Saina Nehwal Corona Positive - ಬ್ಯಾಂಕಾಕ್: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಕರೋನಾ ವೈರಸ್ ಸಾಂಕ್ರಾಮಿಕದಿಂದಾಗಿ, ಅಂತರರಾಷ್ಟ್ರೀಯ ಕ್ಯಾಲೆಂಡರ್ ದೀರ್ಘಕಾಲದವರೆಗೆ ಪ್ರಭಾವಕ್ಕೆ ಒಳಗಾಗಿತ್ತು ಮತ್ತು ಇದೀಗ ಸೈನಾ ಯೋನೆಕ್ಸ್ ಥೈಲ್ಯಾಂಡ್ ಓಪನ್ ಸೂಪರ್ 1000 ಪಂದ್ಯಾವಳಿಯಲ್ಲಿ ಭಾಗವಹಿಸಬೇಕಿತ್ತು. ಪಂದ್ಯಾವಳಿ ಜನವರಿ 12 ರಿಂದ 17 ರವರೆಗೆ ನಡೆಯಲು ನಿರ್ಧರಿಸಲಾಗಿದೆ ಆದರೆ, ಈಗ ಸೈನಾ ಆಡುವುದು ಬಹುತೇಕ ಕಠಿಣ ಎನ್ನಲಾಗುತ್ತಿದೆ.


Saina Nehwal) ಕೋವಿಡ್ -19 ಪ್ರೋಟೋಕಾಲ್ ಅಡಿಯಲ್ಲಿ ಬಿಡಬ್ಲ್ಯೂಎಫ್ ವಿಧಿಸಿರುವ ನಿರ್ಬಂಧಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹಲವಾರು ಟ್ವೀಟ್‌ಗಳನ್ನು ಮಾಡಿದ್ದರು. "ತನಿಖೆಯಲ್ಲಿ ಎಲ್ಲರೂ ನಕಾರಾತ್ಮಕವಾಗಿದ್ದರೂ ವೈದ್ಯರು ಮತ್ತು ತರಬೇತುದಾರರು ನಮ್ಮನ್ನು ಭೇಟಿಯಾಗಲು ಸಾಧ್ಯವಿಲ್ಲವೇ?" ಎಂದು ಸೈನಾ ಟ್ವೀಟ್ ಮಾಡಿದ್ದಾರೆ. ನಾವು ನಾಲ್ಕು ವಾರಗಳವರೆಗೆ ನಾವು ನಮ್ಮ ಫಿಟ್ನೆಸ್ ಹೀಗೆ ಕಾಯ್ದುಕೊಳ್ಳಬೇಕು? ನಾವು ಉತ್ತಮ ಸ್ಥಿತಿಯಲ್ಲಿ ಪಂದ್ಯಾವಳಿಯನ್ನು ಆಡಲು ಬಯಸುತ್ತೇವೆ. ದಯವಿಟ್ಟು ಇದನ್ನು ಪರಿಹರಿಸಿ. " ಎಂದು ಸೈನಾ ಟ್ವೀಟ್ ಮಾಡಿದ್ದರು.


COMMERCIAL BREAK
SCROLL TO CONTINUE READING

ಥೈಲ್ಯಾಂಡ್ ನಲ್ಲಿ ಭಾರತೀಯ ತಂಡ
BWF ವರ್ಲ್ಡ್ ಟೂರ್ ಫೈನಲ್‌ನ ಎರಡು ಸೂಪರ್ 1000 ಸ್ಪರ್ಧೆಗಳಲ್ಲಿ ಭಾಗವಹಿಸಲು ಇಡೀ ಭಾರತೀಯ ತಂದ ಥೈಲ್ಯಾಂಡ್ ರಾಜಧಾನಿಯಲ್ಲಿದೆ. ಈ ಕುರಿತು ಮತ್ತೊಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದ ಸೈನಾ "ನಮ್ಮನ್ನು ವಾರ್ಮ್ ಅಪ್ / ಕೂಲ್ ಡೌನ್ / ಸ್ಟ್ರೆಚಿಂಗ್ ಮಾಡಲು ಸಮಯವನ್ನು ನೀಡಲಾಗುತ್ತಿಲ್ಲ.  ನಾವು ವಿಶ್ವದ ಅತ್ಯುತ್ತಮ ಆಟಗಾರರ ನಡುವಿನ ಸ್ಪರ್ಧೆಯ ಬಗ್ಗೆ  ಇಲ್ಲಿ ಮಾತನಾಡುತ್ತಿದ್ದೇವೆ. " ನಾವು ನಮ್ಮ ಫಿಸಿಯೋ  ಹಾಗೂ ತರಬೇತುದಾರರನ್ನು ಇಲ್ಲಿಗೆ ಕರೆ ತರಲು ಸಾಕಷ್ಟು ಖರ್ಚು ಮಾಡಿದ್ದೇವೆ. ಅವರು ನಮಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದಾಗಿದ್ದರೆ ಅದನ್ನು ಮೊದಲೇ ಏಕೆ ಸ್ಪಷ್ಟಪಡಿಸಲಾಗಿಲ್ಲ?" ಎಂದು ಸೈನಾ ಪ್ರಶ್ನಿಸಿದ್ದಾರೆ.


ಇದನ್ನು ಓದಿ-ರಾಹುಲ್ ದ್ರಾವಿಡ್, ಸೈನಾ ಮತ್ತು ಪ್ರಕಾಶ್ ಪಡುಕೋಣೆಗೆ ಸೇರಿದಂತೆ ಹಲವರಿಗೆ ಕೋಟಿ-ಕೋಟಿ ವಂಚಿಸಿದೆ ಈ ಕಂಪನಿ


BJP ಸೇರಿದ ಖ್ಯಾತ ಬ್ಯಾಡ್ಮಿಂಟನ್ ತಾರೆ


ಹೈದ್ರಾಬಾದ್ ಪೋಲೀಸರ ಕಾರ್ಯಾಚರಣೆಗೆ ಸೈನಾ ನೆಹ್ವಾಲ್ ಸೆಲ್ಯೂಟ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.