IPL 2024: ಮತ್ತೊಮ್ಮೆ ದೇಶದ ಹೊರಗೆ ಆಯೋಜನೆಯಾಗಲಿದೆಯಾ ಐಪಿಎಲ್? ಈ ದೇಶದಲ್ಲಿ ಎರಡನೇ ಹಂತದ ಪಂದ್ಯಗಳನ್ನು ನಡೆಸಲು ಬಿಸಿಸಿಐ ಸಿದ್ಧತೆ!
Indian Premier League 2024: ಇಂಡಿಯನ್ ಪ್ರೀಮಿಯರ್ ಲೀಗ್ ಭಾರತದಲ್ಲಿ ಹಬ್ಬಕ್ಕಿಂತ ಕಡಿಮೆಯಿಲ್ಲ. ಪ್ರತಿ ವರ್ಷ ಮಾರ್ಚ್ನಿಂದ ಇಡೀ ದೇಶವೇ ಈ ಅದ್ಭುತ T20 ಲೀಗ್ನ ಬಣ್ಣಗಳಲ್ಲಿ ಬಣ್ಣ ಪಡೆಯುತ್ತದೆ. ಈ ಬಾರಿಯ ಐಪಿಎಲ್ ಮಾರ್ಚ್ 22 ರಿಂದ ಭಾರತದಲ್ಲಿ ಮಾತ್ರ ಆರಂಭವಾಗಲಿದೆ. ಆದರೆ ಮಧ್ಯೆ ದುಬೈಗೆ ಶಿಫ್ಟ್ ಆಗುತ್ತಾ? (IPL 2024 News In Kannada)
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ಮಾರ್ಚ್ 22 ರಿಂದ ಆರಂಭವಾಗಲಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಸಿಸಿಐ ಪಂದ್ಯಾವಳಿಯ 21 ಪಂದ್ಯಗಳ ವೇಳಾಪಟ್ಟಿಯನ್ನು (IPL 2024 Schedule) ಬಿಡುಗಡೆ ಮಾಡಿದೆ. ಆದರೆ, ಇದೀಗ ಐಪಿಎಲ್ ಚುನಾವಣೆಯಿಂದಾಗಿ ದುಬೈ ಕೂಡ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿವೆ ಎಂಬ ಊಹಾಪೋಹಗಳು ನಿರ್ಮಾಣಗೊಂಡಿವೆ. ಬನ್ನಿ ಈ ಕುರಿತಾದ ಲೇಟೆಸ್ಟ್ ಅಪ್ಡೇಟ್ ಏನು ತಿಳಿದುಕೊಳ್ಳೋಣ. (IPL 2024 News In Kannada)
ಐಪಿಎಲ್ 2ನೇ ಹಂತ ದುಬೈನಲ್ಲಿ ನಡೆಯಲಿದೆಯೇ?
ಭಾರತದಲ್ಲಿ ಚುನಾವಣೆಗಳು ಮತ್ತು ಪಂದ್ಯಾವಳಿಯ ದಿನಾಂಕಗಳಲ್ಲಿ ಪರಸ್ಪರ ಘರ್ಷಣೆಯನ್ನು ತಪ್ಪಿಸಲು ಬಿಸಿಸಿಸಿ (bcci) ಐಪಿಎಲ್ 2024 ರ ದ್ವಿತಿಯಾರ್ಧವನ್ನು (ipl second phase) ದುಬೈನಲ್ಲಿ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕುರಿತು ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ 'ಕೇಂದ್ರ ಚುನಾವಣಾ ಆಯೋಗ ಇಂದು ಮದ್ಯಾಹ್ನ 3 ಗಂಟೆಗೆ ಚುನಾವಣಾ (Lok Sabha Elections 2024) ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧಯ್ತೆ ಇದ್ದು, ಇದಾದ ಬಳಿಕ ಐಪಿಎಲ್ ದ್ವಿತಿಯಾರ್ಧವನ್ನು ದುಬೈಗೆ ಸ್ಥಳಾಂತರಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಬಿಸಿಸಿಐ ನಿರ್ಧರಿಸಲಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಇದಕ್ಕಾಗಿ ಕೆಲ ಉನ್ನತ ಮಟ್ಟದ ಬಿಸಿಸಿಐ ಅಧಿಕಾರಿಗಳು ಈಗಾಗಲೇ ದುಬೈನಲ್ಲಿ ಬೀಡುಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ-ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅತ್ತಿಗೆ ಯಾರು ಗೊತ್ತಾ? ಪತ್ನಿ ನತಾಶಾಗಿಂತಲೂ ಸಖತ್ ಕ್ಯೂಟ್ ಈಕೆ!
ಮಾಧ್ಯಮ ವರದಿಗಳ ಪ್ರಕಾರ ಕೆಲ ಐಪಿಎಲ್ ತಂಡಗಳು ತಮ್ಮ ಆಟಗಾರರಿಗೆ ಪಾಸ್‌ಪೋರ್ಟ್ ನೀಡುವಂತೆ ಕೇಳಿಕೊಂಡಿವೆ. ಎನ್ನಲಾಗುತ್ತಿದೆ, 2014 ರಲ್ಲಿ ಸಾರ್ವತ್ರಿಕ ಚುನಾವಣೆಗಳ ಕಾರಣ ಐಪಿಎಲ್‌ನ ಮೊದಲ ಭಾಗವು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಅಂದರೆ ಯುಎಇಯಲ್ಲಿ ನಡೆದಿದ್ದವು. 21 ಪಂದ್ಯಗಳನ್ನು ಒಳಗೊಂಡ ಐಪಿಎಲ್‌ನ ಮೊದಲ ಭಾಗದ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಈ ವೇಳಾಪಟ್ಟಿಯ ಅಂತಿಮ ಪಂದ್ಯ ಲಖನೌ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಏಪ್ರಿಲ್ 7 ರಂದು ಲಖನೌನಲ್ಲಿ ನಡೆಯಲಿದೆ.
ಐಪಿಎಲ್‌ನ ಈ ಸೀಸನ್ ಮಾರ್ಚ್ 22 ರಂದು ಚೆನ್ನೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ipl 2024 first match) ನಡುವಿನ ಮುಖಾಮುಖಿಯೊಂದಿಗೆ ಆರಂಭವಾಗಲಿದೆ. 2021ರಲ್ಲಿ ಯುಎಇಯಲ್ಲಿ ಕೊನೆಯ ಬಾರಿ ಐಪಿಎಲ್ ನಡೆದಿತ್ತು. ಐಪಿಎಲ್ 2020ರ ಸಂಪೂರ್ಣ ಸೀಸನ್ ಕೂಡ ಯುಎಇಯಲ್ಲಿ ನಡೆದಿತ್ತು. ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ, ಐಪಿಎಲ್ ಅನ್ನು ಅಲ್ಲಿಗೆ ಸ್ಥಳಾಂತರಿಸಲಾಗಿತ್ತು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ