ಬೆಂಗಳೂರು: ವಿವೊ ಪ್ರೊ ಕಬ್ಬಡ್ಡಿ ಲೀಗ್ ಗೆ (Pro Kabaddi League) ದಿನಗಣನೆ ಆರಂಭಗೊಂಡಿದೆ. 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯು ಡಿಸೆಂಬರ್ 22ರಿಂದ ಆರಂಭವಾಗಲಿದೆ.
ಈ ಬಾರಿ ಟೂರ್ನಿ ಬೆಂಗಳೂರಿನಲ್ಲಿ(Bengaluru) ಆಯೋಜನೆಗೊಳ್ಳುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್(Bengaluru Bulls) ಹಾಗೂ ಯು ಮುಂಬಾ(U mumba) ಹೋರಾಟ ನಡೆಸಲಿವೆ. ಇದೇ ವೇಳೆಯಲ್ಲಿ ಬೆಂಗಳೂರು ಬುಲ್ಸ್ ಕೂಡ ಸಖತ್ ತಯಾರಿ ನಡೆಸಿದ್ದು, ಹೊಸ ಪ್ರೊಮೊ ರಿಲೀಸ್ ಮಾಡಿದೆ.
ಈ ಪ್ರೊಮೊದಲ್ಲಿ ಕಿಚ್ಚ ಸುದೀಪ್ (Sudeep) ಕಾಣಿಸಿಕೊಂಡಿದ್ದಾರೆ. ಪಕ್ಕಾ ಹಳ್ಳಿ ಸೊಗಡಿನಲ್ಲಿ ಎಂಟ್ರಿ ಕೊಡುವ ಕಿಚ್ಚ, ಸಖತ್ ಡೈಲಾಗ್ ಹೊಡೆದು ಬೆಂಗಳೂರು ಬುಲ್ಸ್ ತಂಡಕ್ಕೆ ಬೆಂಬಲ ನೀಡಿದ್ದಾರೆ. ಈ ಪ್ರೊಮೊ ರಿಲೀಸ್ (Bengaluru Bulls Promo) ಆಗಿದ್ದು, ಇದನ್ನು ಸುದೀಪ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಗುರಾಯ್ಸೋಕೆ ರೆಡಿಯಾಗಿದೆ ನಮ್ಮೂರ ಬುಲ್ಸ್.. ಸಪೋರ್ಟ್ ಮಾಡೋಕೆ ರೆಡಿಯಾಗಿ ಕಬಡ್ಡಿ ಫ್ಯಾನ್ಸ್.. ನಿಮ್ಮ ಜೊತೆ ಬೆಂಗಳೂರು ಬುಲ್ಸ್ (Bengaluru Bulls) ಟೀಮ್ ಗೆ ಬೆಂಬಲ ನೀಡೋಕೆ ನಾನೂ ಕೂಡ ಇರ್ತಿನಿ ಎಂದು ಸುದೀಪ್ ಬರೆದುಕೊಂಡಿದ್ದಾರೆ. ಬೆಂಗಳೂರು ಬುಲ್ಸ್ ತಂಡವು ಅಖಾಡಕ್ಕೆ ಇಳಿಯಲು ಸನ್ನದ್ದರಾಗಿದ್ದು, ಬುಲ್ಸ್ ಅಭಿಮಾನಿಗಳನ್ನ ಪ್ರೊಮೊ ಹುರಿದುಂಬಿಸಿದೆ.
ಗುರಾಯ್ಸೋಕೆ ರೆಡಿಯಾಗಿದೆ ನಮ್ಮೂರ ಬುಲ್ಸ್..👊
ಸಪೋರ್ಟ್ ಮಾಡೋಕೆ ರೆಡಿಯಾಗಿ ಕಬಡ್ಡಿ ಫ್ಯಾನ್ಸ್..🥳
ನಿಮ್ಮ ಜೊತೆ @bengalurubulls ಟೀಮ್ ಗೆ ಬೆಂಬಲ ನೀಡೋಕೆ ನಾನೂ ಕೂಡ ಇರ್ತಿನಿ..💪ವೀಕ್ಷಿಸಿ, #vivoProKabaddi
🗓️ಡಿ.22 ರಿಂದ,
📺ಸ್ಟಾರ್ ಸ್ಪೋರ್ಟ್ಸ್ 1 ಕನ್ನಡದಲ್ಲಿ & Disney + hotstar pic.twitter.com/2X3aOw1LC1— Kichcha Sudeepa (@KicchaSudeep) December 13, 2021
ಈ ಪ್ರೊಮೊದಲ್ಲಿ, "ಕನ್ನಡದವರಿಗೆ ಗೂಳಿ ಬರೀ ಗೂಳಿ ಅಲ್ಲಾರೀ, ಮಣ್ಣಿನ ಮೇಲೆ ಕಾಲಿಟ್ಟಾಗ ಅದು ನಮ್ಮ ಸ್ಥಿರವಾದ ನಿಲುವು. ಅಣ್ತಮ್ಮ ಮುದ್ದೆ ನುಂಗುದ್ರೆ ಅದು ನಮ್ಮ ಧೈರ್ಯ ಕಲಾ.. ಕಣ್ಣಾಗ್ ಕಣ್ಣಿಟ್ರೇ ಅದು ನಮ್ಮ ತಾಕತ್ತು. ಮೀಟರ್ ಐತೆ ಅಂದ್ರೆ ಇತ್ ಕಡಿಕ್ ಬನ್ನಿ.. ನೋಡೆ ಬಿಡುವ ಒಂದ್ ಸಲಾ ಗುಮ್ಮಿ. ಬುಲ್ಸ್ ಅಂದ್ರೆ ಬರೀ ಗೂಳಿ ಅಲ್ಲಾರಿ.. ನಮ್ಮ ಆರು ಕೋಟಿ ಕನ್ನಡಿಗರ ಗಮ್ಮತ್ತು. ಕೊಂಬು ಎತ್ತು ಮಾಡು ಸದ್ದು, ನಮ್ಮವರ ಕಬಡ್ಡಿ ನೋಡು. ನಮ್ಮ ಊರು.. ನಮ್ಮ ಆಟ.. ನಮ್ಮ ಹುಡುಗ್ರು.. ನಮ್ಮ ಬುಲ್ಸ್.." ಎಂದು ಬಾದ್ ಷಾ ಸಖತ್ ಡೈಲಾಗ್ ಹೇಳಿದ್ದಾರೆ.
Look at those charming face 🔥😍♥️ #KicchaSudeep #VikrantRona #VikrantRonaOnFeb24 #Malurksss #vivoProKabaddi @KicchaSudeep @KSSS_Official_ @BangloreBulls @KingKicchaFcOfficial @Kiccha @BleedForKichchaa pic.twitter.com/70lYPXnwm6
— Kichcha Boss Team Official - Haveri ™ (@KingKichchaFC) December 13, 2021
ಇದನ್ನೂ ಓದಿ: Rohit Sharma: ODI ನಾಯಕನಾದ ನಂತರ ರೋಹಿತ್ ಮೊದಲ ಪ್ರತಿಕ್ರಿಯೆ, ಟೀಕಾಕಾರರಿಗೆ ಪ್ರತ್ಯುತ್ತರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.