IPL 2022 Mega Auction:ಭರ್ಜರಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್‌ ಪಾಲಾದ ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್

IPL 2022 mega auction: ಎರಡನೇ ದಿನದ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ 11.50 ಕೋಟಿ ರೂ.ಗಳಿಗೆ ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅನ್ನು ಪಡೆದುಕೊಂಡಿತು.

Edited by - Zee Kannada News Desk | Last Updated : Feb 13, 2022, 04:10 PM IST
  • ಬೆಂಗಳೂರಿನಲ್ಲಿ ನಡೆಯುತ್ತಿರುವ IPL 2022 ಮೆಗಾ ಹರಾಜು
  • ಭರ್ಜರಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್‌ ಪಾಲಾದ ಇಂಗ್ಲೆಂಡ್ ಆಲ್‌ರೌಂಡರ್
  • ಮತ್ತು ರಾಜಸ್ಥಾನ್ ರಾಯಲ್ಸ್ ಮಾಜಿ ಆಲ್ ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್
IPL 2022 Mega Auction:ಭರ್ಜರಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್‌ ಪಾಲಾದ ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್   title=
ಲಿಯಾಮ್ ಲಿವಿಂಗ್‌ಸ್ಟೋನ್

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL 2022 mega auction) 2022 ರ ಮೆಗಾ ಹರಾಜಿನ 2 ನೇ ದಿನದಂದು ಇಂಗ್ಲೆಂಡ್ ಮತ್ತು ರಾಜಸ್ಥಾನ್ ರಾಯಲ್ಸ್ (RR) ಮಾಜಿ ಆಲ್ ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಪಂಜಾಬ್ ಕಿಂಗ್ಸ್ ಆಯ್ಕೆ ಮಾಡಿದೆಖರೀದಿಸಿದೆ.

ಲಿವಿಂಗ್‌ಸ್ಟೋನ್ ಆಲ್-ರೌಂಡರ್‌ಗಳ ಸೆಟ್ 2 ರಲ್ಲಿ ಮೊದಲ ಆಟಗಾರರಾಗಿದ್ದರು. ಇವರ ಖರೀದಿಗಾಗಿ ಪಂಜಾಬ್ ಕಿಂಗ್ಸ್ (Punjab Kings) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವೆ ಪೈಪೋಟಿ ನಡೆಯಿತು.

ಇದನ್ನೂ ಓದಿ: IPL 2022 Mega Auction:ಮತ್ತೆ ಕೋಲ್ಕತ್ತಾ ನೈಟ್ ರೈಡರ್ಸ್‌ ಸೇರಿಕೊಂಡ ಪ್ಯಾಟ್ ಕಮ್ಮಿನ್ಸ್

ಸನ್‌ರೈಸರ್ಸ್ ಹೈದರಾಬಾದ್ (SRH) ತಡವಾಗಿ ಬಿಡ್ ಮಾಡಿತು. ಆದರೆ ಪಂಜಾಬ್ ಕಿಂಗ್ಸ್ ಅಂತಿಮವಾಗಿ 11.50 ಕೋಟಿಗೆ ಲಿವಿಂಗ್‌ಸ್ಟೋನ್ (Liam Livingstone) ಅವರನ್ನು ಖರೀದಿಸಿತು.

ಏತನ್ಮಧ್ಯೆ, ಭಾರತದ ಬ್ಯಾಟರ್ ಮನ್ದೀಪ್ ಸಿಂಗ್ ಅವರನ್ನು ದೆಹಲಿ ಕ್ಯಾಪಿಟಲ್ಸ್ 1.1 ಕೋಟಿ ರೂ.ಗೆ ಖರೀದಿಸಿತು. 

ಆದರೆ ಭಾರತದ ಬ್ಯಾಟರ್  ಚೇತೇಶ್ವರ ಪೂಜಾರ (Cheteshwar Pujar), ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್, ಆಸ್ಟ್ರೇಲಿಯದ ನಾಯಕ ಆರನ್ ಫಿಂಚ್ ಮೊದಲ ಸುತ್ತಿನ ಬಿಡ್ಡಿಂಗ್‌ನಲ್ಲಿ ಮಾರಾಟವಾಗಲಿಲ್ಲ.  

ಇದನ್ನೂ ಓದಿ: IPL 2022 Auction:ಭರ್ಜರಿ ಮೊತ್ತ ಪಡೆದು RCB ಗೆ ಮರಳಿದ ಹರ್ಷಲ್ ಪಟೇಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News