ರೋಹಿತ್ ಕ್ಯಾಪ್ಟನ್ ಆದ ತಕ್ಷಣ ಬದಲಾಯಿತು ಗಂಗೂಲಿ ಸ್ವರ!: ‘ದಾದಾ’ರ ಈ ವಿಷಯದಿಂದ ಕೊಹ್ಲಿಗೆ ಶಾಕ್!

ವಾಸ್ತವವಾಗಿ ರೋಹಿತ್ ಶರ್ಮಾ ಅವರು ದೀರ್ಘಕಾಲದವರೆಗೆ ಏಕದಿನ ಮತ್ತು ಟಿ-20 ತಂಡದ ನಾಯಕರಾಗುವುದು ಕಷ್ಟ ಎಂದು ಹೇಳಲಾಗುತ್ತಿದೆ.

Written by - Puttaraj K Alur | Last Updated : Dec 13, 2021, 04:38 PM IST
  • ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಲಿದೆ ಎಂದ ‘ದಾದಾ’
  • ರೋಹಿತ್ ಶರ್ಮಾರನ್ನು ನಾಯಕನನ್ನಾಗಿ ಮಾಡಲು ಆಯ್ಕೆಗಾರರು ಬೆಂಬಲಿಸಿದ್ದಾರೆ
  • ಬಿಸಿಸಿಐ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ ಬಾಲ್ಯದ ಕೋಚ್
ರೋಹಿತ್ ಕ್ಯಾಪ್ಟನ್ ಆದ ತಕ್ಷಣ ಬದಲಾಯಿತು ಗಂಗೂಲಿ ಸ್ವರ!: ‘ದಾದಾ’ರ ಈ ವಿಷಯದಿಂದ ಕೊಹ್ಲಿಗೆ ಶಾಕ್! title=
ರೋಹಿತ್ ಬಗ್ಗೆ ‘ದಾದಾ’ ಹೇಳಿದ್ದೇನು..?

ನವದೆಹಲಿ: ಇತ್ತೀಚೆಗಷ್ಟೇ ಏಕದಿನ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿ(Virat Kohli) ಅವರನ್ನು ವಜಾಗೊಳಿಸಿ ರೋಹಿತ್ ಶರ್ಮಾ ಅವರನ್ನು ನೂತನ ನಾಯಕರನ್ನಾಗಿ ಬಿಸಿಸಿಐ ನೇಮಕ ಮಾಡಿದೆ. ವಿರಾಟ್ ಈಗಾಗಲೇ ಟಿ-20 ತಂಡದ ನಾಯಕತ್ವ ತೊರೆದಿದ್ದಾರೆ. ಅಂದಿನಿಂದ ಭಾರತ ಕ್ರಿಕೆಟ್‌ನಲ್ಲಿ ನಿರಂತರ ವಿವಾದಗಳು ನಡೆಯುತ್ತಲೇ ಇವೆ. ಇದೀಗ ಈ ನಡುವೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರೋಹಿತ್ ಶರ್ಮಾ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.

ರೋಹಿತ್ ಬಗ್ಗೆ ‘ದಾದಾ’ ಹೇಳಿದ್ದೇನು..?

ರೋಹಿತ್ ಶರ್ಮಾ(Rohit Sharma) ನಾಯಕತ್ವದಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಲಿದೆ ಎಂದು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟಿವಿ ವಾಹಿನಿಯೊಂದರ ಜೊತೆ ಮಾತನಾಡಿರುವ ಗಂಗೂಲಿ, ‘ರೋಹಿತ್ ಅವರನ್ನು ನಾಯಕನನ್ನಾಗಿ ಮಾಡಲು ಆಯ್ಕೆಗಾರರು ಬೆಂಬಲಿಸಿದ್ದಾರೆ. ಅವರು ಮೊದಲ ಏಷ್ಯಾ ಕಪ್‌ನಲ್ಲಿ ಭಾರತವನ್ನು ಮುನ್ನಡೆಸಿದ್ದರು ಮತ್ತು ಟೀಂ ಇಂಡಿಯಾ ಕೊಹ್ಲಿ ಇಲ್ಲದೆಯೂ ಟ್ರೋಫಿ ಎತ್ತಿಹಿಡಿದಿತ್ತು. ರೋಹಿತ್ ದೊಡ್ಡ ಪಂದ್ಯಾವಳಿಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ತಂಡ ಈಗ ಚೆನ್ನಾಗಿದೆ. ರೋಹಿತ್ ನಾಯಕತ್ವ(Rohit New Captain)ದಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಲಿದೆ’ ಅಂತಾ ಗಂಗೂಲಿ ಹೇಳಿದ್ದಾರೆ.

ಇದನ್ನೂ ಓದಿ: IPL 2022 Mega Auction : ಈ ಆಟಗಾರರನ್ನು ಖಂಡಿತವಾಗಿಯೂ ಖರೀದಿಸಲಿದೆ Mumbai Indians!

ಏಕದಿನದಲ್ಲಿ 'ವಿರಾಟ್' ಶ್ರೇಷ್ಠ ದಾಖಲೆ

ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡಿರುವ ಗಂಗೂಲಿ(Sourav Ganguly), ‘ಅವರ ದಾಖಲೆ ಅತ್ಯುತ್ತಮವಾಗಿದೆ. ವಿರಾಟ್ ಯಾವುದೇ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ, ಆದರೆ ಅವರ ನಾಯಕತ್ವದಲ್ಲಿ ಗೆದ್ದ ದಾಖಲೆ ಅದ್ಭುತವಾಗಿದೆ. ವಿರಾಟ್ 95 ಏಕದಿನ ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು. ಇದರಲ್ಲಿ 65 ಪಂದ್ಯಗಳನ್ನು ಗೆದ್ದು 27 ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ. ಈ ವೇಳೆ ಟೀಂ ಇಂಡಿಯಾದ ಗೆಲುವಿನ ಶೇಕಡಾವಾರು 70.43 ಆಗಿತ್ತು.

ವಿರಾಟ್ ಬಾಲ್ಯದ ಕೋಚ್ ಅಸಮಾಧಾನ

ಬಿಸಿಸಿಐ(BCCI)ನ ಈ ನಿರ್ಧಾರದಿಂದ ಕ್ರಿಕೆಟ್ ತಜ್ಞರು ಹಾಗೂ ಅಭಿಮಾನಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿದ್ದು, ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ತಮ್ಮ ಸ್ವಂತ ಇಚ್ಛೆಯ ಮೇರೆಗೆ ಟಿ-20 ನಾಯಕತ್ವವನ್ನು ತೊರೆದಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕೊಹ್ಲಿ ಅವರನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿರುವ ಬಿಸಿಸಿಐ(BCCI) ನಿರ್ಧಾರ ಸರಿಯಲ್ಲ. ಇದು ಕೊಹ್ಲಿಗೆ ಮಾಡಿದ ದೊಡ್ಡ ಅಪಮಾನವೆಂದು ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿ: "ಗುರಾಯ್ಸೋಕೆ ರೆಡಿಯಾಗಿದೆ ನಮ್ಮೂರ ಬುಲ್ಸ್": Bengaluru bulls ಹೊಸ ಪ್ರೊಮೊದಲ್ಲಿ ಕಿಚ್ಚ ಸುದೀಪ್     

ರೋಹಿತ್ ನಾಯಕತ್ವ ಹೆಚ್ಚು ಕಾಲ ಉಳಿಯುತ್ತಾ..?

ವಾಸ್ತವವಾಗಿ ರೋಹಿತ್ ಶರ್ಮಾ(Rohit Sharma) ಅವರು ದೀರ್ಘಕಾಲದವರೆಗೆ ಏಕದಿನ ಮತ್ತು ಟಿ-20 ತಂಡದ ನಾಯಕರಾಗುವುದು ಕಷ್ಟ ಎಂದು ಹೇಳಲಾಗುತ್ತಿದೆ. ಏಕೆಂದರೆ ಅವರಿಗೆ ಈಗ 34 ವರ್ಷ ಮತ್ತು ಅವರು ವಿರಾಟ್ ಕೊಹ್ಲಿ (33) ಗಿಂತ 1 ವರ್ಷವಷ್ಟೇ ಹಿರಿಯರು. ಈ ವಯಸ್ಸಿನಲ್ಲಿ ದೊಡ್ಡ ಆಟಗಾರರ ಫಿಟ್ನೆಸ್ ಸಮಸ್ಯೆ ಕೊರತೆ ಕಾಡುತ್ತದೆ. ಹೀಗಾಗಿ ಅವರು ನಿವೃತ್ತಿಗಾಗಿ ಯೋಚಿಸಲು ಪ್ರಾರಂಭಿಸುತ್ತಾರೆ. 7-8 ವರ್ಷಗಳ ಸುದೀರ್ಘ ಅವಧಿಯ ಬಗ್ಗೆ ಯೋಚಿಸಿದರೆ ರೋಹಿತ್ ಅವರನ್ನು ಹೊಸ ನಾಯಕನನ್ನಾಗಿ ಮಾಡಲಾಗಿಲ್ಲ. 2023ರ ವಿಶ್ವಕಪ್ ಬಗ್ಗೆ ಯೋಚಿಸಿದ ನಂತರವೇ ಬಿಸಿಸಿಐ(BCCI) ಅವರಿಗೆ ನಾಯಕತ್ವ ನೀಡಿದೆ. ಬಹುಶಃ ರೋಹಿತ್ ಮುಂಬರುವ ವಿಶ್ವಕಪ್ ಪಂದ್ಯಾವಳಿ ಬಳಿಕ ನಿವೃತ್ತರಾಗಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News