Ambati Rayudu Retirement: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023 ರ ಅಂತಿಮ ಪಂದ್ಯವು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಜೂನ್ 7 ರಿಂದ 11 ರವರೆಗೆ ನಡೆಯಲಿದೆ. ಈ ದೊಡ್ಡ ಪಂದ್ಯ ಲಂಡನ್‌ನ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ತಂಡದ ಹಲವು ಆಟಗಾರರು ಇಂಗ್ಲೆಂಡ್ ತಲುಪಿದ್ದಾರೆ. ಇದೇ ವೇಳೆ ಭಾರತ ತಂಡದಲ್ಲಿ ಆಡುತ್ತಿದ್ದ ಸ್ಪೋಟಕ ಬ್ಯಾಟ್ಸ್ ಮನ್ ತನ್ನ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಖುದ್ದು ಅವರೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಆಟಗಾರ ನಿವೃತ್ತಿ ಘೋಷಿಸಿದ್ದಾರೆ
ಟೀಂ ಇಂಡಿಯಾ ಪರ ಏಕದಿನ ಹಾಗೂ ಟಿ20 ಪಂದ್ಯಗಳನ್ನಾಡಿರುವ ಅಂಬಾಟಿ  ರಾಯುಡು ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಸ್ವತಃ ರಾಯುಡು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ನಾನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಘೋಷಿಸಲು ಬಯಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ. ನನ್ನ ಬಾಲ್ಯದಲ್ಲಿ ನಾನು ಮೊದಲು ಕ್ರಿಕೆಟ್ ಬ್ಯಾಟ್ ಹಿಡಿದಾಗ, ನಾನು ಮನೆಯಲ್ಲಿ ಟೆನಿಸ್ ಬಾಲ್‌ನೊಂದಿಗೆ ಆಡುತ್ತಿದ್ದೆ. ಆ ಸಮಯದಲ್ಲಿ, ನನ್ನ ಈ ಅದ್ಭುತ ಪ್ರಯಾಣವನ್ನು ನಾನು ಊಹಿಸಿರಲಿಲ್ಲ, ಆದರೆ ನಾನು ನನ್ನ ದೇಶವನ್ನು 15 ವರ್ಷದೊಳಗಿನಿಂದ ರಾಷ್ಟ್ರೀಯ ತಂಡಕ್ಕೆ ಪ್ರತಿನಿಧಿಸಿದ್ದೇನೆ ಎಂಬುದು ನನಗೆ ತುಂಬಾ ಹೆಮ್ಮೆಯ ವಿಷಯವಾಗಿತ್ತು ಎಂದು ಬರೆದುಕೊಂಡಿದ್ದಾರೆ.


Rajasthan: ಸಚಿನ್ ಪೈಲಟ್ ಗೆ ಸಿಗಲಿದೆಯಾ ದೊಡ್ಡ ಜವಾಬ್ದಾರಿ? 4 ಗಂಟೆಗಳ ಕಾಲ ನಡೆದ ಮೀಟಿಂಗ್ ನಲ್ಲಿ ನಡೆದಿದ್ದೇನು?


ಎರಡು ದಿನಗಳ ಹಿಂದೆ ಐಪಿಎಲ್ ನಿಂದ ನಿವೃತ್ತಿ ಘೋಷಿಸಿದ್ದರು
ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಅಂಬಟಿ ರಾಯುಡು ಅವರು ಮೇ 28 ರಂದು ಅಂತಿಮ ಪಂದ್ಯಕ್ಕೂ ಮುನ್ನ ಐಪಿಎಲ್‌ನಿಂದ ನಿವೃತ್ತಿ ಘೋಷಿಸಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಈ ಕುರಿತು ಟ್ವೀಟ್ ಮಾಡಿದ್ದ ರಾಯುದು, 'CSK ಮತ್ತು ಗುಜರಾತ್ ಎರಡೂ ತಂಡಗಳು ಅತ್ಯುತ್ತಮ ತಂಡಗಳಾಗಿವೆ, 204 ಪಂದ್ಯಗಳು, 14 ಸೀಸನ್‌ಗಳು, 11 ಪ್ಲೇಆಫ್‌ಗಳು, 8 ಫೈನಲ್‌ಗಳು, 5 ಟ್ರೋಫಿಗಳು. ಆರನೇ ಟ್ರೋಫಿ ಇಂದು ರಾತ್ರಿ ಬರುವ ನಿರೀಕ್ಷೆ ಇದೆ. ಇದು ಸಾಕಷ್ಟು ದೀರ್ಘ ಸಮಯದ ಪ್ರಯಾಣವಾಗಿದೆ. ಇಂದು ರಾತ್ರಿ ನಡೆಯುವ ಫೈನಲ್ ಐಪಿಎಲ್‌ನಲ್ಲಿ ನನ್ನ ಕೊನೆಯ ಪಂದ್ಯ ಎಂದು ನಿರ್ಧರಿಸಿದ್ದೇನೆ. ಈ ದೊಡ್ಡ ಪಂದ್ಯಾವಳಿಯಲ್ಲಿ ನಾನು ನಿಜವಾಗಿಯೂ ಆನಂದಿಸಿದ್ದೇನೆ. ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದರು.


ಇದನ್ನೂ ಓದಿ-Banking Frauds: ಬ್ಯಾಂಕ್ ಗ್ರಾಹಕರಿಗೆ ಶಾಕ್ ನೀಡಿದ ಆರ್ಬಿಐ, ಗ್ರಾಹಕರು ಏನ್ ಮಾಡ್ಬೇಕು?


ಟೀಂ ಇಂಡಿಯಾ ಪರ ODI ಮತ್ತು T20 ಆಡಿದ್ದಾರೆ
ಅಂಬಾಟಿ ರಾಯುಡು ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಕುರಿತು ಹೇಳುವುದಾದರೆ, ಅವರು ಭಾರತೀಯ ಕ್ರಿಕೆಟ್ ತಂಡದ ಪರ ಆದಿ 55 ODIಗಳಲ್ಲಿ 47.06 ಸರಾಸರಿ ಮತ್ತು 79.05 ಸ್ಟ್ರೈಕ್ ರೇಟ್‌ನೊಂದಿಗೆ 1694 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಬ್ಯಾಟ್‌ನಿಂದ 3 ಶತಕ ಹಾಗೂ 10 ಅರ್ಧ ಶತಕ ಸಿಡಿಸಿದ್ದಾರೆ. ಅವರು ಗಳಿಸಿದ ಗರಿಷ್ಠ ಮೊತ್ತ 124 ರನ್. ಇದೇ ವೇಳೆ ಅವರು ಟಿ 20 ನಲ್ಲಿ 7 ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆದುಕೊಂಡಿದ್ದರು, ಅದರಲ್ಲಿ ಅವರು 61 ರನ್ ಗಳಿಸಿದ್ದಾರೆ. 2010 ರಲ್ಲಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ ಅಂಬಟಿ ರಾಯುಡು ಅವರು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದರು. ರಾಯುಡು 2018 ರಿಂದ ಸಿಎಸ್‌ಕೆ ಪರ ಆಡುತ್ತಿದ್ದರು. ಅಂಬಟಿ ರಾಯುಡು ಐಪಿಎಲ್‌ನಲ್ಲಿ ಇದುವರೆಗೆ 203 ಪಂದ್ಯಗಳಲ್ಲಿ 28.29 ಸರಾಸರಿಯಲ್ಲಿ 4329 ರನ್ ಗಳಿಸಿದ್ದಾರೆ. ಇದರಲ್ಲಿ 22 ಅರ್ಧಶತಕ ಹಾಗೂ 1 ಶತಕ ಕೂಡ ಶಾಮೀಲಾಗಿವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.