India vs South Africa, 2nd T20I: ಫಲ ಕೊಡದ ಭುವನೇಶ್ವರ ಕುಮಾರ್ ಶ್ರಮ, ಹರಿಣಗಳಿಗೆ ಸತತ ಎರಡನೇ ಗೆಲುವು
ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ ನಾಲ್ಕು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಕಟಕ್: ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ ನಾಲ್ಕು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲ ಫೀಲ್ಡಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡವು ಆರಂಭದಿಂದಲೂ ಶಿಸ್ತುಬದ್ಧ ಬೌಲಿಂಗ್ ದಾಳಿಯನ್ನು ನಡೆಸಿತು, ಇದರ ಪರಿಣಾಮವಾಗಿ ತಂಡವು ನಿಧಾನಗತಿಯಲ್ಲಿ ರನ್ ಗಳಿಸುತ್ತಾ ಸಾಗಿತು, ಅದರಲ್ಲೂ ಆರಂಭದ ಓವರ್ ನಲ್ಲಿಯೇ ರುತುರಾಜ್ ಗಾಯಕ್ವಾಡ್ ಅವರ ವಿಕೆಟ್ ಕಳೆದುಕೊಂಡ ನಂತರ ರಕ್ಷಣಾತ್ಮಕ ಆಟಕಕ್ಕೆ ಮೊರೆ ಹೋಯಿತು.
ಇದನ್ನೂ ಓದಿ: Early Marriage Tips: ವಿವಾಹ ಯೋಗ ಕೂಡಿ ಬರುತ್ತಿಲ್ಲವೇ? ಇಂದೇ ಈ ಉಪಾಯ ಅನುಸರಿಸಿ
ಇದಾದ ನಂತರ ಭಾರತ ತಂಡವು ಆಕ್ರಮಣಕಾರಿಯಾಗಿ ಆಡಲೇ ಇಲ್ಲ, ಭಾರತದ ಪರವಾಗಿ ಇಶಾನ್ ಕಿಶನ್,34, ಶ್ರೇಯಸ್ ಅಯ್ಯರ್ 40, ಹಾಗೂ ಕಾರ್ತಿಕ್ ಅವರ ಅಜೇಯ 30 ರನ್ ಗಳ ನೆರವಿನಿಂದ ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 148 ರನ್ ಗಳನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾಯಿತು.
ಈ ಆಟಗಾರನ ವೇಗದ ಬೌಲಿಂಗ್ ನೋಡಿ ಫಿದಾ ಆದ ದಿಲೀಪ್ ವೆಂಗಸರ್ಕಾರ್..!
ಇದಾದ ನಂತರ 149 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 18.2 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿಯನ್ನು ತಲುಪಿತು. ಒಂದು ಹಂತದಲ್ಲಿ ಭುವನೇಶ್ವರ್ ಕುಮಾರ್ ಅವರ ಭರ್ಜರಿ ಬೌಲಿಂಗ್ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ತಂಡವು ಕೇವಲ 29 ರನ್ ಗಳಾಗುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು, ಇಂತಹ ಸಂದರ್ಭದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ ಹೆನ್ರಿಚ್ ಕ್ಲಾಸೇನ್ ಕೇವಲ 46 ಎಸೆತಗಳಲ್ಲಿ ಐದು ಸಿಕ್ಸರ್ ಹಾಗೂ ಏಳು ಬೌಂಡರಿ ನೆರವಿನಿಂದ 81 ರನ್ ಗಳನ್ನು ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.ಆ ಮೂಲಕ ದಕ್ಷಿಣ ಆಫ್ರಿಕಾ ತಂಡವು ಈಗ 2-0 ಅಂತರದಲ್ಲಿ ಮುನ್ನೆಡೆಯನ್ನು ಕಾಯ್ದುಕೊಂಡಿದೆ.Youtube, Facebook, Twitterನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
https://apple.co/3hEw2hyApple Link -
https://bit.ly/3hDyh4GAndroid Link -
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...