Paris Olympics 2024 : 2024 ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ 117 ಸದಸ್ಯರ ಬಲಿಷ್ಠ ಭಾರತೀಯ ತಂಡವು ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. ಪ್ಯಾರಿಸ್‌ನಲ್ಲಿ ಭಾರತದ ಈ ಅಭಿಯಾನವು ಜುಲೈ 25 ರಂದು ಪ್ರಾರಂಭವಾಗುತ್ತದೆ, ಮೊದಲ ದಿನವೇ ಬಿಲ್ಲುಗಾರಿಕೆ ಸ್ಪರ್ಧೆ ಇರಲಿದೆ.. ವರ್ಷಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಶ್ವ ವೇದಿಕೆಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಭಾರತ ಆರ್ಚರಿಯಲ್ಲಿ ಒಲಿಂಪಿಕ್ ಪದಕವನ್ನು ಗೆದ್ದಿಲ್ಲ. ಈ ಬಾರಿ ಸ್ಪರ್ಧಿಗಳು ಗೆಲ್ಲುವ ಛಲ ಹೊಂದಿದ್ದಾರೆ..


COMMERCIAL BREAK
SCROLL TO CONTINUE READING

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಐತಿಹಾಸಿಕ ದಾಖಲೆ ತಂದುಕೊಟ್ಟವರು ನೀರಜ್ ಚೋಪ್ರಾ. ಈ ಬಾರಿಯೂ ಚಿನ್ನದ ಪದಕವನ್ನು ಉಳಿಸಿಕೊಳ್ಳುವ ಜೊತೆಗೆ, ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಎರಡನೇ ಪದಕವನ್ನು ಗಳಿಸುವ ಗುರಿಯನ್ನು ಕಿಶೋರ್ ಜೆನ್ನಾ ಸೇರಿದಂತೆ ಇತರ ಸ್ಪರ್ಧಿಗಳ ಮೇಲಿದೆ..


ಇದನ್ನೂ ಓದಿ:ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗದಿರಲು 'ಇದೇ' ಪ್ರಮುಖ ಕಾರಣ: ಆಶಿಶ್ ನೆಹ್ರಾ


ಭಾರತವು 70 ಪುರುಷ ಮತ್ತು 47 ಮಹಿಳಾ ಅಥ್ಲೀಟ್‌ಗಳು ಸೇರಿದಂತೆ 2024 ರ ಪ್ಯಾರಿಸ್ ಒಲಿಂಪಿಕ್ಸ್‌ಗೆ 117 ಸದಸ್ಯರ ಬಲಿಷ್ಠ ತಂಡವನ್ನು ಕಳುಹಿಸುತ್ತಿದೆ. ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಈಕ್ವೆಸ್ಟ್ರಿಯನ್, ಗಾಲ್ಫ್, ಹಾಕಿ, ಜೂಡೋ, ರೋಯಿಂಗ್, ಸೈಲಿಂಗ್, ಶೂಟಿಂಗ್, ಈಜು, ಟೇಬಲ್ ಟೆನ್ನಿಸ್, ಟೆನ್ನಿಸ್, ಕುಸ್ತಿ ಮತ್ತು ವೇಟ್‌ಲಿಫ್ಟಿಂಗ್ ಸೇರಿದಂತೆ ಒಟ್ಟು 16 ಕ್ರೀಡೆಗಳಲ್ಲಿ ಈ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.


ಟೋಕಿಯೊ 2020 ರ ನಂತರ ಈ ಒಲಿಂಪಿಕ್ ಕ್ರೀಡಾಕೂಟಕ್ಕೆ ಭಾರತ ಎರಡನೇ ಅತಿದೊಡ್ಡ ತಂಡವಾಗಿದೆ. 121 ಭಾರತೀಯ ಅಥ್ಲೀಟ್‌ಗಳು ಟೋಕಿಯೋ ಗೇಮ್ಸ್‌ನಲ್ಲಿ ಭಾಗವಹಿಸಿದ್ದರು. ವಿಶೇಷ ಅಂದ್ರೆ, ಪ್ರಸ್ತುತ ಭಾರತೀಯ ತಂಡದಲ್ಲಿ 72ಕ್ಕೂ ಅಧಿಕ ಅಥ್ಲೀಟ್‌ಗಳು ಪ್ಯಾರಿಸ್‌ನಲ್ಲಿ ತಮ್ಮ ಪ್ರಥಮ ಒಲಂಪಿಕ್ ಕ್ರಿಡಾಕೂಟಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.


ಇದನ್ನೂ ಓದಿ:ಜೀವನ ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದಿದ್ರಾ ಮೊಹಮ್ಮದ್‌ ಶಮಿ..? ʻ19ನೇ ಮಹಡಿಯʼ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ವೇಗಿಯ ಗೆಳೆಯ..!


117 ಸದಸ್ಯರ ತಂಡವು 5 ಐದು ಮಾಜಿ ಪದಕ ವಿಜೇತರನ್ನು ಒಳಗೊಂಡಿದೆ: ನೀರಜ್ ಚೋಪ್ರಾ, ಮೀರಾಬಾಯಿ ಚಾನು, ಪಿವಿ ಸಿಂಧು, ಲೋವ್ಲಿನಾ ಬೊರ್ಗೊಹೈನ್ ಮತ್ತು ಪುರುಷರ ಹಾಕಿ ತಂಡ. ನೀರಜ್ ಭಾರತದ ಏಕೈಕ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತರಾಗಿದ್ದಾರೆ.


ಪಾರುಲ್ ಚೌಧರಿ ಮತ್ತು ಮನು ಭಾಕರ್ ಅವರು ಪ್ಯಾರಿಸ್ 2024 ರಲ್ಲಿ ಒಂದಕ್ಕಿಂತ ಹೆಚ್ಚು ವೈಯಕ್ತಿಕ ಸ್ಪರ್ಧೆಗಳಲ್ಲಿ ಸ್ಪರ್ಧಿಸುವ ಏಕೈಕ ಭಾರತೀಯರಾಗಿದ್ದಾರೆ. ಪಾರುಲ್ ಮಹಿಳೆಯರ 5000 ಮೀಟರ್ ಓಟ ಮತ್ತು 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಮನು ಮಹಿಳೆಯರ 10 ಮೀ ಏರ್ ಪಿಸ್ತೂಲ್ ಮತ್ತು 25 ಮೀ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ..


ಇದನ್ನೂ ಓದಿ: ಅಸೂಯೆ ಇಲ್ಲ..ನಾಯಕತ್ವ ಕೈ ತಪ್ಪಿದ ಮೇಲೂ ಸ್ನೇಹದಲ್ಲಿ ಬಿರುಕಿಲ್ಲ..ಗೆಳಯನ್ನನ್ನು ಬಿಗಿದಪ್ಪಿ ಅಭಿನಂದಿಸಿದ ಹಾರ್ದಿಕ್‌ ಪಾಂಡ್ಯ..!


14 ವರ್ಷದ ಈಜುಗಾರ್ತಿ ಧಿನಿಧಿ ದೇಸಿಂಗು ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಅತ್ಯಂತ ಕಿರಿಯ ಅಥ್ಲೀಟ್ ಆಗಿದ್ದರೆ, 44 ವರ್ಷದ ಟೆನಿಸ್ ಪಟು ರೋಹನ್ ಬೋಪಣ್ಣ ಅವರು ಟೇಬಲ್ ಟೆನಿಸ್ ದಂತಕಥೆ ಶರತ್ ಕಮಲ್ (42) ನಂತರದ ಹಿರಿಯ ಆಟಗಾರರಾಗಿದ್ದಾರೆ. ಭಾರತೀಯ ತುಕಡಿಯ 140 ಸಹಾಯಕ ಸಿಬ್ಬಂದಿಯೂ ಸೇರಿದ್ದಾರೆ.


Paris Olympics 2024 Live Stream ಇಂಗ್ಲಿಷ್, ಹಿಂದಿ, ತಮಿಳು ಮತ್ತು ಕನ್ನಡ ಮತ್ತು ಭಾರತದಲ್ಲಿನ ಇತರ ಭಾಷೆಗಳಲ್ಲಿ JioCinema ಪ್ಲಾಟ್‌ಫಾರ್ಮ್‌ನಲ್ಲಿ ಉಚಿತ ಲೈವ್ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ.. ಅಲ್ಲಿ ನೀವು ನೋಡಬಹುದು.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.