ನವದೆಹಲಿ: ಮುಂಬರುವ ದಕ್ಷಿಣ ಆಫ್ರಿಕಾ ಸರಣಿ(India vs South Africa 2021)ಗೂ ಮೊದಲೇ ಟೀಂ ಇಂಡಿಯಾಗೆ ಬಹುದೊಡ್ಡ ಆಘಾತವುಂಟಾಗಿದ್ದು, ‘ಹಿಟ್‌ಮ್ಯಾನ್’ ರೋಹಿತ್ ಶರ್ಮಾ(Rohit Sharma)ಟೂರ್ನಿಯಿಂದಲೇ ಔಟ್ ಆಗಿದ್ದಾರೆ. ಹೌದು, ಇದೇ ತಿಂಗಳ 26ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಲಿರುವ 3 ಪಂದ್ಯಗಳ ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಹೊರಬಿದಿದ್ದಾರೆ. ಅಭ್ಯಾಸದ ವೇಳೆ ರೋಹಿತ್ ಗಾಯಗೊಂಡಿದ್ದು, ಟೆಸ್ಟ್ ಸರಣಿಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ನೆಟ್ ಅಭ್ಯಾಸದ ವೇಳೆ ಗಾಯ


ಭಾರತೀಯ ಟೆಸ್ಟ್ ತಂಡದ ನೂತನ ಉಪನಾಯಕರಾಗಿ ನೇಮಕಗೊಂಡಿರುವ ರೋಹಿತ್ ಶರ್ಮಾ(Rohit Sharma) ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ನಲ್ಲಿ ಅಭ್ಯಾಸ ನಡೆಸುತ್ತಿರುವಾಗ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು. ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತಿದ್ದ ಅವರ ಬೆರಳಿಗೆ ಚೆಂಡು ಬಡಿದು ಗಾಯವಾಗಿತ್ತು. ಹೀಗಾಗಿ ಅವರು ಸರಣಿ ಆಡುವುದು ಅನುಮಾನ ಎನ್ನಲಾಗಿತ್ತು. ಆದರೀಗ ಟೆಸ್ಟ್ ಸರಣಿಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದು, ಜನವರಿಯಲ್ಲಿ ನಡೆಯಲಿರುವ ಏಕದಿನ ಸರಣಿಗೆ ತಂಡ ಸೇರಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.


ಇದನ್ನೂ ಓದಿ: "ಗುರಾಯ್ಸೋಕೆ ರೆಡಿಯಾಗಿದೆ ನಮ್ಮೂರ ಬುಲ್ಸ್": Bengaluru bulls ಹೊಸ ಪ್ರೊಮೊದಲ್ಲಿ ಕಿಚ್ಚ ಸುದೀಪ್


ರೋಹಿತ್ ಶರ್ಮಾ ಬದಲಿ ಆಟಗಾರನ ಎಂಟ್ರಿ!


ದ.ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯ ಡಿ.26ರಿಂದ ಆರಂಭ(India tour of South Africa)ವಾಗಲಿದ್ದು, 2ನೇ ಟೆಸ್ಟ್ ಜ.3ರಿಂದ ಆರಂಭವಾಗಲಿದೆ. 3ನೇ ಟೆಸ್ಟ್ ಜ.11ರಿಂದ 15ವರೆಗೆ ನಡೆಯಲಿದೆ. ರೋಹಿತ್ ಶರ್ಮಾ ಬದಲಿಗೆ 31 ವರ್ಷದ ಪ್ರಿಯಾಂಕ್ ಪಾಂಚಾಲ್ (Priyank Panchal)ರನ್ನು ಆಯ್ಕೆ ಮಾಡಲಾಗಿದೆ. ಆದರೆ ಆಡುವ 11ರಲ್ಲಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ರೋಹಿತ್ ನಂತರ ಮಯಾಂಕ್ ಅಗರ್ವಾಲ್, ಕೆ.ಎಲ್.ರಾಹುಲ್ ಜೊತೆ ಬ್ಯಾಟಿಂಗ್ ಮಾಡಬಹುದು ಅಥವಾ ಈ ಅವಕಾಶವನ್ನು ಶುಭಮನ್ ಗಿಲ್ ಗೆ ನೀಡಬಹುದು. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ಮಯಾಂಕ್ ಅದ್ಭುತ ಫಾರ್ಮ್‌ನಲ್ಲಿದ್ದರು.


Ajinkya Rahane)ಯನ್ನು ಟೆಸ್ಟ್ ತಂಡದ ಉಪನಾಯಕ ಸ್ಥಾನದಿಂದ ತೆಗೆದುಹಾಕಿ ಅವರ ಸ್ಥಾನಕ್ಕೆ ರೋಹಿತ್ ರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ರೋಹಿತ್ ಗಾಯಗೊಂಡ ನಂತರ ಹೊಸ ಆಟಗಾರನನ್ನು ಟೀಂ ಇಂಡಿಯಾ ಉಪನಾಯಕನನ್ನಾಗಿ ಮಾಡಲಿದೆ. ಕೆಲ ಸಮಯದಿಂದ ರಹಾನೆ ಪ್ರದರ್ಶನವು ತುಂಬಾ ಕಳಪೆಯಾಗಿದೆ. ಅವರನ್ನು ತಂಡದಿಂದ ಕೈಬಿಡುವ ಬಗ್ಗೆ ನಿರಂತರ ಮಾತುಕತೆಗಳು ನಡೆಯುತ್ತಿವೆ. ಬಹುಶಃ ಆಯ್ಕೆದಾರರು ಅವರಿಗೆ ಕೊನೆಯ ಅವಕಾಶ ನೀಡಲು ಬಯಸಿದ್ದಾರೆ ಎನ್ನಲಾಗಿದೆ. ಆದರೆ ರಹಾನೆ ವೃತ್ತಿಜೀವನಕ್ಕೆ ಸದ್ಯಕ್ಕೆ ಗ್ರಹಣ ಹಿಡಿದಂತಿದೆ.


ಇದನ್ನೂ ಓದಿ: ರೋಹಿತ್ ಕ್ಯಾಪ್ಟನ್ ಆದ ತಕ್ಷಣ ಬದಲಾಯಿತು ಗಂಗೂಲಿ ಸ್ವರ!: ‘ದಾದಾ’ರ ಈ ವಿಷಯದಿಂದ ಕೊಹ್ಲಿಗೆ ಶಾಕ್!


ಟೆಸ್ಟ್ ಸರಣಿಗೆ ಭಾರತ ತಂಡ


ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಭ್ ಪಂತ್, ವೃದ್ಧಿಮಾನ್ ಸಹಾ, ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರಿತ್ ಬುಮ್ರಾ, ಶಾರ್ದೂಲ್ ಠಾಕೂರ್, ಪ್ರಿಯಾಂಕ್ ಪಾಂಚಾಲ್ ಮತ್ತು ಮೊಹಮ್ಮದ್ ಸಿರಾಜ್. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.