Gadag: ಗಂಡ-ಹೆಂಡಿರ ಜಗಳದಲ್ಲಿ ಗ್ರಾಮದ ಮುಖಂಡ ಬಲಿ..!

ಗ್ರಾಮದ ಮುಖಂಡನಿಗೆ ಚಾಕು ಇರಿದು ಎಸ್ಕೇಪ್ ಆಗಿದ್ದ ಆರೋಪಿ ವಿಷ್ಣು ನಾಯಕ್ ಬಳಿಕ ತಾನೇ ಪೊಲೀಸ್ ಠಾಣೆಗೆ ಆಗಮಿಸಿ ಖಾಕಿಪಡೆಗೆ ಸರೆಂಡರ್ ಆಗಿದ್ದಾನೆ.

Written by - Zee Kannada News Desk | Last Updated : Mar 5, 2022, 02:53 PM IST
  • ಗಂಡ-ಹೆಂಡತಿ ಜಗಳದಲ್ಲಿ ಎಂಟ್ರಿಯಾಗಿದ್ದ ಗ್ರಾಮದ ಮುಖಂಡನ ಹತ್ಯೆ
  • ರಾಜಿ ಸಂದಾನ ಮಾಡಲು ಹೋಗಿ ಬಲಿಯಾದ ಗ್ರಾಮದ ಮುಖಂಡ
  • ಕೊಲೆ ಮಾಡಿದ ಬಳಿಕ ಪೊಲೀಸ್ ಠಾಣೆಗೆ ಬಂದು ಸರೆಂಡರ್ ಆದ ಆರೋಪಿ
Gadag: ಗಂಡ-ಹೆಂಡಿರ ಜಗಳದಲ್ಲಿ ಗ್ರಾಮದ ಮುಖಂಡ ಬಲಿ..! title=
ಗಂಡ-ಹೆಂಡಿರ ಜಗಳಕ್ಕೆ ಗ್ರಾಮದ ಮುಖಂಡ ಬಲಿ

ಗದಗ: ಗಂಡ-ಹೆಂಡತಿಯ ಜಗಳ(Husband and Wife Fight)ದಲ್ಲಿ ಗ್ರಾಮದ ಮುಖಂಡನೇ ಬಲಿಯಾಗಿರುವ ಘಟನೆ ಗದಗ ಜಿಲ್ಲೆ(Gadag District)ಯಲ್ಲಿ ನಡೆದಿದೆ. ರಾಜಿ ಪಂಚಾಯ್ತಿ  ಮಾಡಿಸಲಿಲ್ಲವೆಂದು ಕಿರಿಕ್ ಮಾಡಿ ಗ್ರಾಮದ ಮುಖಂಡನನ್ನೇ ಮರ್ಡರ್ ಮಾಡಲಾಗಿದೆ.

ಮುಂಡರಗಿ(Mundargi) ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸೋಮಲಪ್ಪ ನಾಯಕ(55) ಹತ್ಯೆಯಾದ ವ್ಯಕ್ತಿಯಾಗಿದ್ದಾನೆ. ಕೊಲೆ ಮಾಡಿದ ವಿಷ್ಣು ನಾಯಕ್(42) ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಕಾಲೇಜ್​ನಿಂದ ಡಿಬಾರ್ ಮಾಡಿದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

ಕಳೆದ ಮೂರ್ನಾಲ್ಕು ವರ್ಷದಿಂದ ವಿಷ್ಣು ನಾಯಕ್ ನಿಂದ ಪತ್ನಿ ಸುಮಿತ್ರಾ ದೂರವಾಗಿದ್ದರು. ನಾಲ್ಕು ಮಕ್ಕಳ ತುಂಬು ಸಂಸಾರ ಬಿಟ್ಟು ಹಾವೇರಿ(Haveri)ಯ ತವರು ಮನೆ ಸೇರಿದ್ದರು. ಈ ಬಗ್ಗೆ ರಾಜಿ ಪಂಚಾಯ್ತಿ ಮಾಡಿ ಗಂಡ-ಹೆಂಡತಿಯನ್ನು ಮತ್ತೆ ಸೇರಿಸಲು ಊರಿನ ಮುಖಂಡರು ಮುಂದಾಗಿದ್ದರು. ಆದರೆ ಊರ ಜನರ ಮಾತು ಕೇಳದೆ ಸುಮಿತ್ರಾ ಅವರು ತವರು ಮನೆಯಲ್ಲಿಯೇ ಉಳಿದುಕೊಂಡಿದ್ದರು.   

ಗ್ರಾಮದ ಮುಖಂಡರು ಸರಿಯಾಗಿ ರಾಜಿ ಪಂಚಾಯ್ತಿ ಮಾಡಿಲ್ಲವೆಂದು ವಿಷ್ಣು ನಾಯಕ್ ಸಿಟ್ಟು ಮಾಡಿಕೊಂಡಿದ್ದ. ನಿನ್ನೆ(ಮಾರ್ಚ್ 4) ಗ್ರಾಮದ ಉತ್ಸವದ ಬಗ್ಗೆ ಚರ್ಚಿಸಲು ಗ್ರಾಮದ ಮುಖಂಡರೆಲ್ಲಾ ಸಭೆ ಸೇರಿದ್ದರು. ಮೀಟಿಂಗ್(Village Meeting) ಮಧ್ಯೆ ವಿಷ್ಣು ನಾಯಕ್ ಏಕಾಏಕಿ ಗಲಾಟೆ ಎಬ್ಬಿಸಿದ್ದನಂತೆ.   

ಇದನ್ನೂ ಓದಿ: Shimoga: ಹಲ್ಲೆಗೆ ಯತ್ನಿಸಿದ ವ್ಯಕ್ತಿಗೆ ಬೆತ್ತದ ರುಚಿ ತೋರಿಸಿದ ಪೊಲೀಸರು, ವಿಡಿಯೋ ವೈರಲ್ ಆಗಲು ಕಾರಣ ಏನು?

ಸಭೆಯಲ್ಲಿ ಗಲಾಟೆ ಮಾಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದ ವಿಷ್ಣು ನಾಯಕ್, ಗ್ರಾಮದ ಹಿರಿಯ ಮುಖಂಡ(Village Leader) ಸೋಮಲಪ್ಪನಿಗೆ ಚಾಕು ಇರಿದು ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಚಾಕು ಇರಿತದಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸೋಮಪ್ಪನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾದರೂ ಮಾರ್ಗಮಧ್ಯೆಯೇ ಕೊನೆಯುಸಿರೆಳದಿದ್ದಾರೆ.

ಗ್ರಾಮದ ಮುಖಂಡನಿಗೆ ಚಾಕು ಇರಿದು ಎಸ್ಕೇಪ್ ಆಗಿದ್ದ ಆರೋಪಿ ವಿಷ್ಣು ನಾಯಕ್ ಬಳಿಕ ತಾನೇ ಪೊಲೀಸ್ ಠಾಣೆಗೆ ಆಗಮಿಸಿ ಖಾಕಿಪಡೆಗೆ ಸರೆಂಡರ್ ಆಗಿದ್ದಾನೆ. ಈ ಬಗ್ಗೆ ಮುಂಡರಗಿ ಪೊಲೀಸ್ ಠಾಣೆ(Mundargi Police Station)ಯಲ್ಲಿ ಪ್ರಕರಣ ದಾಖಲಾಗಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News