India vs England 2nd Test Live: ವೈಜಾಗ್ ಟೆಸ್ಟ್‌’ನಲ್ಲಿ ಭಾರತ ಭರ್ಜರಿ ಗೆಲುವು ಕಂಡಿದೆ. 600 ರನ್‌’ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೋಲನುಭವಿಸಿದೆ. ನಾಲ್ಕು ದಿನಗಳ ಅಂತರದಲ್ಲಿ ಭಾರತ ವೈಜಾಗ್ ಟೆಸ್ಟ್‌’ನಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿದೆ. ಈ ಪಂದ್ಯವನ್ನು 106 ರನ್‌ಗಳಿಂದ ಗೆಲ್ಲುವ ಮೂಲಕ ಭಾರತ ತಂಡ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಜಸ್ಟ್ 0.45 ಸೆಕೆಂಡ್’ನಲ್ಲಿ ಅಸಾಧ್ಯ ಕ್ಯಾಚ್ ಹಿಡಿದ ರೋಹಿತ್ ಶರ್ಮಾ: ಕ್ರಿಕೆಟ್ ಜಗತ್ತೇ ಅಚ್ಚರಿ!


ಇದರೊಂದಿಗೆ ಭಾರತ ಕೂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಕಂಡ ಸೋಲಿಗೆ ಸೇಡು ತೀರಿಸಿಕೊಂಡಿದೆ. ಹೈದರಾಬಾದ್‌’ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 28 ರನ್‌’ಗಳಿಂದ ಭಾರತವನ್ನು ಸೋಲಿಸಿತ್ತು. ಆದರೆ, ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ತನ್ನ ಆಕ್ರಮಣಕಾರಿ ಆಟ ಪ್ರದರ್ಶಿಸಿ ‘ಭರ್ಜರಿ ಗೆಲುವು ಕಂಡಿದೆ.


ಭಾರತ 600 ರನ್‌’ಗಳ ಗುರಿ ನೀಡಿದರೂ ನಾವು ಅದನ್ನು ಸಾಧಿಸಲು ಪ್ರಯತ್ನಿಸುತ್ತೇವೆ ಎಂದು ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಹೇಳಿದ್ದರು. ಪಂದ್ಯಕ್ಕೆ 180 ಓವರ್‌ಗಳು ಬಾಕಿ ಇದ್ದು, 60 ಅಥವಾ 70 ಓವರ್‌ಗಳಲ್ಲಿ ಗುರಿ ಬೆನ್ನಟ್ಟಲು ಪ್ರಯತ್ನಿಸುತ್ತೇವೆ ಎಂದಿದ್ದರು. ಆದರೆ ಇದೀಗ ಟೀಂ ಇಂಡಿಯಾದ ಬೌಲಿಂಗ್ ದಾಳಿಗೆ ಆಂಗ್ಲಪಡೆ ತತ್ತರಿಸಿದೆ.


ವೈಜಾಗ್ ಟೆಸ್ಟ್’ನಲ್ಲಿ ಭಾರತ ತಂಡ ಇಂಗ್ಲೆಂಡ್’ಗೆ ಗೆಲುವಿಗೆ 399 ರನ್ಗಳ ಟಾರ್ಗೆಟ್ ನೀಡಿತ್ತು. ಇಲ್ಲಿಯವರೆಗೆ, ಭಾರತದಲ್ಲಿ ನಾಲ್ಕನೇ ಇನ್ನಿಂಗ್ಸ್‌’ನಲ್ಲಿ ಇಷ್ಟು ದೊಡ್ಡ ಸ್ಕೋರ್ ಬೆನ್ನಟ್ಟಿರಲಿಲ್ಲ. 399 ರನ್‌’ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 292 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯವನ್ನು ಭಾರತ 106 ರನ್‌’ಗಳಿಂದ ಗೆದ್ದುಕೊಂಡಿತು. ಇದಕ್ಕೂ ಮುನ್ನ 143 ರನ್’ಗಳ ಮಹತ್ವದ ಮುನ್ನಡೆಯೊಂದಿಗೆ ಬ್ಯಾಟಿಂಗ್ ನಡೆಸಿದ ಭಾರತದ ಎರಡನೇ ಇನ್ನಿಂಗ್ಸ್ 255 ರನ್’ಗಳಿಗೆ ಅಂತ್ಯಗೊಂಡಿತು. ಶುಭಮನ್ ಗಿಲ್ ಅದ್ಭುತ ಬ್ಯಾಟಿಂಗ್ ಮಾಡಿ ಎರಡನೇ ಇನ್ನಿಂಗ್ಸ್‌ನಲ್ಲಿ 104 ರನ್ ಗಳಿಸಿದರು. ಇಂಗ್ಲೆಂಡ್ ನ ಮೊದಲ ಇನಿಂಗ್ಸ್ 55.5 ಓವರ್ ಗಳಲ್ಲಿ 253 ರನ್ ಗಳಿಗೆ ಸೀಮಿತವಾಯಿತು.


ಇದನ್ನೂ ಓದಿ: ಸ್ಪಿನ್ ಮಾಂತ್ರಿಕ ಅಶ್ವಿನ್ ಮೋಡಿಗೆ ವಿಶ್ವದಾಖಲೆ ಸೃಷ್ಟಿ: ಭಾಗವತ್ ಚಂದ್ರಶೇಖರ್ ದಾಖಲೆಯೂ ಬ್ರೇಕ್


ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್‌’ನಲ್ಲಿ 396 ರನ್ ಗಳಿಸಿತ್ತು. ಭಾರತದ ಪರ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ 209 ರನ್‌’ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಯಶಸ್ವಿ ಜೈಸ್ವಾಲ್ 290 ಎಸೆತಗಳ ಇನ್ನಿಂಗ್ಸ್‌’ನಲ್ಲಿ ಟೆಸ್ಟ್ ಕ್ರಿಕೆಟ್‌’ನಲ್ಲಿ ತಮ್ಮ ಮೊದಲ ದ್ವಿಶತಕದಲ್ಲಿ 19 ಬೌಂಡರಿ ಮತ್ತು ಏಳು ಸಿಕ್ಸರ್‌’ಗಳನ್ನು ಬಾರಿಸಿದರು. ಇಂಗ್ಲೆಂಡ್ ಪರ ಅನುಭವಿ ವೇಗಿಗಳಾದ ಜೇಮ್ಸ್ ಆಂಡರ್ಸನ್, ಶೋಯೆಬ್ ಬಶೀರ್ ಮತ್ತು ರೆಹಾನ್ ಅಹ್ಮದ್ ತಲಾ 3 ವಿಕೆಟ್ ಪಡೆದರು. ಇದಲ್ಲದೇ ಟಾಮ್ ಹಾರ್ಟ್ಲಿ ಒಂದು ವಿಕೆಟ್ ಪಡೆದರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ