ನವದೆಹಲಿ: ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಅಜೇಯ 175 ರನ್ ಗಳನ್ನು ಗಳಿಸುವ ಮೂಲಕ ಈಗ ಭಾರತದ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಅವರ 35 ವರ್ಷಗಳ ಕ್ರಿಕೆಟ್ ದಾಖಲೆಯನ್ನು ಅಳಿಸಿಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಈ ಹಿಂದೆ ಕಪಿಲ್ ದೇವ್ ಅವರು ಡಿಸೆಂಬರ್ 1986 ರಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 163 ರನ್ ಗಳನ್ನು ಗಳಿಸಿರುವುದು ಇದುವರೆಗಿನ ದಾಖಲೆಯಾಗಿ ಉಳಿದಿತ್ತು. ಈಗ ತಮ್ಮ ಕ್ಲಾಸ್ ಬ್ಯಾಟಿಂಗ್ ನಿಂದ ರವೀಂದ್ರ ಜಡೇಜಾ (Ravindra jadeja) ಅವರು ತಮ್ಮ ಕ್ಲಾಸ್ ಬ್ಯಾಟಿಂಗ್ ನಿಂದಾಗಿ ಈಗ ನೂತನ ದಾಖಲೆಯನ್ನು ನಿರ್ಮಿಸಿದ್ದಾರೆ.


Gadag: ಗಂಡ-ಹೆಂಡಿರ ಜಗಳದಲ್ಲಿ ಗ್ರಾಮದ ಮುಖಂಡ ಬಲಿ..!


ಇದೇ ವೇಳೆ ಅವರು ಏಳನೇ ಕ್ರಮಾಂಕದಲ್ಲಿ 150 ಕ್ಕೂ ಅಧಿಕ ರನ್ ಗಳಿಸಿದ ಮೂರನೇ ಆಟಗಾರ ಎನ್ನುವ ಕೀರ್ತಿಗೂ ಕೂಡ ಅವರು ಪಾತ್ರ ರಾಗಿದ್ದಾರೆ, ಇದಕ್ಕೂ ಮೊದಲು ಕಪಿಲ್ ದೇವ್ ಹೊರತು ಪಡಿಸಿ ರಿಶಬ್ ಪಂತ್ ಈ ದಾಖಲೆಯನ್ನು ನಿರ್ಮಿಸಿದ್ದರು, ಅವರು 2019 ರಲ್ಲಿ ಸಿಡ್ನಿ ವಿರುದ್ಧ 159 ರನ್ ಗಳನ್ನು ಗಳಿಸಿದ್ದರು.


Ind vs SL : ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ


ಈಗ ಜಡೇಜಾ ಅವರ ಭರ್ಜರಿ ಶತಕದ ನೆರವಿನಿಂದಾಗಿ ಭಾರತ ತಂಡವು (Team India) ಎಂಟು ವಿಕೆಟ್ ಗಳ ನಷ್ಟಕ್ಕೆ 574 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿತು.ಜಡೇಜಾ ತಮ್ಮ ಭರ್ಜರಿ ಇನಿಂಗ್ಸ್ ನಲ್ಲಿ ಮೂರು ಭರ್ಜರಿ ಸಿಕ್ಸರ್ ಹಾಗೂ 17 ಬೌಂಡರಿಗಳು ಬಾರಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.