'ಈ ಭಾರತೀಯ ಆಟಗಾರ ತಪ್ಪನ್ನು ತಿದ್ದಿಕೊಳ್ಳಲು ಮುಂದಾಗುತ್ತಿಲ್ಲ'-ಡೇಲ್ ಸ್ಟೇನ್

ಭಾರತೀಯ ತಂಡದ ಆಟಗಾರ ರಿಶಬ್ ಪಂತ್ ಈಗ ಎಂದಿನಂತೆ ತಮ್ಮ ವೈಫಲ್ಯವನ್ನು ಮುಂದುವೆರೆಸಿದ್ದಾರೆ.

Written by - Zee Kannada News Desk | Last Updated : Jun 18, 2022, 04:36 PM IST
  • ಉತ್ತಮ ಆಟಗಾರರು ತಮ್ಮ ತಪ್ಪುಗಳಿಂದ ಕಲಿಯುತ್ತಾರೆ ಎಂದು ನೀವು ಭಾವಿಸುತ್ತೀರಿ,
  • 'ಆದರೆ ಅವರು ಕಲಿತಿಲ್ಲ' ಎಂದು ಅವರು ಹೇಳಿದರು.
 'ಈ ಭಾರತೀಯ ಆಟಗಾರ ತಪ್ಪನ್ನು ತಿದ್ದಿಕೊಳ್ಳಲು ಮುಂದಾಗುತ್ತಿಲ್ಲ'-ಡೇಲ್ ಸ್ಟೇನ್ title=

ನವದೆಹಲಿ: ಭಾರತೀಯ ತಂಡದ ಆಟಗಾರ ರಿಶಬ್ ಪಂತ್ ಈಗ ಎಂದಿನಂತೆ ತಮ್ಮ ವೈಫಲ್ಯವನ್ನು ಮುಂದುವೆರೆಸಿದ್ದಾರೆ.

ಈಗ ಈ ವಿಚಾರವಾಗಿ ಮಾತನಾಡಿರುವ ದಕ್ಷಿಣ ಆಫ್ರಿಕಾದ ಆಟಗಾರ ಡೇಲ್ ಸ್ಟೆನ್ 'ಈ ಸರಣಿಯಲ್ಲಿ ಪಂತ್ ಅವರಿಗೆ ನಾಲ್ಕು ಅವಕಾಶಗಳಿವೆ, ಅಲ್ಲಿ ಅವರು ಅದೇ ತಪ್ಪುಗಳನ್ನು ಮಾಡುತ್ತಿದ್ದಾರೆ.ಅಲ್ಲದೆ, ಉತ್ತಮ ಆಟಗಾರರು ತಮ್ಮ ತಪ್ಪುಗಳಿಂದ ಕಲಿಯುತ್ತಾರೆ ಎಂದು ನೀವು ಭಾವಿಸುತ್ತೀರಿ, ಆದರೆ ಅವರು ಕಲಿತಿಲ್ಲ' ಎಂದು ಅವರು ಹೇಳಿದರು.

'ಡಿಕೆ ಪ್ರತಿ ಬಾರಿ ಹೊರಬಂದು ಕ್ಲಾಸ್ ಪ್ಲೇಯರ್ ಎಂಬುದನ್ನು ತೋರಿಸಿದ್ದಾರೆ.ನೀವು ವಿಶ್ವಕಪ್ ಗೆಲ್ಲಲು ಬಯಸಿದರೆ, ನೀವು ಫಾರ್ಮ್‌ನಲ್ಲಿರುವ ಹುಡುಗನನ್ನು ಆಯ್ಕೆ ಮಾಡಲು ಬಯಸುತ್ತೀರಿ, ಖ್ಯಾತಿಯನ್ನು ಗಳಿಸುವ ಹುಡುಗರಿದ್ದಾರೆ, ಆದರೆ ಡಿಕೆ ಅಂತಹ ಅದ್ಭುತ ಫಾರ್ಮ್‌ನಲ್ಲಿದ್ದಾರೆ, ಅವರು ಇದೇ ಫಾರ್ಮ್ ಅನ್ನು ಮುಂದುವರಿಸಿದರೆ ವಿಶ್ವಕಪ್ ಆಡಲಿರುವ ಆಟಗಾರರಲ್ಲಿರುವ ಮೊದಲ ಹೆಸರು ಅವರದ್ದಾಗಲಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಆರ್ ಆರ್ ಆರ್ ಮತ್ತು ಕೆಜಿಎಫ್ 2 ನಡುವೆ ಯಾವುದು ಫೇವರಿಟ್? ಎಂದು ಕೇಳಿದ್ದಕ್ಕೆ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತೇ ?

ಇನ್ನೂ ಮುಂದುವರೆದು ದಿನೇಶ್ ಕಾರ್ತಿಕ್ ಬಗ್ಗೆ ಮಾತನಾಡಿದ ಸ್ಟೆನ್ 'ಈ ವರ್ಷ ಅವರು ಉತ್ತಮವಾಗುತ್ತಾ ಹೋಗುತ್ತಿದ್ದಾರೆ.ಅವರು ವಿಕೆಟ್‌ಕೀಪರ್ ಮನಸ್ಥಿತಿಯನ್ನು ಹೊಂದಿದ್ದಾರೆ, ಆದ್ದರಿಂದ ಅವರು ಆಟವನ್ನು ಚೆನ್ನಾಗಿ ಅರ್ಥೈಸಿಕೊಳ್ಳುತ್ತಾರೆ.ಬೌಲರ್ ಗಳು ಏನು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಅವರು ತಿಳಿದಿದ್ದಾರೆ. ರಿವರ್ಸ್ ಸ್ವೀಪ್, ಸ್ವೀಪ್, ಲ್ಯಾಪ್ಸ್ ನಂತರಹ ಹೊಡೆತಗಳನ್ನು ಆಟವನ್ನು ಚೆನ್ನಾಗಿ ತಿಳಿದಿರುವ ಮತ್ತು ಬೌಲರ್ ಗಳನ್ನು ಅರ್ಥೈಸಿಕೊಂಡಿರುವ ಆಟಗಾರ ಮಾತ್ರ ಅವುಗಳನ್ನು ಆಡಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಅವರು ಓವರ್ ನಲ್ಲಿನ ಮೊದಲ ಮತ್ತು ಕೊನೆಯ ಎಸೆತದ ಮೇಲೆ ಆಕ್ರಮಣ ಮಾಡುತ್ತಾರೆ, ಹೀಗಾಗಿ ಬೌಲರ್ ಒತ್ತಡಕ್ಕೆ ಒಳಗಾಗುತ್ತಾನೆ, ಹೀಗಾಗಿ ಬೌಲರ್ ಬಳಿ ಯಾವುದೇ ಉತ್ತರ ಇರುವುದಿಲ್ಲ ಎಂದು ಸ್ಟೆನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News