ಜೀವನ ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದಿದ್ರಾ ಮೊಹಮ್ಮದ್‌ ಶಮಿ..? ʻ19ನೇ ಮಹಡಿಯʼ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ವೇಗಿಯ ಗೆಳೆಯ..!

Mohammed Shami Life Story: ಮೊಹಮ್ಮದ್ ಶಮಿ ಇಂದು ಕ್ರಿಕೆಟ್ ಜಗತ್ತಿನಲ್ಲಿ ಮಾಡಿರುವ ಹೆಸರು ಅವರ ಕಠಿಣ ಪರಿಶ್ರಮದಿಂದ. ಶಮಿ ಜೀವನವು ಸವಾಲುಗಳಿಂದ ಕೂಡಿತ್ತು.. ಅವರು ಕಳೆದ ಮೂರು ODI ವಿಶ್ವಕಪ್‌ಗಳಲ್ಲಿ ಭಾರತದ ಪ್ರಮುಖ ವಿಕೆಟ್ ಟೇಕರ್ ಆಗಿದ್ದರು.. 

1 /6

ಟೀಂ ಇಂಡಿಯಾ ಆಟಗಾರ ಶಮಿ ತನ್ನ ಪತ್ನಿ ಹಸೀನ್ ಜಹಾನ್‌ನಿಂದ ಬೇರ್ಪಟ್ಟ ಬಳಿಕ ಸಾಕಷ್ಟು ಆರೋಪಗಳನ್ನು ಹೊತ್ತುಕೊಳ್ಳಬೇಕಾಯಿತು.. ನಂತರ ಈ ಎಲ್ಲ ಸಮಸ್ಯೆಗಳಿಂದ ಹೊರಬಂದ ಮೇಲೂ ಶಮಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಅವರ ಸ್ನೇಹಿತ ಉಮೇಶ್ ಕುಮಾರ್ ಶುಭಂಕರ್ ಮಿಶ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಬಹಿರಂಗಪಡಿಸಿದ್ದರು...  

2 /6

 ಈ ಬಗ್ಗೆ ಮಾತನಾಡಿದ ಶಮಿ ಗೆಲೇಯ.." ಶಮಿ ಆಗ ಎಲ್ಲ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದರು.. ನನ್ನ ಮನೆಯಲ್ಲಿ ನನ್ನೊಂದಿಗೆ ವಾಸಿಸುತ್ತಿದ್ದರು... ಆದರೆ ಪಾಕಿಸ್ತಾನದೊಂದಿಗೆ ಫಿಕ್ಸಿಂಗ್ ಆರೋಪ ಕೇಳಿಬಂದು.. ಆ ರಾತ್ರಿ ತನಿಖೆ ನಡೆದಾಗ ನಾನು ಎಲ್ಲವನ್ನೂ ಸಹಿಸಬಲ್ಲೆ, ಆದರೆ ನನ್ನ ದೇಶಕ್ಕೆ ದ್ರೋಹ ಬಗೆದ ಆರೋಪಗಳನ್ನು ಸಹಿಸಲು ಸಾಧ್ಯವಿಲ್ಲ ಎಂದ ಶಮಿ ತನ್ನ ಜೀವನವನ್ನು ಕೊನೆಗೊಳಿಸಲು ಬಯಸಿದ್ದರು..  

3 /6

 "ಆ ರಾತ್ರಿ ಅವರು ಆತ್ಮಹತ್ಯಗೆ ಯತ್ನಿಸಿದ್ದರು.. ಬೆಳಿಗ್ಗೆ 4 ಗಂಟೆ ಸುಮಾರಿಗೆ ನೀರು ಕುಡಿಯಲು ಎದ್ದೆ.. ನಾನು ಅಡುಗೆಮನೆಯ ಕಡೆಗೆ ಹೋಗುತ್ತಿದ್ದೆ, ಅವನು ಬಾಲ್ಕನಿಯಲ್ಲಿ ನಿಂತಿರುವುದನ್ನು ನೋಡಿದೆ. ಅಂದು ನಾವು 19 ನೇ ಮಹಡಿಯಲ್ಲಿ ವಾಸಿಸುತ್ತಿದ್ದೇವು.. ಆ ದಿನ ರಾತ್ರಿ ದೊಡ್ಡ ಅನಾಹುತ ತಪ್ಪಿತು.. ಅವರ ಮನಸ್ಸಲ್ಲಿ ಏನು ಓಡುತ್ತಿದೆ ಎಂದು ಅರಿತೆ.. ಅದು ಶಮಿ ಜೀವನದ ಸುದೀರ್ಘ ರಾತ್ರಿ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿಕೊಂಡಿದ್ದರು.   

4 /6

ಇನ್ನು ವಿಶ್ವಕಪ್ ಇತಿಹಾಸದ ಬಗ್ಗೆ ಮಾತನಾಡುವುದಾದರೆ.. ಉತ್ತಮ ಪ್ರದರ್ಶನ ತೋರಿದ ಬೌಲರ್‌ಗಳಲ್ಲಿ ಮೊಹಮ್ಮದ್ ಶಮಿ ಮುಂಚೂಣಿಯಲ್ಲಿದ್ದಾರೆ. ಟೀಂ ಇಂಡಿಯಾದ ಬೌಲರ್ ಮೊಹಮ್ಮದ್ ಶಮಿ ಇಡೀ ವಿಶ್ವಕಪ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ.  

5 /6

ಶಮಿ ವಿಶ್ವಕಪ್‌ನಲ್ಲಿ 55 ವಿಕೆಟ್‌ಗಳನ್ನು ಕಬಳಿಸಿದ ಭಾರತೀಯ ಬೌಲರ್ ಆಗಿ ಇತಿಹಾಸ ನಿರ್ಮಿಸಿದರು. ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಏಷ್ಯಾದ ದೇಶಗಳ ಬೌಲರ್‌ಗಳ ಪಟ್ಟಿಯಲ್ಲಿ ಶಮಿ ಮೂರನೇ ಸ್ಥಾನದಲ್ಲಿದ್ದಾರೆ.   

6 /6

ವಿಶ್ವಕಪ್‌ನಲ್ಲಿ ನಾಲ್ಕು ಬಾರಿ ಪ್ರತಿ ಪಂದ್ಯದಲ್ಲಿ ಐದು ವಿಕೆಟ್ ಪಡೆದ ಏಕೈಕ ಬೌಲರ್ ಶಮಿ. ಅವರ ಉತ್ತಮ ಪ್ರದರ್ಶನದ ಹೊರತಾಗಿಯೂ, ಕಳೆದ ಮೂರು ಐಸಿಸಿ ಟೂರ್ನಮೆಂಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾದ 11 ಆಟಗಾರರಲ್ಲಿ ಸ್ಥಾನ ಪಡೆಯುವುದು ಅವರಿಗೆ ತುಂಬಾ ಕಷ್ಟಕರವಾಗಿತ್ತು.