ಬೆಂಗಳೂರು:  Abhimanyu Mithun Retirement:  ಭಾರತೀಯ ಕ್ರಿಕೆಟ್ ತಂಡದ ಪರ ಆಡಿದ್ದ ಕರ್ನಾಟಕದ ವೇಗದ ಬೌಲರ್ ಅಭಿಮನ್ಯು ಮಿಥುನ್ ಇದ್ದಕ್ಕಿದ್ದಂತೆ ಪ್ರಥಮ ದರ್ಜೆ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಅಭಿಮನ್ಯು ಮಿಥುನ್ 2010 ರಲ್ಲಿ ಭಾರತ ತಂಡಕ್ಕೆ ಟೆಸ್ಟ್‌ಗೆ ಪದಾರ್ಪಣೆ ಮಾಡಿದರು. ಭಾರತೀಯ ಕ್ರಿಕೆಟ್ ತಂಡದಲ್ಲಿ ಅವರ ವೃತ್ತಿಜೀವನ ಅಲ್ಪಾವಧಿಯದ್ದಾಗಿದ್ದರೂ, ಅವರು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ದೀರ್ಘಕಾಲ ಆಡಿದರು. 


COMMERCIAL BREAK
SCROLL TO CONTINUE READING

ಭಾರತೀಯ ರಾಷ್ಟ್ರೀಯ ತಂಡದೊಂದಿಗೆ ಕೇವಲ 9 ಪಂದ್ಯಗಳನ್ನು ಆಡಿರುವ ಅಭಿಮನ್ಯು ಮಿಥುನ್:
ಅಭಿಮನ್ಯು ಮಿಥುನ್ (Abhimanyu Mithun) ಭಾರತದ ಪರ 4 ಪಂದ್ಯಗಳನ್ನು ಆಡಿದ್ದು ಅದರಲ್ಲಿ 9 ವಿಕೆಟ್ ಪಡೆದಿದ್ದಾರೆ. ಅವರು 5 ಏಕದಿನ ಪಂದ್ಯಗಳಲ್ಲಿ 3 ವಿಕೆಟ್ ಪಡೆದರು. ಮಿಥುನ್ ಫಸ್ಟ್ ಕ್ಲಾಸ್ ಮತ್ತು ಲಿಸ್ಟ್ ಎ ನಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 103 ಪಂದ್ಯಗಳನ್ನು ಆಡಿದ್ದಾರೆ, ಅದರಲ್ಲಿ ಅವರು 338 ವಿಕೆಟ್ಗಳನ್ನು ಪಡೆದರು. ಅವರು ಎ ಮತ್ತು ಟಿ 20 ಪಂದ್ಯಗಳಲ್ಲಿ 205 ವಿಕೆಟ್ ಪಡೆದಿದ್ದಾರೆ. 


ಇದನ್ನೂ ಓದಿ- T20 World Cup: Ind vs Pak ಪಂದ್ಯಕ್ಕಾಗಿ ಲಕ್ಷಗಳಲ್ಲಿ ಮಾರಾಟವಾಗುತ್ತಿದೆ ಟಿಕೆಟ್


ನನಗೆ ದೇಶವನ್ನು ಪ್ರತಿನಿಧಿಸುವುದೇ ದೊಡ್ಡ ಸಾಧನೆ :
ನಿವೃತ್ತಿಯ ನಂತರ ಮಾತನಾಡಿರುವ ಅಭಿಮನ್ಯು ಮಿಥುನ್ (Abhimanyu Mithun Retirement), ನಾನು ನನ್ನ ದೇಶಕ್ಕಾಗಿ ಆಡಿದ್ದೇನೆ, ಇದು ನನಗೆ ದೊಡ್ಡ ಸಾಧನೆಯಾಗಿದೆ. ಈ ಸಂದರ್ಭದಲ್ಲಿ ನನಗೆ ದೊರೆತ ಸಂತೋಷವನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ನನ್ನ ಭವಿಷ್ಯ ಮತ್ತು ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ನಾನು ನಿವೃತ್ತಿಯ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಅವರು ಹೇಳಿದರು. ಕರ್ನಾಟಕದಲ್ಲಿ ಸಾಕಷ್ಟು ಯುವ ವೇಗದ ಬೌಲರ್‌ಗಳಿದ್ದಾರೆ ಎಂದು ನಾನು ಹೇಳಲು ಬಯಸುತ್ತೇನೆ, ನಾನು ಸರಿಯಾದ ಸಮಯದಲ್ಲಿ ನಿವೃತ್ತಿಯಾಗದಿದ್ದರೆ, ಅವರು ಅವಕಾಶವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಯುವ ಪೀಳಿಗೆ ಬಗೆಗಿನ ತಮ್ಮ ಕಾಳಜಿ ಅನ್ನು ತಿಳಿಸಿದರು.    
 
ಇದನ್ನೂ ಓದಿ- Viral video : IPL ಪಂದ್ಯ ಮುಗಿಯುತ್ತಿದ್ದಂತೆಯೇ ಎಲ್ಲರೆದುರೇ ಯುವತಿಗೆ ಪ್ರೊಪೋಸ್ ಮಾಡಿದ ಧೋನಿ ತಂಡದ ಆಟಗಾರ


ಡಿಸ್ಕಸ್ ಎಸೆತಗಾರ ಕ್ರಿಕೆಟಿಗನಾದ :
ಅಭಿಮನ್ಯು ಮಿಥುನ್ ಮೊದಲು ಡಿಸ್ಕಸ್ ಥ್ರೋ ಆಡುತ್ತಿದ್ದರು. ಆದರೆ ಅದರ ನಂತರ ಅವರು ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅವರು ಕ್ರಿಕೆಟ್ ನಲ್ಲಿ ಇಟ್ಟ ಮೊದಲ ಹೆಜ್ಜೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯಗಳು. ಕೆಲವು ತಿಂಗಳುಗಳ ನಂತರ, ಅವರು ಶ್ರೀಲಂಕಾ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದರು. ಆದರೆ ಅವರು ದೀರ್ಘಕಾಲ ಆಡಲಿಲ್ಲ. ಐಪಿಎಲ್ ನಲ್ಲೂ ಮಿಥುನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪರ ಒಟ್ಟು 16 ಪಂದ್ಯಗಳನ್ನು ಆಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ