ನವದೆಹಲಿ: ಪಂಕಜ್ ಅಡ್ವಾಣಿ ದೀರ್ಘಕಾಲದಿಂದ ಭಾರತದಲ್ಲಿ ಕ್ರೀಡಾ ಪಂದ್ಯಗಳನ್ನು ಆಡುತ್ತಿದ್ದಾರೆ ಮತ್ತು ಈ ವರ್ಷ ಹಲವಾರು ಜಾಗತಿಕ  ಟೂರ್ನಿಗಳನ್ನು ಗೆಲ್ಲುವುದರ ಮೂಲಕ ತಮ್ಮ ಹೆಸರನ್ನು ಮತ್ತೆ ಸ್ಥಿರಸ್ಥಾಯಿಗೊಳಿಸಿದ್ದಾರೆ.


COMMERCIAL BREAK
SCROLL TO CONTINUE READING

32 ವರ್ಷ ವಯಸ್ಸಿನವರು ಪಂಕಜ್ ಕಳೆದ ಒಂದು  ದಶಕದಲ್ಲಿ ಬಿಲಿಯರ್ಡ್ಸ್ ಮತ್ತು ಸ್ನೂಕರ್ಗಳನ್ನು ಪರಿಣಾಮಕಾರಿಯಾಗಿ ಆಟವಾಡುತ್ತಿದ್ದಾರೆ .ಇದರ ಪರಿಣಾಮವಾಗಿ 2017ರಲ್ಲಿ 18 ನೇಯ ವಿಶ್ವ ಚಾಂಪಿಯನ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.  


ಜುಲೈ ತಿಂಗಳಲ್ಲಿ, ಕಿರ್ಗಿಸ್ತಾನ್ನಲ್ಲಿ ನಡೆದ ಏಷ್ಯನ್ ಟೀಮ್ ಸ್ನೂಕರ್ ಚಾಂಪಿಯನ್ಷಿಪ್ನ ಫೈನಲ್ಸ್ನಲ್ಲಿ ಭಾರತ ಎ ತಂಡವನ್ನು ಅಡ್ವಾಣಿ ಮುನ್ನಡೆಸಿದರು. ಅಡ್ವಾಣಿ, ಲಕ್ಷ್ಮಣ್ ರಾವತ್, ಮಲ್ಕೀತ್ ಸಿಂಗ್ ಒಳಗೊಂಡ ವಿಜೇತ ತಂಡ ಪಾಕಿಸ್ತಾನವನ್ನು 3-0 ಅಂತರದಿಂದ ಸೋಲಿಸಿತು.


ಆಗ ಪಾಕಿಸ್ತಾನದ ಪಂದ್ಯದ ಬಗ್ಗೆ ಪತ್ರಕರ್ತರು  ಪ್ರಶ್ನೆ ಕೇಳಿದಾಗ ಉತ್ತರಿಸಿದ ಪಂಕಜ್, ಪ್ರತಿ ಎದುರಾಳಿಯು ನಮಗೆ ಸಮಾನ ಆದರೆ ಒತ್ತಡ ಮತ್ತು ನಿರೀಕ್ಷೆಗಳ ದೃಷ್ಟಿಯಲ್ಲಿ  ಪಾಕಿಸ್ತಾನದ ವಿರುದ್ಧ ಹೆಚ್ಚಾಗುತ್ತದೆ ಎಂದು ಅಡ್ವಾಣಿ ಹೇಳಿದರು. ಪಂಕಜ್ ಅಡ್ವಾಣಿ ರಾಷ್ಟ್ರೀಯ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಪ್ರಶಸ್ತಿಗಳನ್ನು ಹಿಡಿದಿರುವ ಏಕೈಕ ಭಾರತೀಯ ಪುರುಷ ಆಟಗಾರ ಎನ್ನುವ ದಾಖಲೆ ಅವರ ಹೆಸರಿನಲ್ಲಿದೆ.


ಅಡ್ವಾನಿಯಯವರ ಕ್ರೀಡೆಯಲ್ಲಿಯೇ ಹಲವರು ಸಾಧನೆ ಮಾಡಿದ್ದಾರೆ .ಅದರಲ್ಲಿ  ಸಿಂಗಪುರ್ನಲ್ಲಿ ನಡೆದ ವಿಶ್ವ ಮಹಿಳಾ ಸ್ನೂಕರ್ ಚಾಂಪಿಯನ್ಶಿಪ್ನಲ್ಲಿ  40 ವರ್ಷ ವಯಸ್ಸಿನ ವಿದ್ಯಾ ಪಿಳ್ಳೈ ಅವರ ಬೆಳ್ಳಿ ಪದಕವನ್ನು ಹೊಂದಿದ್ದಾರೆ. ಕಮಲ್ ಚಾವ್ಲಾ ಅವರು ವಿಶ್ವ 6 ರೆಡ್ಸ್ ಸ್ನೂಕರ್ ಚ್ಯಾಂಪಿಯನ್ಶಿಪ್ನಲ್ಲಿ ತಮ್ಮ ಮೊದಲ ಫೈನಲ್ ತಲುಪುವ ಮೂಲಕ ಸಾಧನೆ ಮಾಡಿದ್ದಾರೆ  ಆದರೆ ಫೈನಲ್ ನಲ್ಲಿ  ವೇಲ್ಸ್ನ ಹಾಲಿ ಚಾಂಪಿಯನ್ ಡ್ಯಾರೆನ್ ಮೋರ್ಗಾನ್ ವಿರುದ್ಧ 6-4 ಅಂತರದಲ್ಲಿ ಸೋಲನುಭವಿಸಿದರೂ, ಚವ್ಲಾ ಅವರು ಬೆಳ್ಳಿ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾದರು.


ಆದರೆ ಇವರ್ಯಾರು ಕೂಡಾ ಅಡ್ವಾಣಿಯ ಸಾಧನೆ ಹತ್ತಿರಕ್ಕೂ ಸುಳಿಯಲಾರರು ಎನ್ನುವುದು ಅಡ್ವಾಣಿಯವರ ಕ್ರೀಡಾ ಶ್ರೇಷ್ಠತೆಯನ್ನು ಎತ್ತಿ ತೋರಿಸುತ್ತದೆ. ಇತ್ತೀಚಿಗೆ ಪಂಕಜ್ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ನಲ್ಲಿ ಇಂಗ್ಲೆಂಡ್ನ ಕಮಾನು-ಎದುರಾಳಿ ಮೈಕ್ ರಸೆಲ್ ಅವರನ್ನು ಸೋಲಿಸಿದ ನಂತರ ಅಡ್ವಾಣಿ ಅವರು ತಮ್ಮ 17 ನೇ ವಿಶ್ವ ಪ್ರಶಸ್ತಿಯನ್ನು ಗೆದ್ದುಕೊಂಡರು.