Viral video : IPL ಪಂದ್ಯ ಮುಗಿಯುತ್ತಿದ್ದಂತೆಯೇ ಎಲ್ಲರೆದುರೇ ಯುವತಿಗೆ ಪ್ರೊಪೋಸ್ ಮಾಡಿದ ಧೋನಿ ತಂಡದ ಆಟಗಾರ

ದೀಪಕ್ ಚಹರ್ (Deepak Chahar) ಪಂದ್ಯದ ನಂತರ ಯುವತಿಗೆ ಪ್ರೋಪೋಸ್ ಮಾಡಿದ್ದಾರೆ. ಕೈಯಲ್ಲಿ ಉಂಗುರ ಹಿಡಿದು, ಯುವತಿ ಮುಂದೆ ಮಂಡಿಯೂರಿ ಕುಳಿತು ತನ್ನ ಮನಸ್ಸಿನ ಮಾತನ್ನು ಹೇಳಿದ್ದಾರೆ. 

Written by - Ranjitha R K | Last Updated : Oct 7, 2021, 08:16 PM IST
  • ಯುವತಿಗೆ ಉಂಗುರ ನೀಡಿ ಪ್ರೊಪೋಸ್ ಮಾಡಿದ ದೀಪಕ್ ಚಹಾರ್
  • ಬಹಿರಂಗವಾಗಿ ಪ್ರೀತಿ ವ್ಯಕ್ತಪಡಿಸಿದ ಆಟಗಾರ
  • ವೈರಲ್ ಆಗುತ್ತಿದೆ ವಿಡಿಯೋ
Viral video : IPL ಪಂದ್ಯ ಮುಗಿಯುತ್ತಿದ್ದಂತೆಯೇ ಎಲ್ಲರೆದುರೇ ಯುವತಿಗೆ ಪ್ರೊಪೋಸ್ ಮಾಡಿದ ಧೋನಿ ತಂಡದ ಆಟಗಾರ title=
ಬಹಿರಂಗವಾಗಿ ಪ್ರೀತಿ ವ್ಯಕ್ತಪಡಿಸಿದ ಆಟಗಾರ (file photo)

ನವದೆಹಲಿ : ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವೆ ನಡೆದ ಐಪಿಎಲ್ ನ 53 ನೇ ಪಂದ್ಯದಲ್ಲಿ, ಪಂಜಾಬ್ ಸಿಎಸ್ ಕೆ ಅನ್ನು 6 ವಿಕೆಟ್ ಗಳಿಂದ ಸೋಲಿಸಿತು. ಆದರೆ, ಈ ಪಂದ್ಯದ ಬಳಿಕ ಎಲ್ಲರ ಗಮನ ಸೆಳೆದದ್ದು ಮಾತ್ರ ದೀಪಕ್ ಚಹಾರ್ (Deepak Chahar). ಈ ಪಂದ್ಯದ ನಂತರ ದೀಪಕ್ ಚಹಾರ್ ತನ್ನ ಗೆಳತಿಗೆ ಪ್ರೋಪೋಸ್ ಮಾಡಿದ್ದಾರೆ.  ದೀಪಕ್ ಚಹಾರ್ ಪ್ರೋಪೋಸ್ ಗೆ (DeepakChaharproposal) ಈ ಯುವತಿ ಕೂಡಾ ಒಪ್ಪಿಗೆ ಸೂಚಿಸಿದ್ದು ವಿಶೇಷವಾಗಿತ್ತು. 

ಪ್ರೋಪೋಸ್ ಮಾಡಿದ ದೀಪಕ್ ಚಹಾರ್ :  
ದೀಪಕ್ ಚಹರ್ (Deepak Chahar) ಪಂದ್ಯದ ನಂತರ ಯುವತಿಗೆ ಪ್ರೋಪೋಸ್ ಮಾಡಿದ್ದಾರೆ. ಕೈಯಲ್ಲಿ ಉಂಗುರ ಹಿಡಿದು, ಯುವತಿ ಮುಂದೆ ಮಂಡಿಯೂರಿ ಕುಳಿತು ತನ್ನ ಮನಸ್ಸಿನ ಮಾತನ್ನು ಹೇಳಿದ್ದಾರೆ. ಈ ಕ್ಷಣವನ್ನು ಇಡೀ ಜಗತ್ತು ಲೈವ್ ವೀಕ್ಷಿಸಿದೆ.  ಈ ಕ್ಷಣ ಬಹಳ ವಿಶೇಷವಾಗಿತ್ತು.  ಏಕೆಂದರೆ ಈ ಅಪರಿಚಿತ ಹುಡುಗಿ ಕೂಡಾ ದೀಪಕ್ ನ ಪ್ರೋಪೋಸಲ್ ಅನ್ನು  (Deepak Chahar proposal) ತಿರಸ್ಕರಿಸಲಿಲ್ಲ. ದೀಪಕ್ ಸಂಬಂಧದ ಸುದ್ದಿ ಈ ಹಿಂದೆ ಹಲವು ಬಾರಿ ಕೇಳಿ ಬಂದಿತ್ತು. ಆದರೆ ಈ ಹುಡುಗಿ ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ದೀಪಕ್ ಪ್ರೋಪೋಸ್ ಮಾಡಿದ ಹುಡುಗಿ ಕಪ್ಪು ಉಡುಪನ್ನು ಧರಿಸಿದ್ದಳು.   

ಇದನ್ನೂ ಓದಿ : Virat Kohli : ವಿಶ್ವದ ಈ 7 ದುಬಾರಿ ವಸ್ತುಗಳ ಮಾಲೀಕ ವಿರಾಟ್ ಕೊಹ್ಲಿ, ಇವುಗಳ ಬೆಲೆ ಕೇಳಿದ್ರೆ ದಂಗಾಗುತ್ತೀರಾ

 

ಸಾಮಾಜಿಕ ಮಾಧ್ಯಮದಲ್ಲಿ ಇದೇ ಸುದ್ದಿ
ದೀಪಕ್ ಚಹಾರ್ ಈ ಹುಡುಗಿಯನ್ನು ಸಾರ್ವಜನಿಕವಾಗಿ ಪ್ರೋಪೋಸ್ ಮಾಡಿದ ವೇಳೆ, ಅಲ್ಲಿ ನೆರೆದಿದ್ದ ಪ್ರತಿಯೊಬ್ಬರೂ  ದೀಪಕ್ ಗೆ ಬೆಂಬಲ ಸೂಚಿಸಿದರು. ಈಗ ಸಾಮಾಜಿಕ ಜಾಲತಾಣಗಳಲ್ಲಿಯೂ (Social media) ಇದೇ ರೀತಿಯ ಬೆಂಬಲ ಕಂಡುಬಂದಿದೆ. ಜನರು ದೀಪಕ್ ಚಹರ್ ಗೆ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ.  ಈ ವಿಡಿಯೋ (Video) ಇದೀಗ ವೈರಲ್ ಆಗುತ್ತಿದೆ. 
 
ಇದನ್ನೂ ಓದಿ ಧೋನಿಯ ಈ ನಿರ್ಧಾರದಿಂದಲೇ ಬಚಾವಾಗಿದ್ದರು ವಿರಾಟ್ ಕೊಹ್ಲಿ, ಇಲ್ಲವಾದರೆ ಮುಗಿದೇ ಹೋಗುತ್ತಿತ್ತು ಕೊಹ್ಲಿ career

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News