ನವದೆಹಲಿ: ಭಾರತದ U19 ವಿಶ್ವಕಪ್ ವಿಜೇತ ನಾಯಕ ಯಶ್ ಧುಲ್ 50 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ಗೆ  (Delhi Capitals) ಮಾರಾಟವಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL 2022 Mega Auction:ಅತ್ತ ತಂದೆಯಾದ ಖುಷಿ, ಇತ್ತ ಉತ್ತಮ ಮೊತ್ತಕ್ಕೆ CSK ಪಾಲಾದ ಶಿವಂ ದುಬೆ


ಭಾರತಕ್ಕೆ ಅಂಡರ್-19 ವಿಶ್ವಕಪ್ ಗೆದ್ದು ಕೊಟ್ಟ ನಾಯಕ ಯಶ್ ಧುಲ್ (Yash Dhull) ಪ್ರತಿಭಾನ್ವಿತ ಬ್ಯಾಟ್ಸ್‌ಮನ್. ಇವರು ತಂಡವನ್ನು ಐದನೇ ಬಾರಿಗೆ ವಿಶ್ವ ಚಾಂಪಿಯನ್‌ ಮಾಡಿದರು. ಸ್ವತಃ ಬ್ಯಾಟ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದರು. 


ಅವರ ಡಬಲ್ ಯಶಸ್ಸಿನ ಪರಿಣಾಮವು ಐಪಿಎಲ್ 2022 ರ ಹರಾಜಿನಲ್ಲಿ (IPL 2022 Auction) ಗೋಚರಿಸಿದೆ. ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 50 ಲಕ್ಷಕ್ಕೆ ಖರೀದಿಸಿದೆ. 


ಐಸಿಸಿ U19 ವಿಶ್ವಕಪ್‌ನಲ್ಲಿ ಹಲವು ನಿರ್ಣಾಯಕ ನಾಕ್‌ಗಳನ್ನು ಆಡಿದ ಮತ್ತೊಬ್ಬ ಕ್ರಿಕೆಟರ್ ರಾಜ್ ಬಾವಾ (Raj Bawa) ಅವರನ್ನು 2 ಕೋಟಿ ರೂ. ಗೆ  ಪಂಜಾಬ್ ಕಿಂಗ್ಸ್ (Punjab Kings) ಖರೀದಿಸಿತು. ಬಾವಾ ಪಂಜಾಬ್‌ನ ಚಂಡೀಗಢಕ್ಕೆ ಸೇರಿದ್ದು, ತವರು ರಾಜ್ಯಕ್ಕಾಗಿ ಆಡಲಿದ್ದಾರೆ.


ಯಶ್ ಧುಲ್ ಕೂಡ ದೆಹಲಿಗೆ ಸೇರಿದ್ದು, ಅವರನ್ನು ಅವರ ತವರು ತಂಡ ಖರೀದಿಸಿದೆ.DC ಈಗ ಇಬ್ಬರು U19 ವಿಶ್ವಕಪ್ ವಿಜೇತ ನಾಯಕರನ್ನು ಹೊಂದಿದ್ದಾರೆ. ಒಬ್ಬರು ಯಶ್ ಧುಲ್, ಇನ್ನೊಬ್ಬರು ಪೃಥ್ವಿ ಶಾ (Pruthvi Sha).


ಮತ್ತೊಬ್ಬ U19 ಸ್ಟಾರ್ ರಾಜವರ್ಧನ್ ಹಂಗರ್ಗೇಕರ್ ಅವರನ್ನು 2 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್‌ಗೆ (CSK) ಮಾರಾಟ ಮಾಡಲಾಯಿತು.  


ಇದನ್ನೂ ಓದಿ: IPL 2022 Mega Auction:ಭರ್ಜರಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್‌ ಪಾಲಾದ ಇಂಗ್ಲೆಂಡ್ ಆಲ್‌ರೌಂಡರ್


ಮತ್ತೊಬ್ಬ ಭಾರತೀಯ ಸ್ಪಿನ್ನರ್ ವಿಕ್ಕಿ ಓಟ್ಸ್ವಾಲ್ ಅನ್ ಸೋಲ್ಡ್ ಆಗಿದ್ದಾರೆ. ಆದರೆ ಹರಾಜಿನ ಕೊನೆಯ ಹಂತದಲ್ಲಿ ಅವರನ್ನು ಆಯ್ಕೆ ಮಾಡಬಹುದು ಎಂಬ ನಿರೀಕ್ಷೆಯಿದೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.