ್ಗೆ ತುತ್ತಾದ BCCI
Chinnaswamy Stadium roof leaks: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯಗಳ ಸರಣಿಯು 2-2 ಅಂತರದೊಂದಿಗೆ ಅಂತ್ಯವಾಗಿದೆ. ನಿನ್ನೆ ಬೆಂಗಳೂರಿನಲ್ಲಿ ನಡೆಯ ಬೇಕಿದ್ದ 5ನೇ ಹಾಗೂ ಅಂತಿಮ ಪಂದ್ಯದ ಸಮಯದಲ್ಲಿ ಮಳೆ ಬಂದ ಕಾರಣ ಮ್ಯಾಚ್ ರದ್ದಾಯಿತು.
Chinnaswamy Stadium roof leaks: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯಗಳ ಸರಣಿಯು 2-2 ಅಂತರದೊಂದಿಗೆ ಅಂತ್ಯವಾಗಿದೆ. ನಿನ್ನೆ ಬೆಂಗಳೂರಿನಲ್ಲಿ ನಡೆಯ ಬೇಕಿದ್ದ 5ನೇ ಹಾಗೂ ಅಂತಿಮ ಪಂದ್ಯದ ಸಮಯದಲ್ಲಿ ಮಳೆ ಬಂದ ಕಾರಣ ಮ್ಯಾಚ್ ರದ್ದಾಯಿತು. ಇದರೊಂದಿಗೆ 5 ಪಂದ್ಯಗಳ ಸರಣಿಯು ಸಮಬಲದೊಂದಿಗೆ ಅಂತ್ಯಗೊಂಡಿತು. ಆದರೆ ಈ ಪಂದ್ಯದ ಬಳಿಕ ಬಿಸಿಸಿಐ ಸಖತ್ ಟ್ರೋಲ್ ಆಗುತ್ತಿದೆ. ಅದಕ್ಕೆ ಕಾರಣ ಚಿನ್ನಸ್ವಾಮಿ ಸ್ಟೇಡಿಯಂನ ಈ ದುಸ್ಥಿತಿ.
ಇದನ್ನೂ ಓದಿ: 'ಈ ಭಾರತೀಯ ಆಟಗಾರ ತಪ್ಪನ್ನು ತಿದ್ದಿಕೊಳ್ಳಲು ಮುಂದಾಗುತ್ತಿಲ್ಲ'-ಡೇಲ್ ಸ್ಟೇನ್
ನಿನ್ನೆ ಪಂದ್ಯ ವೇಳೆ ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ಚಿನ್ನಸ್ವಾಮಿ ಸ್ಟೇಡಿಯಂನ ಅವ್ಯವಸ್ಥೆ ಬೆಳಕಿಗೆ ಬಂದಿದೆ. ನಿನ್ನೆ ಸುರಿದ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು. ಮಳೆ ನಿಂತ ಬಳಿಕ ಪಂದ್ಯ ಮುಂದುವರೆಯುವ ನಿರೀಕ್ಷೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಸ್ಟೇಡಿಯಂನಲ್ಲಿ ಕಾದು ಕುಳಿತಿದ್ದರು. ಹೀಗೆ ಮಳೆಯಿಂದ ಮ್ಯಾಚ್ ಸ್ಥಗಿತಗೊಂಡು ನಿರಾಸೆಯಲ್ಲಿದ್ದವರಿಗೆ ಮತ್ತೊಂದು ಬೇಸರದ ಸಂಗತಿ ಕಾದಿತ್ತು. ಕುಳಿತಲ್ಲಿ ಕೂರಲಾಗದೆ ಪ್ರೇಕ್ಷಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಎಂ.ಚಿನ್ನಸ್ವಾಮಿ ಸ್ಟೇಡಿಯಂನ ಛಾವಣಿ ಸೋರಲು ಶುರುವಾಗಿದ್ದೇ ಇದೆಲ್ಲದಕ್ಕೂ ಮುಖ್ಯ ಕಾರಣವಾಗಿದ್ದು. ಇದೀಗ ಚಿನ್ನಸ್ವಾಮಿ ಸ್ಟೇಡಿಯಂನ ಈ ಅವ್ಯವಸ್ಥೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
Team India : ಟೀಂ ಇಂಡಿಯಾಕ್ಕೆ ಹೊರೆಯಾಗಿರುವ ಈ ಆಟಗಾರ ಸದ್ಯದಲ್ಲೇ ನಿವೃತ್ತಿ!?
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.