Early Marriage Tips: ವಿವಾಹ ಯೋಗ ಕೂಡಿ ಬರುತ್ತಿಲ್ಲವೇ? ಇಂದೇ ಈ ಉಪಾಯ ಅನುಸರಿಸಿ

Tips for Early Marriage: ಜಾತಕದಲ್ಲಿ ಒಂದು ವೇಳೆ ಗ್ರಹಗಳು ದುರ್ಬಲವಾಗಿದ್ದರೆ ಅವು ಮದುವೆ ವಿಳಂಬಕ್ಕೆ ಅಥವಾ ಪದೇ ಪದೇ ತಿರಸ್ಕಾರಕ್ಕೆ ಕಾರಣವಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ನೀವು ಕೆಲ ಉಪಾಯಗಳನ್ನು ಅನುಸರಿಸುವ ಮೂಲಕ ನಿಜವಾದ ಅಥವಾ ಮನಮೆಚ್ಚಿದ ಜೀವನ ಸಂಗಾತಿಯನ್ನು ಪಡೆಯಬಹುದು  

Written by - Nitin Tabib | Last Updated : Jun 12, 2022, 03:33 PM IST
  • ನಿಮಗೆ ನಿಜವಾದ ಮತ್ತು ಉತ್ತಮ ಜೀವನ ಸಂಗಾತಿಯನ್ನು ಪಡೆಯಲು ಸಾಕಷ್ಟು ಸಹಾಯ ಮಾಡುತ್ತವೆ.
  • ಈ ಉಪಾಯಗಳು ತುಂಬಾ ಸರಳವಾಗಿದ್ದು, ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತವೆ.
  • ದಾಂಪತ್ಯದಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ಇವು ನಿವಾರಿಸುತ್ತಾರೆ.
Early Marriage Tips: ವಿವಾಹ ಯೋಗ ಕೂಡಿ ಬರುತ್ತಿಲ್ಲವೇ? ಇಂದೇ ಈ ಉಪಾಯ ಅನುಸರಿಸಿ title=
Early Marriage Tips

Tips to Avoid Delayed Marriage: ಕಂಕಣ ಬಲ ಕೂಡಿ ಬರುತ್ತಿಲ್ಲ ಅಥವಾ ನೀವು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಅಡೆತಡೆಗಳು ಎದುರಾಗುತ್ತಿದ್ದರೆ, ನೀವು ಖಂಡಿತವಾಗಿಯೂ ಕೆಲವು ಉಪಾಯಗಳನ್ನು ಅನುಸರಿಸಬೇಕು. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾದ ಈ ಉಪಾಯಗಳು ನಿಮಗೆ ನಿಜವಾದ ಮತ್ತು ಉತ್ತಮ ಜೀವನ ಸಂಗಾತಿಯನ್ನು ಪಡೆಯಲು ಸಾಕಷ್ಟು ಸಹಾಯ ಮಾಡುತ್ತವೆ. ಈ ಉಪಾಯಗಳು ತುಂಬಾ ಸರಳವಾಗಿದ್ದು, ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತವೆ. ದಾಂಪತ್ಯದಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ಇವು ನಿವಾರಿಸುತ್ತಾರೆ.

ಉತ್ತಮ ಜೀವನ ಸಂಗಾತಿಗಾಗಿ ಈ ಉಪಾಯಗಳನ್ನು ಅನುಸರಿಸಿ
>> ನಿಮ್ಮ ಜೀವನದಲ್ಲಿಯೂ ಕೂಡ ಬಾಳಸಂಗಾತಿಗಾಗಿ ನಿಮ್ಮ ಹುಡುಕಾಟ ಕೊನೆಗೊಂಡಿಲ್ಲ ಎಂದಾದಲ್ಲಿ, ಶ್ರೀ ಕೃಷ್ಣನ ದೇವಸ್ಥಾನದಲ್ಲಿ ಕೊಳಲು ಮತ್ತು ಪಾನ್ ಅನ್ನು ಅರ್ಪಿಸಿ, ಇದು ಶೀಘ್ರದಲ್ಲೇ ನಿಮ್ಮ ಜೀವನದಲ್ಲಿ ಪ್ರೀತಿಯನ್ನು ತರುತ್ತದೆ.

>> ಪ್ರೇಮ ಸಂಗಾತಿಯನ್ನು ಮದುವೆಯಾಗಲು ಅಡೆತಡೆಗಳು ಎದುರಾಗುತ್ತಿದ್ದರೆ,  ತಾಯಿ ದುರ್ಗೆಯನ್ನು ಪೂಜಿಸಿ ಮತ್ತು ಶುಕ್ರವಾರದಂದು ಅವಳಿಗೆ ಕೆಂಪು ವಸ್ತ್ರ ಅಥವಾ ಚುನರಿಯನ್ನು ಅರ್ಪಿಸಿ. ಇದು ಶೀಘ್ರದಲ್ಲೇ ಮದುವೆಯಾಗಲು ದಾರಿ ತೆರೆಯುತ್ತದೆ.

>> ಉತ್ತಮ ಮತ್ತು ನಿಜವಾದ ಬಾಳಸಂಗಾತಿಯನ್ನು ಪಡೆಯಲು ಶಿವನ ಆರಾಧನೆ ಮಾಡಿ. 16 ಸೋಮವಾರದಂದು ಉಪವಾಸ ಕೈಗೊಂಡು. ಸೋಮವಾರದಂದು ಶಿವಲಿಂಗಕ್ಕೆ ಜೇನುತುಪ್ಪದ ಅಭಿಷೇಕ ಮಾಡಿ. ಶೀಘ್ರದಲ್ಲೇ ನಿಮ್ಮ ಆಸೆ ಈಡೇರುತ್ತದೆ.

>> ಜಾತಕದಲ್ಲಿನ ಗ್ರಹದೋಷಗಳು ಒಂದು ವೇಳೆ ಮದುವೆಯನ್ನು ವಿಳಂಬ ಮಾಡುತ್ತಿದ್ದರೆ, ಶ್ರೀವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಆರಾಧಿಸಿ. ಶುಕ್ಲ ಪಕ್ಷದ ಗುರುವಾರದಂದು, ಹರಳುಗಳ ಮಾಲೆ ಹಿಡಿದು ಓಂ ಲಕ್ಷ್ಮೀ ನಾರಾಯಣ ನಮಃ ಎಂಬ ಮಂತ್ರವನ್ನು ಪಠಿಸಿ. ನಂತರ 3 ತಿಂಗಳ ಕಾಲ ಪ್ರತಿ ಗುರುವಾರ ದೇವಸ್ಥಾನದಲ್ಲಿ ಹಳದಿ ಬಣ್ಣದ ಸಿಹಿತಿಂಡಿಗಳನ್ನು ಅರ್ಪಿಸಿ.

>> ಗುರುವಾರದಂದು ಹಳದಿ ಮತ್ತು ಶುಕ್ರವಾರದಂದು ಬಿಳಿ ಬಟ್ಟೆಗಳನ್ನು ಧರಿಸುವುದರಿಂದ, ಜಾತಕದಲ್ಲಿ ಗುರು ಮತ್ತು ಶುಕ್ರರ ಬಲ ಹೆಚ್ಚಾಗುತ್ತದೆ ಮತ್ತು ಶೀಘ್ರದಲ್ಲೇ ವಿವಾಹ ನೆರವೇರುತ್ತದೆ.

>> ಮದುವೆಯಲ್ಲಿ ಅಡೆತಡೆಗಳಿದ್ದರೆ, ಶನಿವಾರ ಮತ್ತು ಅಮಾವಾಸ್ಯೆಯಂದು ಪ್ರೇಮಿ ಜೋಡಿಗಳು ಭೇಟಿಯಾಗಬಾರದು. ಶುಕ್ರವಾರ ಮತ್ತು ಹುಣ್ಣಿಮೆಯ ದಿನದಂದು ಒಟ್ಟಿಗೆ ಸಮಯ ಕಳೆಯುವುದು ಉತ್ತಮ. ಇದರಿಂದ ಪ್ರೇಮಿ ಜೋಡಿಯ ನಡುವೆ ಪ್ರೀತಿ, ವಿಶ್ವಾಸ ಹೆಚ್ಚುತ್ತದೆ.

ಇದನ್ನೂ ಓದಿ-Money Plant Vastu Tips: ಮನಿ ಪ್ಲಾಂಟ್ ನೆಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿಯ ಮಳೆ

>> ರಾಧಾ ಕೃಷ್ಣರ ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ಹೂವಿನ ಹಾರಗಳು, ಸಕ್ಕರೆ ಮಿಠಾಯಿಗಳನ್ನು ಅರ್ಪಿಸಿ ಮತ್ತು ನಿಮ್ಮ ಜೀವನದಲ್ಲಿ ಪ್ರೀತಿ ಮತ್ತು ಒಳ್ಳೆಯ ಬಾಳಸಂಗಾತಿಯನ್ನು ತರುವಂತೆ ಪ್ರಾರ್ಥಿಸಿ.

ಇದನ್ನೂ ಓದಿ-Astro tips for money : ಸಿಕ್ಕಿಬಿದ್ದ ನಿಮ್ಮ ಹಣ ಚಿಟಿಕೆಯಲ್ಲಿ ಹಿಂತಿರುಗುತ್ತದೆ, ಅದಕ್ಕೆ ಈ ಕೆಲಸ ಮಾಡಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News